fbpx
ಸಮಾಚಾರ

ಮೋದಿ ಸರ್ಕಾರದಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಮ್ಮ ಸೈನಿಕರು 22 ಮಕ್ಕಳನ್ನು ಯಶಸ್ವಿಯಾಗಿ ರಕ್ಷಿಸಿ ಬಿಟ್ರು..

ಮೋದಿ ಸರ್ಕಾರದಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಮ್ಮ ಸೈನಿಕರು 22 ಮಕ್ಕಳನ್ನು ಯಶಸ್ವಿಯಾಗಿ ರಕ್ಷಿಸಿ ಬಿಟ್ರು..

ದೇಶದ ರಕ್ಷಣೆಯ ಹೊಣೆ ಹೊತ್ತಿರುವ ನಮ್ಮ ಸೈನಿಕರ ತಂಡ ಇಂದು ವಿಶ್ವವೇ ಕೊಂಡಾಡುವಂತೆ ಹೆಮ್ಮೆಯ ಮಹತ್ ಕಾರ್ಯವೊಂದನ್ನು ಮಾಡಿದೆ , ದೇಶದ ಗಡೆಯಾಚೆಗೂ ಗುಂಡಿಗೆ ಗಟ್ಟಿಯಾಗಿ ಯಾವುದೇ ಅಳುಕಿಲ್ಲದೆ , ಧೈರ್ಯ ಸಾಹಸ ಪರಾಕ್ರಮಶಾಲಿ ಸೈನಿಕರು ಉಗ್ರರ ಹೆಡೆಮುರಿ ಕಟ್ಟಿದ್ದಾರೆ.

 

 

ವಿಶ್ವಸಂಸ್ಥೆಯ ವತಿಯಿಂದ ಶಾಂತಿಪಾಲನೆಗೆ ಯೋಜನೆಗೊಂಡಿದ್ದ ಸೈನಿಕರು ಉಗ್ರರ ಬಳಿ ಬಂದಿಯಾಗಿದ್ದ 22 ಮಕ್ಕಳನ್ನು ಯಶಸ್ವಿಯಾಗಿ ಕಾಪಾಡಿ ತಮ್ಮ ಗೂಡುಗಳಿಗೆ ಮರಳಲು ಸಹಾಯ ಮಾಡಿದ್ದಾರೆ .

ಕಾಂಗೋ ಗಣರಾಜ್ಯದಲ್ಲಿ ವಿಶ್ವಸಂಸ್ಥೆಯ ವತಿಯಿಂದ ಶಾಂತಿಪಾಲನೆಗೆ ಯೋಜನೆಗೊಂಡಿದ್ದ ನಮ್ಮ ಸೈನಿಕರು ನ್ಯಾಬಿವೊಂಡೋ ಪ್ರಾಂತ್ಯದಲ್ಲಿಆಂತರಿಕ ಗಲಭೆಯ ಪರಿಸ್ಥಿತಿ ಬಹಳ ಹೆಚ್ಚಾಗಿದ್ದು ಅಲ್ಲಿನ ಉಗ್ರರು 22 ಮಕ್ಕಳನ್ನು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು , ಬಾರಿ ಶಸ್ತ್ರಾಸ್ತ್ರವನ್ನು ಇರಿಸಿಕೊಂಡಿದ್ದ ಬಂಡುಕೋರರು ಮಕ್ಕಳಿಗೆ ತರಬೇತಿ ನೀಡಿ ಹಾದಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದರು ಉಗ್ರರಿಗೆ ಯಾವುದೇ ಸುಳಿವು ಸಿಗದಂತೆ ಮಕ್ಕಳನ್ನು ಉಗ್ರರ ಹಿಡಿತದಿಂದ ರಕ್ಷಿಸಿಕೊಳ್ಳುವುದು ಸೈನಿಕರಿಗೆ ಬಹಳ ಕಷ್ಟದ ಕೆಲಸವೇ ಆಗಿತ್ತು .
ಮೊದಲು ಹಳ್ಳಿಯಲ್ಲಿದ್ದ ೨೦೦ಕ್ಕೂ ಹೆಚ್ಚಿನ ಕುಟುಂಬಗಳನ್ನು ಬೇರೆಕಡೆಗೆ ವರ್ಗಾವಣೆ ಮಾಡಿ ಆನಂತರ ತಮ್ಮ ಸರ್ಜಿಕಲ್ ಸ್ಟ್ರೈಕ್ ಆಪರೇಷನ್ ಶುರುವಿಟ್ಟುಕೊಂಡರು ,ಈ ಕೆಲಸ ಯಶಸ್ವಿಯಾಗಿ ಮುಗಿದ್ದು ಭಾರತ ವಿಶ್ವಕ್ಕೆ ಮಾದರಿ ರಾಷ್ಟ್ರವಾಗಿದೆ .

 

 

ಈ ಹಿಂದೆ 2015ರಲ್ಲಿ ಕಾಂಗೋದ ಗಣರಾಜ್ಯದ ಪಟ್ಟಣದಲ್ಲಿದ್ದ ೧೨೦ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದರು ಅಷ್ಟು ಸಾಲದು ಎಂಬಂತೆ ಸಣ್ಣ ಮಕ್ಕಳು ಮುದುಕಿಯರು ಎಂದು ನೋಡದೆ ಲೈಂಗಿಕ ಕಿರುಕುಳ ನೀಡಿದ್ದರು .
2009ರಲ್ಲಿಯೇ ಲಾರ್ಡ್ಸ್ ರೆಸಿಟೆನ್ಸ್ ಬಂಡುಕೋರ ಸಂಘಟನೆ ಕಾಂಗೋದಲ್ಲಿ ಸುಮಾರು 321 ನಾಗರಿಕರನ್ನು ಹತ್ಯೆಮಾಡಿದ್ದರು ಹಾಗು ಇನ್ನು ಅನೇಕ ಹೇಯ ಕೃತ್ಯಗಳನ್ನು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top