fbpx
ಕನ್ನಡ

ಗೋವಾ ಕನ್ನಡಿಗರ ಮನೆಗಳನ್ನ ದ್ವಂಸಗೊಳಿಸಿ ಮತ್ತೊಮ್ಮೆ ದಬ್ಬಾಳಿಕೆ ಪ್ರದರ್ಶಿಸಿದ ಗೋವಾ ಬಿಜೆಪಿ ಸರ್ಕಾರ:

ಗೋವಾ ಕನ್ನಡಿಗರ ಮನೆಗಳನ್ನ ದ್ವಂಸಗೊಳಿಸಿ ಮತ್ತೊಮ್ಮೆ ದಬ್ಬಾಳಿಕೆ ಪ್ರದರ್ಶಿಸಿದ ಗೋವಾ ಬಿಜೆಪಿ ಸರ್ಕಾರ:

 

 

ಯಾವಾಗಲೂ ಕನ್ನಡಿಗರ ವಿರುದ್ಧ ಕತ್ತಿ ಮಸೆಯುವ ಗೋವಾ ಸರ್ಕಾರ ಕಳೆದ ಹಲವು ವರ್ಷಗಳಿಂದ ಗೋವಾದಲ್ಲಿ ವಾಸವಿರುವ ಕನ್ನಡಿಗರನ್ನು ತೆರವುಗೊಳಿಸಿ ಮನೆಗಳನ್ನು ದ್ವಾಂಸಮಾಡುವ ಮೂಲಕ ಮತ್ತೊಮ್ಮೆ ದಬ್ಬಾಳಿಕೆ ಪ್ರದರ್ಶಿಸಿದೆ. ಸದ್ಯ ಗೋವಾದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರ ಜೆಸಿಬಿ ಯಂತ್ರಗಳನ್ನು ತರಿಸಿ ಬಸವಣ್ಣನ ದೇಗುಲ ಸೇರಿ 55 ಕನ್ನಡಿಗರ ಮನೆಗಳನ್ನು ದ್ವಂಸಗೊಳಿಸಿದೆ.

 

 

ಜಿಲ್ಲಾಧಿಕಾರಿ, ತಹಶಿಲ್ದಾರ್‌, ನಗರಪಾಲಿಕೆಯ ಅಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ 500 ಕ್ಕೂ ಹೆಚ್ಚು ಬಿಗಿ ಪೊಲೀಸ್ ಭದ್ರತೆಯಲ್ಲಿ, ಸುಮಾರು 6 ಜೆಸಿಬಿ ಹಾಗೂ 10 ಟಿಪ್ಪರ್‌ಗಳ ಸಹಾಯದಿಂದ ಮಕ್ಕಳು, ಮಹಿಳೆಯರು, ವಯೋವೃದ್ಧರು ಯಾರನ್ನೂ ಲೆಕ್ಕಿಸದೆ ಮನೆಗಳಲ್ಲಿದ್ದ ಸಾಮಾನುಗಳನ್ನು ಹೊರಹಾಕಿ, ಮನೆಗಳನ್ನು ಮತ್ತು ಬಸವಣ್ಣನ ದೇವಾಲಯನ್ನು ತೆರವುಗೊಳಿಸಿದ್ದಾರೆ. ಮನೆ ಕಳೆದುಕೊಂಡ ಕನ್ನಡಿಗರ ಆಕ್ರಂದನ ಮುಗಿಲು ಮುಟ್ಟಿದೆ. ಕನ್ನಡಿಗರು ಇದೀಗ ಮುಂದೇನು ಎಂದು ಕಂಗಾಲಾಗಿದ್ದಾರೆ.

 

 

 

ಯಾವಾಗಲೂ ನಾವೆಲ್ಲಾ ಮೊದಲು ಭಾರತೀಯರು ಅಂಥ ಹೇಳುತಿದ್ದ ಬಿಜೆಪಿಯ ನಾಯಕರು ಈಗ ಎಲ್ಲಿದ್ದಾರೆ…… ಏಕೆ ಕನ್ನಡಿಗರು ಯಾರು ಭಾರತೀಯರಲ್ಲವೇ? ಹಿಂದೂಗಳ ಮೇಲೆ ಹಲ್ಲೆಯಾದ ಘಟನೆಗೆ ಮಂಗಳೂರು ಚಲೋ ಕೈಗೊಂಡಿದ್ದ ಬಿಜೆಪಿ ನಾಯಕರು ಈಗ “ಗೋವಾ ಚಲೋ” ಮಾಡ್ರಪ್ಪ ಯಾಕಂದ್ರೆ ಗೋವಾದಲ್ಲೋ ಹಿಂದೂ ದೇವಾಲಯ ಹೊಡೆದುಹಾಕಿದ್ದಾರೆ. ಒಂದು ವೇಳೆ ಹಾಗೆ ಮಾಡುದ್ರೆ ಕನ್ನಡಿಗರ ಬೆಂಬಲ ನಿಮಗಿದೆ ಇದನ್ನು ನೀವು ಮಾಡಲ್ಲ ಏಕೆಂದರೆ ನಿಮಗೆ ಕನ್ನಡಿಗರ ಹಿತಕ್ಕಿಂತ ಹಿಂದಿವಾಲಾ ಹೈಕಮಾಂಡ್ ಅಧಿಕಾರ ಮುಖ್ಯ..ಯಾವುದಾದರು ಕನ್ನಡ ಪರ ಕೆಲಸ ಮಾಡುವಾಗ ನಾವೆಲ್ಲರೂ ಭಾರತೀಯರು,,ನಾವೆಲ್ಲಾ ಭಾರತೀಯ ಒಂದೇ ಎಂದು ಹೇಳ್ತಿದ್ದೊರು ಈಗ ಬರಬೇಕು. ಏಕೆಂದರೆ ಗೋವಾದಲ್ಲಿರುವ ಕನ್ನಡಿಗರು ಭಾರತೀಯರಲ್ಲವೇ?

 

 

ಈ ಕನ್ನಡಿಗರ ಮನೆ ಉಳಿಸಿಕೊಳ್ಳಲು ಹೋರಾಟ ನಡೆಸಲು ಯಾರೂ ಮುಂದೆ ಬಾರದಿರುವುದು ಖೇದಕರ ಸಂಗತಿ. ಈ ದುರಭಿಮಾನ ದೇಶದ ಏಕತೆಗೆ ಅಪಾಯ ಎಂಬುದನ್ನು ಕೇಂದ್ರ ಸರ್ಕಾರ ಪರಿಗಣಿಸಿ ಗೋವಾ ಸರ್ಕಾರಕ್ಕೆ ಇಂತಹ ಕ್ರಮ ನಿಲ್ಲಿಸುವಂತೆ ಹಾಗೂ ಆಗಿರುವ ತಪ್ಪನ್ನು ತಿದ್ದಿಕೊಳ್ಳುವಂತೆ ಕನ್ನಡಿಗರು ಆದೇಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top