fbpx
ಮನೋರಂಜನೆ

ದರ್ಶನ್ ಅಭಿಮಾನಿಗಳಿಗೆ ಹೆದರಿಕೊಂಡಿದ್ದರಂತೆ ಅರ್ಜುನ್ ಜನ್ಯ..! ಯಾವ ಕಾರಣಕ್ಕೆ ಗೊತ್ತಾ?

ದರ್ಶನ್ ಅಭಿಮಾನಿಗಳಿಗೆ ಹೆದರಿಕೊಂಡಿದ್ದರಂತೆ ಅರ್ಜುನ್ ಜನ್ಯ..! ಯಾವ ಕಾರಣಕ್ಕೆ ಗೊತ್ತಾ?

 

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಮಿಲನ ಪ್ರಕಾಶ್ ನಿರ್ದೇಶನದ ಬಹುನಿರೀಕ್ಷಿತ ‘ತಾರಕ್’ ಚಿತ್ರ ದಸರಾ ಹಬ್ಬದ ಪ್ರಯುಕ್ತ ನಾಳೆ ಬಿಡುಗಡೆಗೊಳ್ಳುತ್ತಿದೆ. ಈಗಾಗಲೇ ಟ್ರೈಲರ್ ಟೀಸರ್ ಗಳು ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರವನ್ನು ಕಣ್ತುಂಬಿಕೊಳ್ಳಲು ದರ್ಶನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.. ಹೀಗಿರುವಾಗ ಅರ್ಜುನ್ಯ ಜನ್ಯ ದರ್ಶನ್ ಅಭಿಮಾನಿಗನ್ನು ನೋಡಿ ನಾನು ಹೆದರಿಕೊಂಡಿದ್ದೆ ಎಂದು ಹೇಳಿದ್ದಾರೆ. ಜನ್ಯ ಯಾಕ್ ಹಾಗ್ ಹೇಳುದ್ರು ಅಂತ ಯೋಚಿಸುತ್ತಿದ್ದೀರಾ? ಮುಂದೆ ಓದಿ

 

 

‘ತಾರಕ್’ ಚಿತ್ರಕ್ಕೆ ಸ್ವಲ್ಪ ವಿಭಿನ್ನ ರೀತಿಯ ಟ್ಯೂನ್ಸ್ ಕಂಪೋಸ್ ಮಾಡಲು ಮುಂದಾಗಿದ್ದ ಅರ್ಜುನ್ ಜನ್ಯಗೆ ತಾರಕ್’ ಹಾಡುಗಳನ್ನು ದರ್ಶನ್ ರ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೋ, ಏನೋ ಎಂಬ ಭಯ ಮತ್ತು ಆತಂಕ ಇತ್ತಂತೆ ಹೀಗಂತ ಸ್ವತಃ ಅರ್ಜುನ್ಯ ಜನ್ಯರವರೇ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

 

 

ಆದರೆ ತಾರಕ್ ಚಿತ್ರದ ಆಲ್ಬಮ್ ನಲ್ಲಿ ಪೆಪ್ಪಿ ಸಾಂಗ್, ಪಬ್ ಸಾಂಗ್, ರೊಮ್ಯಾಂಟಿಕ್ ಮತ್ತು ಪ್ಯಾಥೋ ಸಾಂಗ್ ಒಳಗೊಂಡಂತೆ ವಿವಿಧ ಬಗೆಯ ಹಾಡುಗಳಿವೆ ಹಾಗಾಗಿ ಈ ಹಾಡುಗಳು ಕೇವಲ ದರ್ಶನ್ ಅಭಿಮಾನಿಗಳಿಗೆ ಮಾತ್ರ ಅಲ್ಲ, ಎಲ್ಲರಿಗೂ ಹಿಡಿಸಿದೆ. ಹೀಗಾಗಿ ಚಿತ್ರಕ್ಕೆ ವಿಭಿನ್ನ ರೀತಿಯ ಸಂಗೀತ ಸಂಯೋಜನೆ ಮಾಡುವಾಗ ಅರ್ಜುನ್ ಜನ್ಯಗಿದ್ದ ಭಯ ಹಾಗೂ ಆತಂಕ ಈಗ ಮಾಯವಾಗಿದೆ.

 

 

ಇದೆ ವೇಳೆ ತಾರಕ್ ಸಿನಿಮಾದ ಬಗ್ಗೆ ಮಾತನಾಡಿದ ಅರ್ಜುನ್ ಜನ್ಯ “ತಾರಕ್ ಚಿತ್ರ ಪಕ್ಕಾ ಕ್ಲಾಸ್ ಸಿನಿಮಾ. ಕುಟುಂಬ ಸಮೇತ ಈ ಚಿತ್ರವನ್ನು ನೋಡಬಹುದು, ದರ್ಶನ್ ಸರ್ ಚಿತ್ರಕ್ಕೆ ಹೊಸ ಮತ್ತು ವಿಭಿನ್ನ ರೀತಿಯ ಮ್ಯೂಸಿಕ್ ಸ್ಟೈಲ್ ಪ್ರಯೋಗ ಮಾಡಲು ನನಗೆ ಅವಕಾಶ ಸಿಕ್ಕಿದ್ದು ಖುಷಿಯಾದ ವಿಚಾರ ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಅರ್ಜುನ್ ಜನ್ಯ.

 

 

ತಾರಕ್ ಚಿತ್ರದಲ್ಲಿ ನಟ ದೇವರಾಜ್ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ತಾರಕ್ ಚಿತ್ರವನ್ನು ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿದ್ದು ದರ್ಶನ್ ಗೆ ನಾಯಕಿಯಾಗಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವತ್ಸವ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಲಕ್ಷ್ಮಣ ದುಷ್ಯಂತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top