fbpx
ವಿಶೇಷ

ನಿಮಗೆ ಕೆಲಸ ಮಾಡಿ ಮಾಡಿ ಬೇಜಾರಾಗಿದ್ರೆ ಈ ಕೆಲಸಗಳು ನೋಡಿ ಆಮೇಲೆ ನೀವ್ ಇವಾಗ ಮಾಡ್ತಿರೋ ಕೆಲಸಾನೇ ಬೆಸ್ಟು ಅಂತೀರಾ ..

ನಿಮಗೆ ಕೆಲಸ ಮಾಡಿ ಮಾಡಿ ಬೇಜಾರಾಗಿದ್ರೆ ಈ ಕೆಲಸಗಳು ನೋಡಿ ಆಮೇಲೆ ನೀವ್ ಇವಾಗ ಮಾಡ್ತಿರೋ ಕೆಲಸಾನೇ ಬೆಸ್ಟು ಅಂತೀರಾ ..

ಜೀವನಾನೇ ಸಾಕು ಇನ್ನು ನಾನು ಈ ಕೆಲಸ ಮಾಡಲ್ಲ ಅಂತೇನಾದ್ರೂ ನೀವು ಅಂದ್ಕೊಂಡಿದ್ರೆ ಈ ವಿಷಯಗಳು ಒಂದ್ಸರಿ ತಿಳ್ಕೊಳಿ

ಇತಿಹಾಸದಲ್ಲಿ ಈ ಕೆಲಸಗಳ ಬಗ್ಗೆ ತಿಳ್ಕೊಂಡ್ರೆ ಅಪ್ಪಾ ದೇವ್ರೇ ಸದ್ಯ ನಾನ್ ಈ ಕೆಲಸ ಮಾಡ್ತಿಲ್ಲ ಅಂದೇ ಅಂತೀರಾ ..

ಈಜಿಪ್ಟ್ ನ ಮಮ್ಮಿ ಮಾಡುವ ಕೆಲಸಗಾರರು

 

 

ಈಜಿಪ್ಟ್ ನ ಮಮ್ಮಿ ಮಾಡುವ ಕೆಲಸಗಾರರು ಆ ಕಾಲದಲ್ಲಿ ಭಾರಿ ಬೇಡಿಕೆ ಇತ್ತು , ಇವರ ಕೆಲಸ ಏನಪ್ಪಾ ಅಂದ್ರೆ ಸತ್ತ ಶವಗಳ ಒಳ ಭಾಗ ತೆಗೆದು ಒಣ ಹಾಕ ಬೇಕಿತ್ತು
ಆಮೇಲೆ ಮೂಗಿನ ಹೊಳ್ಳೆಯಿಂದ ಮೆದುಳನ್ನು ತಗೆದು ಹಾಕಿ , ಮಮ್ಮಿ ಮಾಡಬೇಕಿತ್ತು ಹೀಗೆ ಮಾಡುವಾಗ ದಿನಗಟ್ಟಲೆ ಅಲ್ಲೇ ಹೆಣಗಳ ಮಧ್ಯ ಬದುಕ್ಬೇಕಾದ ಪರಿಸ್ಥಿತಿ ಬಂದಿತ್ತು , ಈ ಜನರನ್ನ ತುಂಬಾ ಕೀಳಾಗಿ ನೋಡ್ತಿದ್ರು ಬೇರೆಯವ್ರು.

ಪಾಪ ಕಳೆಯೋರು

 

 

19 ನೇ ಶತಮಾನದಲ್ಲಿ ಈ ಪದ್ಧತಿ ಜಾರಿ ಇತ್ತು ಸತ್ತವರ ಆತ್ಮ ಶುದ್ದಿ ಮಾಡ್ಬೇಕಿತ್ತಂತೆ, ಈ ಕೆಲಸ ಮಾಡ್ತಿದ್ದ ಮನುಷ್ಯರು ಹೆಣಗಳ ಪಾಪನಾ ಅವರ ಮೇಲೆ ಹಾಕೋಬೇಕಿತ್ತಂತೆ ಹೀಗೆ ಮಾಡೋವಾಗ ಹೆಣಗಳ ಜೊತೆ ಮಲಗೋದು , ಊಟ ತಿನ್ನೋದು ಮಾಡ್ಬೇಕಿತ್ತು ಈ ಕೆಲಸ ಮಾಡೋವಾಗ ಹೇಸಿಗೆ ಬರೋದು ಆದರೂ ಬಡವರು ಹೊಟ್ಟೆಗೆ ಊಟ ಇಲ್ದೋರು ಈ ಕೆಲಸ ಮಾಡ್ತಿದ್ರು ಹಾಗೆ ಇವರಿಗೆ ಸಿಗ್ತಿದ್ದ ಸಂಬಳ ತುಂಬಾನೇ ಕಮ್ಮಿ ಇತ್ತು .

ಟ್ಯಾನ್ ಮಾಡುವವರು

 

 

ಪ್ರಾಣಿ ಸಾಯಿಸಿ ಅದರ ಚರ್ಮವನ್ನ ತೆಗೆಯೋದು ಈ ಕೆಲಸ ಮಾಡೋವಾಗ ಸಿಕ್ಕಾಪಟ್ಟೆ ವಾಸನೆ ಬರುತ್ತೆ , ಎಲ್ಲ ಕ್ರಿಯೆ ಆದ್ಮೇಲೆ ಆ ಚರ್ಮಾನ ಬ್ಯಾಗ್ , ಬಟ್ಟೆ , ಪರ್ಸ್ ,ಬೆಲ್ಟ್ ಹೀಗೆ ಎಲ್ಲ ವಸ್ತುಗಳು ಮಾಡ್ತಾರೆ ಆಮೇಲೆ ಪ್ರಾಣಿ ಕೂದಲು ತೆಗೆದು ಮೂತ್ರದಲ್ಲಿ ನೆನೆಸಬೇಕು , ಹೀಗೆ ಮಾಡೋವಾಗ ವಾಸನೆ ತಡೆಯೋಕೇ ಆಗ್ತಿರಲ್ಲ ಆದ್ರೂ ಹೊಟ್ಟೆ ಪಾಡು ,
ಆ ಮೇಲೆ ಆ ಚರ್ಮ ಒಣಗಿಸಿ , ನಾಯಿ ಮಲ ನ ತೊಟ್ಟಿಲಿ ಕಲಸಿ ಇಟ್ಟಿರೋ ನೀರಲ್ಲಿ ತೊಳಿಬೇಕಿತ್ತು ಎಷ್ಟೆಲ್ಲ ಮಾಡಿದ್ರು ಅವರನ್ನ ಕೀಳಾಗಿ ನೋಡ್ತಿದ್ರು ಅವ್ರು ಸತ್ತ ಪ್ರಾಣಿಗಳ ಜೊತೆ ಗುಹೆಲಿ ಮಲಗ್ತಿದ್ರು .

ಜಿಗಣೆ ಹಿಡಿಯೋರು

 

೧೯ ನೇ ಶತಮಾನದಲ್ಲಿ ಜಿಗಣೆ ಹಿಡಿಯೋರಿಗೆ ತುಂಬಾ ಡಿಮ್ಯಾಂಡ್ ಇತ್ತು , ಹೀಗೆ ಮಾಡೋವಾಗ ನದಿ ಕೆರೆ ಬಾವಿ ನೋಡ್ದನ್ಗೆ ಇಳಿಬೇಕಿತ್ತು , ತುಂಬಾ ರಕ್ತ ಹೋಗೋ ಪರಿಸ್ಥಿತಿ ಬರ್ತಿತ್ತು .

 

ರಾಜ ಕುಮಾರನ ಸೇವಕ

 

 

ರಾಜ ಕುಮಾರನ ಜೊತೆ ಆಟ ಆಡ್ಸಿ, ನಕ್ಕಿ ನಲ್ಸಿ , ರಾಜ ಕುಮಾರ ಏನೇ ತಪ್ಪು ಮಾಡಿದ್ರು ಇವ್ನಿಗೆ ಒದೆ ಬೀಳೋದು .

ಹೆಣಗಳ ಕಳ್ಳರು

 

 

ಸತ್ತ ಹೆಣಗಳು ಆ ಕಾಲದಲ್ಲಿ ತುಂಬಾ ಬೇಡಿಕೆ ಇತ್ತು ಯಾಕೆಂದ್ರೆ ಮೆಡಿಕಲ್ ಕಾಲೇಜುಗಳಿಗೆ ಹೆಣಗಳು ಸಿಕ್ತಿರಲಿಲ್ಲ ಆಗ ಹೂತಿರೋ ಹೆಣಗಳನ್ನ ಕದ್ದು ತರೋ ಕೆಲಸಗಳನ್ನ ಮಾಡ್ತಿರ್ತಾರೆ ಹೀಗೆ ಮಾಡೋ ಹೆಣ್ಗಳ ಕಳ್ಳರಿಗೆ ಕೈ ತುಂಬಾ ದುಡ್ಡು ಕೊಡೋರು ಅಷ್ಟೇ ಅಲ್ಲದೆ ಯಾವ್ದಾದ್ರು ದೇಹದ ಭಾಗ ಸಿಕ್ರು ಸಾಕು ಅದಕ್ಕೂ ದುಡ್ಡು ಕೊಡೋರು , ಆಮೇಲೆ ಸತ್ತ ಹೆಣದ ಜೊತೇಲಿರೋ ಯಾವದೇ ವಸ್ತುಗಳನ್ನ ಕದಿ ಬಾರ್ದು ಅನ್ನೋದು ಇವರಿಗೆ ಹೇಳ್ತಿದ್ರು , ಒಂದು ವೇಳೆ ಹೆಣ ಕದಿಯೋ ವಾಗ ಸಿಕ್ಕಾಕೊಂಡ್ರೆ ಅಷ್ಟೇ ಮುಗಿತು ಕಥೆ .

ಮೂಳೆ ಮಾರೋರು

 

 

ಸತ್ತ ಹೆಣಗಳ ಮೂಳೆ , ಮೋರಿಯಲ್ಲಿ ಅಲ್ಲಿ ಇಲ್ಲಿ ಸಿಕ್ಕ ಮೂಳೆಗಳು ಆಮೇಲೆ ಮಾಂಸದ ಅಂಗಡಿಲಿ ಸಿಕ್ಕೋ ಮೂಳೆಗಳು ಎಲ್ಲ ಸರಿಸಿ ಮಾರೋರು ಇವರಿಗೆ ಒಂದು ಮೂಟೆಗೆ ಇಷ್ಟು ಅಂತ ದುಡ್ಡು ಸಿಕ್ಕೋದು ಆದ್ರೂ ಆ ದುಡ್ಡು ಊಟಕ್ಕೂ ಸಾಕಾಗ್ತಿರ್ಲಿಲ್ಲ .

ಬೆಂಕಿ ಹಚ್ಚೋರು

 

 

ಯುದ್ಧಗಳಲ್ಲಿ ಟ್ಯಾಂಕರ್ , ಬಾಂಬ್ ಹಚ್ಚೋವಾಗ ಮೊದಲು ಬೆಂಕಿ ಹಚ್ಚಿ ಓಡಿ ಬರೋಕೆ ಇವರನ್ನ ಬಳಸ್ಕೊತಿದ್ರು ಇದು ಸಾವು ಬದುಕಿನ ಆಟ , ಬದುಕಿದ್ರೆ ಬದುಕಿದ ಇಲ್ಲ ಅಂದ್ರೆ ಗೋವಿಂದಾ .

ಕೂದ್ಲು ಕಟ್ ಮಾಡೋರು

 

 

ಕೆಲವು ಕಡೆ ಡಾಕ್ಟರ್ಗಳು ಕೆಲವು ಕೆಲಸ ಮಾಡೋಕೆ ಹಿಂದೆ ಮುಂದೆ ಮಾಡೋರು , ಉದಾಹರಣೆಗೆ : ಹಲ್ಲು ಕೇಳೋದು , ಮೂತ್ರ ಕೋಶದಲ್ಲಿ ಗಂಟು , ಊತ , ರಕ್ತ ಕ್ಕೆ ಸಂಬಂಧಿಸಿದ ಖಾಯಿಲೆಗಳು , ಕಾಲು ಕೈ ಬೆರಳು ಕಟ್ ಮಾಡೋದು ಈ ತರ ಇವುಗಳನ್ನೆಲ್ಲ ಆ ಊರಿನ ಅಜಾಮನೇ ಮಾಡ್ಬೇಕಿತ್ತು .

ರಾಜನ ತಿಕ ಒರೆಸೋನು

 

ರಾಜನ ಜೊತೆ ಯಾವಾಗ್ಲೂ ಅವನ ಮಲ ಮೂತ್ರ ಒರೆಸೋಕೆ ಅಂತಾನೆ ಒಬ್ಬ ಇರ್ತಿದ್ದ ಅವನು ರಾಜನ ತಿಕ ಒರೆಸಿ ತೊಳಿಯೋನು ಹಾಗೆ ಮಲ ಮೂತ್ರದ ಪೆಟ್ಟಿಗೆ ಯಾವಾಗ್ಲೂ ಜೊತೇಲಿ ಇಟ್ಕೊಂಡಿರೋರು , ಕಾಲಕಾಲಕ್ಕೆ ರಾಜನ ಮೂತ್ರ ನೋಡಿ ಅವನ ಆರೋಗ್ಯ ಹೇಗಿದೆ ಅಂತಾ ಹೇಳೋದು ಇವರ ಕೆಲಸ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top