ಬಾಯಿಹುಣ್ಣಾಗಿ ಎನ್ನೋ ತಿನ್ನಕ್ಕಾಗ್ತಿಲ್ಲ ಅನ್ನೋರು ಈ ಮನೆಮದ್ದುಗಳನ್ನ ಬಳಸಿ ಪರಿಹಾರಕಂಡುಕೊಳ್ಳಿ..
ಕೆಲವರಿಗೆ ಆಗಾಗ ಬಾಯಿಯ ಒಳಭಾಗದಲ್ಲಿ ಕಾಣಿಸಿಕೊಳ್ಳುವ ಬಾಯಿಹುಣ್ಣು (Mouth Ulcer)ಏನನ್ನೂ ತಿನ್ನಲೂ, ಕುಡಿಯಲೂ ಹಾಗೂ ಮಾತನಾಡಲೂ ಆಗದಂತಹ ಪರಿಸ್ಥಿತಿ ತರುತ್ತದೆ. ಸಾಧಾರಣವಾಗಿ ಏಳರಿಂದ ಹತ್ತು ಬಹುಬೇಗ ಗುಣವಾಗುತ್ತದೆ.
ಬಾಯಿಹುಣ್ಣಿಗೆ ಪ್ರಮುಖ ಕಾರಣಗಳು:
ದೇಹದ ಉಷ್ಣತೆ ಹೆಚ್ಚಾಗಿರುವುದು,ಖಾರದ, ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು,.ದೇಹದ ಹಾರ್ಮೋನುಗಳ ಅಸಮತೋಲನ. ಬಾಯಿ ಸ್ವಚ್ಛತೆಯ ಕೊರತೆ ಮತ್ತು ಅತಿಯಾದ ಧೂಮಪಾನ ಮತ್ತು ಮದ್ಯಪಾನ ಮಾಡುವು ಬಾಯಿ ಹುಣ್ಣು ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗುತ್ತದೆ.
ಬಾಯಿಹುಣ್ಣಿನ ನಿವಾರಣೆಗೆ ಪರಿಹಾರೋಪಾಯಗಳು:
ಅರಿಶಿನ:
ಅರಿಶಿನದ ಪುಡಿಯನ್ನು ಹಾಕಿ ಪೇಸ್ಟ್ ಮಾಡಿ ಅದನ್ನು ಹುಣ್ಣಾದ ಜಾಗಕ್ಕೆ ಹಚ್ಚಿ. ತಕ್ಷಣ ನೋವು ಕಡಿಮೆಯಾಗುತ್ತದೆ ಮತ್ತೆ ಬಾಯಿಹುಣ್ಣು ಬೇಗ ವಾಸಿಯಾಗುತ್ತದೆ.
ತೆಂಗಿನ ಹಾಲು:
ತೆಂಗಿನ ಕಾಯಿಯ ಹಾಲಿನಿಂದ ದಿನಕ್ಕೆ ಎರಡರಿಂದ ಮೂರು ಬಾರಿ ಬಾಯಿ ಮುಕ್ಕಳಿಸಿ ಉಗಿಯುತ್ತಿದ್ದರೆ ಎರಡೇ ದಿನದಲ್ಲಿ ಬಾಯಿ ಹುಣ್ಣು ಮಾಯವಾಗುತ್ತದೆ.
ಕೊತ್ತಂಬರಿ ಬೀಜ :
ಒಂದು ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಕುದಿಸಿ. ಬಳಿಕ ಅದನ್ನು ಫಿಲ್ಟರ್ ಮಾಡಿ ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಇದರಿಂದ ಬಾಯಿಯನ್ನು ಕ್ಲೀನ್ ಮಾಡಿ. ಹೀಗೆ ಮೂರು ಬಾರಿ ಮಾಡಿದರೆ ಬಾಯಿಹುಣ್ಣು ಬೇಗನೆ ಗುಣವಾಗುತ್ತದೆ.
ಅಡುಗೆ ಸೋಡಾ :
ಅಡುಗೆ ಸೋಡಾವನ್ನು ನೀರಿನಲ್ಲಿ ಹಾಕಿ ಪೇಸ್ಟ್ ಮಾಡಿಕೊಂಡು ನಂತರ ಅದನ್ನು ಬಾಯಿಹುಣ್ಣು ಆಗಿರುವ ಜಾಗಕ್ಕೆ ಹಚ್ಚುತ್ತಿದ್ದರೆ ಬಹುಬೇಗ ಗುಣಮುಖವಾಗುತ್ತದೆ.
ಜೇನು :
ಶುದ್ಧ ಜೇನನ್ನು ಕೈಬೆರಳಿನಲ್ಲಿ ತಗೊಂಡು ಹುಣ್ಣಾಗಿರುವ ಜಾಗಕ್ಕೆ ಹಚ್ಚುವುದರಿಂದ ಬೇಗನೆ ಬಾಯಿ ಹುಣ್ಣು ವಾಸಿಯಾಗುತ್ತದೆ ಗುಣಮುಖವಾಗುತ್ತದೆ.
ಮೆಂತ್ಯ:
ಮೆಂತೆ ಕಾಳನ್ನು ಬಾಯಿಯಲ್ಲಿ ಹಾಕಿ ಸ್ವಲ್ಪ ಹತ್ತು ಜಗಿಯುವುದರಿಂದ ಅಥವಾ ಮೆಂತ್ಯೆ ಸೊಪ್ಪನ್ನು ನೀರಿನಲ್ಲಿ ಕುದಿಸಿ ನೀರು ತಣ್ಣಗಾದಮೇಲೆ ನೀರನ್ನು ಫಿಲ್ಟರ್ ಮಾಡಿ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ಣು ಬಹುಬೇಗ ಕಡಿಮೆಯಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
