fbpx
ಸಾಧನೆ

ಅಂದು 13 ವರ್ಷಕ್ಕೆ ಮನೆಬಿಟ್ಟು ಓಡಿ ಹೋಗಿ ಊಟಕ್ಕೂ ದುಡ್ಡಿಲ್ಲದೆ ಪರದಾಡಿದ ಉಡುಪಿ ಹುಡುಗ ಇಂದು ಕೋಟಿ ಕೋಟಿ ಬೆಲೆ ಬಾಳೋ ಕಂಪನಿ ಒಡೆಯ..

ಅಂದು 13 ಕ್ಕೆ ಮನೆಬಿಟ್ಟು ಓಡಿ ಊಟಕ್ಕೂ ದುಡ್ಡಿಲ್ಲದೆ ಪರದಾಡಿದ ಉಡುಪಿ ಹುಡುಗ ಇಂದು ಕೋಟಿ ಕೋಟಿ ಬೆಲೆ ಬಾಳೋ ಕಂಪನಿ ಒಡೆಯ..

 

 

ಜಯರಾಮ್ ಬನನ್ , ಅವರ ತಂದೆ ಬಹಳ ಕೋಪಿಷ್ಠರು ಸಣ್ಣ ಪುಟ್ಟ ತಪ್ಪುಗಳಿಗೆಲ್ಲ ಮಕ್ಕಳಿಗೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಿದ್ದರು , ಇನ್ನು ಕೋಪ ಹೆಚ್ಚಾದರೆ ಮಕ್ಕಳ ಕಣ್ಣಿಗೆ ಖಾರದ ಪುಡಿ ಎರಚುತ್ತಿದ್ದರು ಹೀಗಿರುವಾಗ ಜಯರಾಮ್ ಬನನ್ ರವರು ಕೇವಲ 13 ವರ್ಷ ವಯಸ್ಸಿನವನಾಗಿದ್ದಾಗ ಸ್ವಲ್ಪ ಕಡಿಮೆ ಅಂಕ ಬಂದಿರುತ್ತದೆ ಇದು ಮನೆಯಲ್ಲಿ ಗೊತ್ತಾದರೆ ಎಲ್ಲಿ ಮತ್ತೆ ಚರ್ಮ ನೀಲಿಗಟ್ಟುವ ಹಾಗೆ ತಂದೆ ಹೊಡೆದು ಬಾಸುಂಡೆ ಬರುತ್ತದೆಯೋ ಎಂದು ಹೆದರಿ ಮನೆಯಲ್ಲಿ ಅಪ್ಪಯಿಲ್ಲದಿದ್ದಾಗ ಅವರ ಜೇಬಿನಿಂದ ದುಡ್ಡು ಕದ್ದು ಮುಂಬೈ ಬಸ್ ಹತ್ತುಬಿಟ್ಟರು ಮುಂದೆ ಏನು ಮಾಡಬೇಕೆಂಬ ಅರಿವಿಲ್ಲ, ಆಗ ಬಸ್ ನಲ್ಲಿ ಸಿಕ್ಕ ಒಬ್ಬ ವ್ಯಕ್ತಿ ಇವರ ಕಥೆ ಕೇಳಿ ಅವರಿಗೆ ಕ್ಯಾಂಟೀನ್ ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದರು , ಬೇರೆ ವಿಧಿ ಇಲ್ಲದೆ ಜಯರಾಮ್ ಒಪ್ಪಿಕೊಂಡರು .

 

 

ಹೀಗೆ ಕ್ಯಾಂಟೀನ್ ನಲ್ಲಿ ಪಾತ್ರೆ ತೊಳೆಯುವ ಕೆಲಸ ಸಿಕ್ಕಿತ್ತು , ಕೆಲವೊಮ್ಮೆ ಮಾಲೀಕರಿಂದ ಚಪ್ಪಲಿ ಏಟುಗಳು ಬಿದ್ದವು ಅವಮಾನ ಅಪಮಾನ ಎನ್ನದೆ ದಿನರಾತ್ರಿ ಕಷ್ಟಪಟ್ಟು ದುಡಿದು
ವೇಟರ್ ಆಗಿ ಮುಂದೆ ಮ್ಯಾನೇಜರ್ ಆಗಿ ಭಡ್ತಿಪಡೆದರು ಮುಂದೆ ತಾನೇ ಸ್ವಂತಃ ವ್ಯವಹಾರವನ್ನು ಶುರುಮಾಡಬೇಕೆಂದು ಬಯಸಿ ಡೆಲ್ಲಿ ಗೆ ಸಣ್ಣ ರಸ್ತೆ ಬದಿಯ ಅಂಗಡಿಯೊಂದನ್ನು ತೆರೆದರು , ಆಗ ತಾನೇ ದಕ್ಷಿಣ ಭಾರತದ ಇಡ್ಲಿ ದೋಸೆ ಉತ್ತರ ಭಾರತಕ್ಕೆ ಲಗ್ಗೆ ಇಡುತ್ತಿದ್ದವು , ಇದೆ ಸರಿಯಾದ ಸಮಯ ಎಂದು ಮನಗೊಂಡರು.

 

 

ಡಿಫೆನ್ಸ್ ಕಾಲೋನಿ ಮಾರ್ಕೆಟ್ ನಲ್ಲಿ ಮೊದಲ ಮಳಿಗೆ ‘ಸಾಗರ್ ಹೋಟೆಲ್ ‘ ತೆರೆದರು ಮೊದಲ ದಿಂದಾದ ಸಂಪಾದನೆ ರೂ 476 , ಆಗಲೇ ದೋಸೆ , ಸಾಂಬಾರ್ ನ ರುಚಿ ಹತ್ತಿಸಿಕೊಂಡಿದ್ದ ಡೆಲ್ಲಿ ಮಂದಿಗೆ ಸ್ವಲ್ಪ ಕಾಲದಲ್ಲೇ ಬಹಳಷ್ಟು ಇಷ್ಟವಾದ ಹೋಟೆಲ್ ಆಗಿ ಮಾರ್ಪಾಡಾಯಿತು ನಂತ್ರ ‘ಸಾಗರ್ ರತ್ನ’ ಎಂದು ಬದಲಾಯಿತು.
‘ಸಾಗರ್ ರತ್ನ’ ಈಗ ಉತ್ತರ ಭಾರತದಲ್ಲಿ 30 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ ಮತ್ತು ಉತ್ತರ ಅಮೆರಿಕಾ, ಕೆನಡಾ, ಬ್ಯಾಂಕಾಕ್ ಮತ್ತು ಸಿಂಗಾಪುರ್ಗೆ ವಿಸ್ತರಿಸಿದೆ!

 


ಕೋಟಿ ಕೋಟಿ ವ್ಯವಹಾರ ನಡೆಸುತ್ತಿದೆ , ‘ಸಾಗರ್ ರತ್ನ’ ಹೋಟೆಲ್ ಗಳಲ್ಲಿ ಸ್ವಚ್ಛತೆಗೆ ಮುಖ್ಯ ಆದ್ಯತೆ ನೀಡಲಾಗುತ್ತದೆ ಹಾಗೆಯೇ ಅಥಿತಿಗಳಿಗೆ ರುಚಿಯಾದ ಊಟ ಬಡಿಸುವ ಧ್ಯೇಯವನ್ನು ಹೊಂದಿದ್ದಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top