fbpx
ಭವಿಷ್ಯ

ಸಿಂಹ ರಾಶಿಯವರ ವ್ಯಕ್ತಿತ್ವ ಹೇಗಿದೆ ಅಂತ ಗೊತ್ತಾ ? ಈ ರಾಶಿಯವರ ವ್ಯಕ್ತಿತ್ವಕ್ಕೂ ರಾಶಿ ನಕ್ಷತ್ರಕ್ಕೂ ಇರುವ ಸಂಬಂಧವೇನು ತಿಳ್ಕೊಳ್ಳಿ..

ಸಿಂಹ ರಾಶಿಯವರ ಗುಣ ಸ್ವಭಾವಗಳು.

 

 

ಸಿಂಹ ಎನ್ನುವ ಹೆಸರೇ ಸೂಚಿಸುವಂತೆ ಸಿಂಹ ರಾಶಿಯ ಪ್ರಾಣಿ ಸಿಂಹವನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಇವರಲ್ಲಿ ರಾಜನ ಗುಣಗಳು ಹೆಚ್ಚಾಗಿ ಇರುತ್ತದೆ.ಆಳ್ವಿಕೆಯ ಗುಣಗಳು ಇದ್ದು ಧೈರ್ಯಶಾಲಿಗಳು, ಯಾರಿಗೂ ಹೆದರುವುದಿಲ್ಲ,ಕುಗ್ಗುವುದಿಲ್ಲ.ಆದರೆ ಸದಾ ಎಲ್ಲರನ್ನು ಎಲ್ಲವನ್ನು ಗಮನಿಸುತ್ತಾರೆ,ಬೇರೆಯವರಿಗೆ ಮಾರ್ಗದರ್ಶಿಯಾಗಿದ್ದಾರೆ.

 

ಸಿಂಹ ರಾಶಿಯವರ ವ್ಯಕ್ತಿತ್ವ ಎಂಥದ್ದು ಎಂದು ಗೊತ್ತಾ ? ರಾಜ ಗಾಂಭೀರ್ಯದಿಂದ ಯಾಕೆ ನಡೆದು ಕೊಳ್ಳುತ್ತಾರೆ ?  ಈ ರಾಶಿಯವರು.ಈ ರಾಶಿಯವರ ವ್ಯಕ್ತಿತ್ವಕ್ಕೂ ರಾಶಿ ನಕ್ಷತ್ರಕ್ಕೂ ಇರುವ ಸಂಬಂಧವೇನು ?

 

ಸಿಂಹ ರಾಶಿಯವರ ಕುರಿತು ಹೇಳಬೇಕಾದ ವಿಷಯ ಅಗಾಧವಾಗಿದೆ.ಹೆಸರೇ ಸೂಚಿಸುವಂತೆ ಸಿಂಹ ರಾಶಿಯವರು ಸಿಂಹದಂತೆ ಗರ್ಜಿಸಬಲ್ಲರು.ಸಂಸ್ಕೃತದಲ್ಲಿ ರೂಢಿಯ  ಅರ್ಥ ಪೂರ್ಣ ಮಾತೊಂದಿದೆ. “ಸ್ವಯಂಸೇವಾ ಮೃಗೇಂದ್ರತಾ” ಎಂದು ತನ್ನ   ಸ್ವಯಂ ಶಕ್ತಿ ಮತ್ತು ಸಾಮರ್ಥ್ಯಗಳಿಂದ ಸಿಂಹ ಕಾಡಿನ ಇಂದ್ರ ಮೃಗಗಳ ರಾಜನಾಗಿ ಮೆರೆಯುತ್ತಿದೆ ಎಂದು ಇದರ ಅರ್ಥ.ಬಹು ಬಲಾಢ್ಯವಾದ  ಆನೆಯ ದಂಡನ್ನೇ ಸಿಂಹ ತನ್ನ ಭೇಟೆಯಾಡುವ ಕೌಶಲ್ಯ,ಯುಕ್ತಿ,ಸಾಹಸಗಳಿಂದಾಗಿ ಜಯಿಸಬಲ್ಲ ಹಿರಿಮೆಯಿದೆ.

ಸಿಂಹರಾಶಿಯ ವ್ಯಕ್ತಿಗಳು ಹೆಸರಿಗೆ ತಕ್ಕ ಚಹರೆಯವರು ಎನ್ನಬಹುದು.ಅಗಲವಾದ ಎದೆ , ಶ್ರೀಮದ್ಗಾಂಭೀರ್ಯದ ನೆಡೆ ಮೇಳೈಸಿಕೊಂಡಿರುವುದು ಈ ವ್ಯಕ್ತಿಗಳು ಗುಣ ಲಕ್ಷಣಗಳು ಎಂದು ಧಾರಾಳವಾಗಿ ಹೇಳಬಹುದು.

 

 

ಇನ್ನೂ ಅನೇಕ ಅನ್ಯರೀತಿಯ ಸಂರಕ್ಷಣಾ ಪ್ರಭಾವ ,ದುಷ್ಟ ಗ್ರಹಗಳಾದ ರಾಹು, ಕೇತು, ಶನೈಶ್ಚರ ಇತ್ಯಾದಿ ಅನೇಕ  ದೋಷಗಳು ಇದ್ದಲ್ಲಿ ದುರ್ಬಲಕಾಯ,ಕುಬ್ಜತೆಗಳು ಇವರನ್ನು ಬಾಧಿಸಬಹುದು.ಬೇರೆ ದುಷ್ಟ ಭಾದೆಗಳ ಭಾಧಿಸಿದಾಗ ದೇಹವು  ದುರ್ಬಲಾತಿ ದುರ್ಬಲವಾಗುವುದು.

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಬಿಟ್ಟು, ಧರ್ಮಗುರು ದಲೈಲಾಮ,ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ರಾಜೇಶ್ ಖನ್ನಾ,ಎರಡನೇ ಮಹಾಯುದ್ಧದ ನಿರ್ಣಾಯಕ ಸೇನಾನಿ ಚರ್ಚಿಲ್, ಭಾರತದ ಮಾಜಿ ಪ್ರಧಾನಿ ರಾಜೇವ ಗಾಂಧಿ,ಹಠಮಾರಿ ಎಂದೆನಿಸಿದರೂ ಶಿಸ್ತಿಗಾಗಿ ಕಾತರಿಸುತ್ತಿದ್ದರು.

 

 

ಅಪಘಾತದಲ್ಲಿ ಅಸು ನೀಗಿದ ಸಂಜಯ್ ಗಾಂಧಿ,ಚಿತ್ರರಂಗದ ಮಹಾನ್ ತಾರೆ ದಿಲೀಪ ಕುಮಾರ್,ಕವಿ ಕಾದಂಬರಿಕಾರ ವಂದೇ ಮಾತರಂ ಎಂಬ ಭಾರತೀಯರ ಪಾಲಿನ ರೋಮಾಂಚಕ ಗೀತೆ ಬರೆದ ಬಂಕಿಮ ಚಂದ್ರ ಚಟರ್ಜಿ.ಉತ್ತಮ ಆಡಳಿತಗಾರ ಎಂದು ಹೆಸರು ಪಡೆಯುತ್ತಿದ್ದಾಗಲೇ ಹಂತಕನ ಗುಂಡೇಟಿಗೆ ಬಲಿಯಾದ ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ, ಇತ್ಯಾದಿ ಹೀಗೆ ಸಿಂಹ ರಾಶಿಯವರ ಪಟ್ಟಿ  ಬೆಳೆಯುತ್ತಲೇ ಹೋಗುತ್ತದೆ.

ಸ್ವಸಾಮರ್ಥ್ಯದ ಸಿದ್ಧಿ ಸೂತ್ರ ಹಿಡಿಯಬಲ್ಲವರೆಲ್ಲರು  ಇವರಾಗಿದ್ದರು ಎಂಬುದನ್ನು ನಾವು ಪ್ರಧಾನವಾಗಿ ಗಮನಿಸಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top