ವಿಶೇಷ

ಈ ಊರಿನಲ್ಲಿ ಬೀದಿ ಕಸ ಗುಡಿಸಿದರೆ ಪ್ರತಿದಿನ 5 ಕ್ಯಾನ್ ಬಿಯರ್ ಮತ್ತು 850 ರೂಪಾಯಿ ಹಣವನ್ನು ಸರ್ಕಾರ ನೀಡುತ್ತದೆ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ ಊರಿನಲ್ಲಿ ಬೀದಿ ಕಸ ಗುಡಿಸಿದರೆ ಪ್ರತಿದಿನ 5 ಕ್ಯಾನ್ ಬಿಯರ್ ಮತ್ತು 850 ರೂಪಾಯಿ ಹಣವನ್ನು ಸರ್ಕಾರ ನೀಡುತ್ತದೆ.

 

 

ಮದ್ಯಪಾನ ಮಾಡುವವರಿಗೊಂದು ಬಂಪರ್ ಆಫರ್ ಒಂದು ಬಂದಿದೆ. ಅದೇನಪ್ಪ ಅಂದ್ರೆ ಈ ಊರಿನಲ್ಲಿ ಬೀದಿಯನ್ನು ಗುಡಿಸಿ ಸ್ವಚ್ಛಗೊಳಿಸಿದರೆ 5 ಬಾಟೆಲ್ ಬಿಯರ್ ಮತ್ತು 13 ಡಾಲರ್ ನಷ್ಟು ಹಣ ಕೊಡಲಾಗುತ್ತದೆ. ಯಾವದಪ್ಪ ಆ ಊರು ಅಂತೀರಾ? ಮುಂದೆ ಓದಿ.

 

 

ಜರ್ಮನಿಯ ಒಂದು ಪುಟ್ಟ ಗ್ರಾಮದಲ್ಲಿ ಮದ್ಯಪಾನಿಗಳು ಹೊಡೆದಾಟ, ಪರಸ್ಪರ ಬೈಗುಳ ಮತ್ತು ಮಹಿಳೆಯರನ್ನು ಅವಾಚ್ಯ ಪದಗಳಿಂದ ಬಯ್ಯುವುದರಲ್ಲಿ ಯಾವಾಗಲು ನಿರತರಾಗಿರುತ್ತಿದ್ದರು. ಇದನ್ನು ಗಮನಿಸಿದ ಆ ಗ್ರಾಮಕ್ಕೆ ಸಂಭಂದಿಸಿದ ಸ್ಥಳೀಯ ಸಂಸ್ಥೆಯು ಮದ್ಯವ್ಯಸನಿಗಳಿಗೆ ಬುದ್ದಿಕಲಿಸಬೇಕು ಎಂಬ ಕಾರಣಕ್ಕಾಗಿ ಗ್ರಾಮದ ಬೀದಿಗಳನ್ನ ಗುಡಿಸಿ ಸ್ವಚ್ಛಗೊಳಿಸಿದರೆ ಪ್ರತಿ ದಿನ 5 ಬಾಟೆಲ್ ಬಿಯರ್ ಮತ್ತು 13 ಡಾಲರ್ ಹಣವನ್ನು ನೀಡಲಾಗುತ್ತದೆ ಎಂದು ಘೋಷಿಸಿದೆ.

 

 

ಈ ವಿಷಯವನ್ನು ತಿಳಿದ ಆ ಊರಿನ ಮದ್ಯವ್ಯಸನಿಗಳು ಬೆಳ್ಳಂ ಬೆಳಿಗ್ಗೆ ಎದ್ನೋ ಬಿದ್ನೋ ಅಂತ ನಗರದ ಬೀದಿಗಳಲ್ಲಿ ಕೈಯಲ್ಲಿ ಬಿಯರ್ ಮತ್ತು ಸಿಗರೇಟು ಹಿಡಿದು ಸ್ವಚ್ಚಗೊಳಿಸಲು ಆರಂಭಿಸಿದ್ದಾರೆ. ಯಾವಾಗಲು ಮದ್ಯ ಕುಡ್ಕೊಂಡೇ ಕಾಲ ಕಳೆಯುತ್ತಿದ್ದ ಇಂತಹ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಇಂತಹ ಯೋಜನೆ ಜಾರಿಗೆ ತರಲಾಗಿದೆ ಎಂದು ರೇನ್‌ಬೋ ಫೌಂಡೇಶನ್ ಮುಖ್ಯಸ್ಥ ಗೆರ್ರಿ ಹೊಲ್ಟರ್‌ಮೆನ್ ತಿಳಿಸಿದ್ದಾರೆ.

 

 

ಮಧ್ಯವ್ಯಸನಿಗಳನ್ನು ತಲಾ 10 ಜನರನ್ನೊಳಗೊಂಡ ಎರಡು ಗುಂಪುಗಳಾಗಿ ವಿಂಗಡಿಸಿ ತಂಡ ವಾರದ ಆರಂಭಿಕ ಮೂರು ದಿನಗಳವರೆಗೆ ಮೊದಲ ತಂಡ ಕಾರ್ಯನಿರ್ವಹಿಸಲಿದೆ ನಂತರದ ಮೂರು ದಿನಗಳಲ್ಲಿ ಎರಡನೇ ತಂಡ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಗೊಳ್ಳುತ್ತವೆ. ಬೆಳಿಗ್ಗೆ 9 ಯಿಂದ ಸ್ವಚ್ಛತಾ ಕಾರ್ಯ ಪ್ರಾರಂಭವಾಗುತ್ತದೆ ಎಂದು ಗೆರ್ರಿ ಹೊಲ್ಟರ್‌ಮೆನ್ ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top