fbpx
ದೇವರು

ನವರಾತ್ರಿಯಂದು ಮುಖ್ಯ ದ್ವಾರದಲ್ಲಿ ಹೀಗೆ ಮಾಡಿದ್ರೆ ಮತ್ತು ಕೆಲವು ಹೂವುಗಳನ್ನು ಇಟ್ಟರೆ ನಿಮ್ಮ ಅದೃಷ್ಟ ಬದಲಾಗುತ್ತೆ.

ನವರಾತ್ರಿಯಂದು ಮುಖ್ಯ ದ್ವಾರದಲ್ಲಿ  ಹೀಗೆ  ಮಾಡಿದ್ರೆ ಮತ್ತು  ಕೆಲವು ಪುಷ್ಪಗಳನ್ನು ಇಟ್ಟರೆ  ನಿಮ್ಮ  ಅದೃಷ್ಟ ಬದಲಾಗುತ್ತೆ.

 

 

ನವರಾತ್ರಿಯಲ್ಲಿ ಪ್ರತಿದಿನ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಮಾಡಿದ ವ್ರತ ಹಾಗೂ ಪೂಜೆಯಿಂದ ತಾಯಿ ದುರ್ಗೆಯ ಕೃಪೆ ಸದಾ ನಿಮ್ಮ ಮೇಲೆ ನೆಲೆಸಿರುತ್ತದೆ ಎಂಬ ನಂಬಿಕೆಯಿದೆ.ನವರಾತ್ರಿಯಲ್ಲಿ ಮಾಡುವ ಕೆಲ ಕೆಲಸಗಳಿಂದ.ತಾಯಿ ದುರ್ಗಾ ದೇವಿಯ  ಆಶೀರ್ವಾದವೊಂದೇ   ಅಲ್ಲ ಅದರ  ಜೊತೆಗೆ ನಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ.

 

 

ನವರಾತ್ರಿಯ ಸಮಯದಲ್ಲಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಮನೆಯ ಮುಖ್ಯ ದ್ವಾರದ ಮುಂದೆ ಸ್ವಸ್ತಿಕ್ ಚಿತ್ರವನ್ನು ಬಿಡಿಸಬೇಕು.ಇದರ ಜೊತೆಗೆ ಗಣೇಶನ ಚಿತ್ರವನ್ನು ಬಿಡಿಸಿ ಇದರಿಂದ ಎಲ್ಲ ಸಂಕಷ್ಟ ದೂರವಾಗುತ್ತದೆ.

 

ನವರಾತ್ರಿಯ ದಿನಗಳಲ್ಲಿ ಮನೆಯ ಮುಖ್ಯ ದ್ವಾರದ ಎದುರು ಮಾವಿನ ಎಲೆ ಹಾಗೂ ಅಶೋಕ ಎಲೆಗಳಿಂದ  ಮಾಡಿದ  ಮಾವಿನ ತೋರಣವನ್ನು ಮನೆಯ ಮುಖ್ಯ ದ್ವಾರಕ್ಕೆ ಹಾಕುವುದರಿಂದ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

 

 

ಮನೆಯ ಮುಖ್ಯ ದ್ವಾರದಲ್ಲಿ ಲಕ್ಷ್ಮೀಯ ಹೆಜ್ಜೆಯನ್ನು ಬಿಡಿಸಿ ,ಪೂಜಿಸಿ ಮನೆಯಲ್ಲಿ ಸದಾ ಸುಖ ಶಾಂತಿ  ನೆಲೆಸುವಂತೆ ಮಾಡುತ್ತದೆ.ನವರಾತ್ರಿಯ ಒಂದು ದಿನ ಲಕ್ಷ್ಮೀ ದೇವಸ್ಥಾನಕ್ಕೆ  ಹೋಗಿ ಕೇಸರಿ ಅಕ್ಕಿಯನ್ನು ಲಕ್ಷ್ಮೀ ದೇವಿಗೆ ಅರ್ಪಿಸಿ.

 

 

ಶಂಖಪುಷ್ಪ –  ಇದು ಬಹಳ ಕಲ್ಯಾಣಕಾರಿ ಪುಷ್ಪವಾಗಿದೆ. ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ.ಇದು ಕುಟುಂಬಸ್ಥರ ನಡುವೆ ಸಾಮರಸ್ಯ ಬೆಳೆಸುತ್ತದೆ.ನವರಾತ್ರಿಯಂದು ಶಂಖಪುಷ್ಪವನ್ನು ಮನೆಗೆ ತಂದು ಬೆಳ್ಳಿ ಪೆಟ್ಟಿಗೆಯಲ್ಲಿಟ್ಟು ಪೂಜಾ ಸ್ಥಳದಲ್ಲಿ ಸ್ಥಾಪನೆ ಮಾಡಿ, ಪೂಜೆ ಮಾಡಿ ಇದು ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ವೃದ್ಧಿಯಾಗುವುದು.

 

 

ಬಾಳೆ ಗಿಡ- ಬಾಳೆ ಗಿಡ ಸುಖ, ಸಂತೋಷ ಶಾಂತಿ  ಮತ್ತು ಸಮೃದ್ಧಿಯ ಸಂಕೇತವಾಗಿದೆ.ನಿಮ್ಮ ಮನೆಯಲ್ಲಿ ಬಾಳೆ ಸಸಿ ತಂದು ಬೆಳೆಸಿ,ಧೂಪ ದೀಪಗಳಿಂದ ಇದನ್ನು ಪೂಜೆ ಮಾಡಿ.

 

 

ಪಾರಿಜಾತ ಎಲೆ- ನವರಾತ್ರಿಯಂದು ಪಾರಿಜಾತ ಎಲೆಯನ್ನು ತಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಸುತ್ತಿಡಿ.ಪೂಜೆ ಮಾಡುವ ಸ್ಥಳದಲ್ಲಿಟ್ಟು ಪೂಜೆ ಮಾಡಿ.ಇದು ನಿಮ್ಮ ಮನೆಯ ಶಾಂತಿ,ಸಂತೋಷವನ್ನು ವೃದ್ಧಿಸಿ ಹೆಚ್ಚಿಸುವುದು.

 

 

ಆಲದ ಮರದ ಎಲೆ- ನವರಾತ್ರಿಯ ದಿನ ಆಲದ ಮರದ ಎಲೆಯನ್ನು ತಂದು ಮನೆಯಲ್ಲಿಡಿ ಇದರ ಮೇಲೆ ಅರಿಷಿನ ಅಥವಾ ಕುಂಕುಮದಿಂದ ಸ್ವಸ್ತಿಕ್ ಚಿತ್ರವನ್ನು ರಚಿಸಿ ನಂತರ ಪೂಜಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top