ತಿಂಡಿ ತೀರ್ಥ

ದಸರಾ ಸ್ಪೇಶಲ್  ಗುಲ್ಪಾವೇಟೆ ರೆಸಿಪಿ ಮಾಡುವ ವಿಧಾನ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗುಲ್ಪಾವೇಟಿ ಮಾಡಲು ಬೇಕಾಗುವ ಸಾಮಗ್ರಿಗಳು:

*ತುಪ್ಪ – 9 ಟೇಬಲ್ ಚಮಚ+ ಅಲಂಕಾರಕ್ಕೆ

*ಗೋಧಿ ಹಿಟ್ಟು – 1 ಬೌಲ್

*ಬೆಲ್ಲ – 3/4 ಬೌಲ್

*ನೀರು – 1, 1/4 ಕಪ್

* ತೆಂಗಿನ ತುರಿ – 1/2 ಕಪ್

*ಏಲಕ್ಕಿ ಪುಡಿ – 2, 1/2 ಟೀ ಚಮಚ

ಗುಲ್ಪಾವೇಟಿ ಮಾಡುವ ವಿಧಾನ :

  1. ಒಂದು ಪಾತ್ರೆಯಲ್ಲಿ 3 ಟೇಬಲ್ ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ. 2. ಗೋಧಿ ಹಿಟ್ಟನ್ನು ಸೇರಿಸಿ. 3. ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಅದರ ಬಣ್ಣವು ತಿಳಿ ಹೊಂಬಣ್ಣಕ್ಕೆ ತಿರುಗಬೇಕು. 4. ಇದನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ, ಒಂದೆಡೆ ಇಡಿ. 5. ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಬಿಸಿ ಮಾಡಿ. 6. ತಕ್ಷಣವೇ ನೀರನ್ನು ಸೇರಿಸಿ, ತಳಹಿಡಿಯುವುದನ್ನು ತಪ್ಪಿಸಿ. 7. ಬೆಲ್ಲವನ್ನು ಕರಗಿಸಿ, ಮಧ್ಯಮ ಉರಿಯಲ್ಲಿ 5 ನಿಮಿಷ ಕುದಿಯಲು ಬಿಡಿ. 8. 3 ಟೇಬಲ್ ಚಮಚ ತುಪ್ಪವನ್ನು ಸೇರಿಸಿ. 9. ಹುರಿದುಕೊಂಡ ಹಿಟ್ಟನ್ನು ಸೇರಿಸಿ ಮತ್ತು ಒಲೆಯ ಬೆಂಕಿಯನ್ನು ಆರಿಸಿ. 10. ಚೆನ್ನಾಗಿ ಮಿಶ್ರಗೊಳಿಸಿ ಒಂದು ಮುದ್ದೆಯ ಹದಕ್ಕೆ ತನ್ನಿ. 11. ತೆಂಗಿನ ತುರಿಯನ್ನು ಸೇರಿಸಿ. 12. ನಂತರ 3 ಟೇಬಲ್ ಚಮಚ ತುಪ್ಪವನ್ನು ಮತ್ತೆ ಸೇರಿಸಿ. 13. ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. 14. ನಿಮ್ಮ ಅಂಗೈಗೆ ತುಪ್ಪವನ್ನು ಸವರಿಕೊಳ್ಳಿ. 15. ನಿಮ್ಮ ಅಂಗೈನಿಂದ ಮಿಶ್ರಣವನ್ನು ನಾದಿ. 16. ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಸಣ್ಣ ಉಂಡೆಯನ್ನು ಮಾಡಿ. 17. ಒಂದು ಪ್ಲೇಟ್‍ನಲ್ಲಿ ಹಾಕಿ, ಸವಿಯಲು ನೀಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top