fbpx
ಸಮಾಚಾರ

ರವಿ ಬೆಳೆಗೆರೆಯವರು “ಹಾಯ್ ಬೆಂಗಳೂರ್” ಪತ್ರಿಕೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸುತ್ತಿರುವುದೇಕೆ? ಅಸಲಿ ಕಾರಣಗಳೇನು ಗೊತ್ತಾ..?

ರವಿ ಬೆಳೆಗೆರೆಯವರು “ಹಾಯ್ ಬೆಂಗಳೂರ್” ಪತ್ರಿಕೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸುತ್ತಿರುವುದೇಕೆ? ಅಸಲಿ ಕಾರಣಗಳೇನು ಗೊತ್ತಾ..?

 

 

ಪತ್ರಕರ್ತ ರವಿ ಬೆಳಗೆರೆಯವರು ತಾವು ಕಟ್ಟಿ ಬೆಳೆಸಿದ ‘ಹಾಯ್ ಬೆಂಗಳೂರ್’ ವಾರಪತ್ರಿಕೆಯನ್ನು ನಿಲ್ಲಿಸುವ ಆಲೋಚನೆ ಮಾಡಿದ್ದಾರೆ. ಮೊನ್ನೆ ಅಂದ್ರೆ ಸೆಫ್ಟೆಂಬರ್ 25ಕ್ಕೆ ‘ಹಾಯ್ ಬೆಂಗಳೂರ್’ ಪ್ರಾರಂಭವಾಗಿ ಸರಿಯಾಗಿ ಇಪ್ಪತ್ತೆರಡು ವರ್ಷ ಪೂರೈಸಿತ್ತು, ಹೀಗಿರುವಾಗ ಮಾದ್ಯಮಗಳ ಜೊತೆ ಮಾತನಾಡಿದ ರವಿಬೆಳೆಗೆರೆ ‘ಹಾಯ್ ಬೆಂಗಳೂರ್’ ನನ್ನನ್ನು ಸಾಕಿ-ಸಲಹಿದ ಪತ್ರಿಕೆ, ಆದರೆ ಈಗ ಅದನ್ನು ನಿಲ್ಲಿಸುವುದಕ್ಕೆ ತೀರ್ಮಾನ ಮಾಡಿದ್ದೀನಿ. ಎಂದು ಹೇಳಿದ್ದಾರೆ. ಇದೆ ಸಮಯದಲ್ಲಿ ‘ಓ ಮನಸೇ’ಯನ್ನು ಮುಂದುವರಿಸಿ ಕೊಂಡು ಹೋಗುವುದಾಗಿ ಹೇಳಿದ್ದಾರೆ..

 

 

ಕೇವಲ “ಹಾಯ್ ಬೆಂಗಳೂರ್” ಅಲ್ಲದೆ ಗಾಂಧಿ ಬಜಾರ್ ನಲ್ಲಿರುವ ಅವರ ಒಡೆತನದ “ಬೆಳಗೆರೆ ಬುಕ್ಸ್ ಅಂಡ್ ಕಾಫಿ” ಎಂಬ ಪುಸ್ತಕ ಮಾರಾಟ ಮಳಿಗೆ ಕೂಡ ಕ್ಲೋಸ್ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಮಳಿಗೆಯನ್ನು ನೋಡಿಕೊಳ್ಳುವವರು ಯಾರು ಇಲ್ಲದ ಕಾರಣ ಹಾಗೂ ಆ ಕಟ್ಟಡಕ್ಕೆ ಕೊಡುತ್ತಿರುವ ಬಹಳ ದುಬಾರಿಯಾಗಿರುವುದರಿಂದ ಅಷ್ಟು ಬಾಡಿಗೆ ಕೊಟ್ಟು ನಡೆಸಿಕೊಂಡು ಹೋಗುವುದು ಕಷ್ಟವಾಗಿರುವ ಕಾರಣ ಪುಸ್ತಕ ಮಳಿಗೆಯನ್ನು ಕ್ಲೋಸ್ ಮಾಡಲು ನಿರ್ಧರಿಸಿದ್ದಾರಂತೆ.

 

 

ರವಿ ಬೆಳಗೆರೆಯವರು ಹಾಯ್ ಬೆಂಗಳೂರ್ ಪತ್ರಿಕೆಯನ್ನು ಮುಚ್ಚುವುದಕ್ಕೆ ಕಾರಣಗಳು:

“ತೂಕವಾದ ಮತ್ತು ಮನಸಿಗೆ ನಾಟುವಂಥ ಬರಹಗಳನ್ನು ಬರೆಯಬೇಕು, ನನ್ನ ಬರಹಗಳನ್ನು ಓದುವ ಓದುಗರಿಗೆ ಇನ್ನು ಹೆಚ್ಚಿನದನ್ನು ಕೊಡಬೇಕು,,
ಓದೋದಕ್ಕೆಂದು ತಂದಿಟ್ಟುಕೊಂಡಿರುವ ಪುಸ್ತಕಗಳನ್ನು ಓದಬೇಕು,,ಸಂಗೀತ ಕೇಳಬೇಕು ಹಾಗೂ ಅನುವಾದ ಮಾಡಲು ಹಕ್ಕು ಖರೀದಿಸಿರುವ ಪುಸ್ತಕಗಳು ತುಂಬಾ ಇವೆ ಅವುಗಳ ಅನುವಾದ ಮಾಡಬೇಕು. ” ಓ ಮನಸೇ” ಪತ್ರಿಕೆ ಕಡೆ ಗಮನ ಕೊಡಬೇಕು ನನ್ನ ಮನಸಿಗೆ ತುಂಬ ಹತ್ತಿರವಾದ ಓ ಮನಸೇ ಮುಂದುವರಿಸಿಕೊಂಡು ಹೋಗವ ಆಸೆ ಇದೆ. ಅದಕ್ಕೆ ನನ್ನ ಮಗಳು ಭಾವನಾ ಮುಂದೆ ಬಂದಿದ್ದಾಳೆ. ನನ್ನ ಮಕ್ಕಳ ಜತೆಗೆ ಮತ್ತು ಮೊಮ್ಮಕ್ಕಳ ಜತೆಗೆ ಸಮಯ ಕಳೆಯಬೇಕು.” ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

 


ಇದೇ ಸಂದರ್ಭದಲ್ಲಿ ’ಹಾಯ್ ಬೆಂಗಳೂರ್’ ಪತ್ರಿಕೆಯ ಆರಂಭದ ಕಷ್ಟದ ದಿನಗಳಲ್ಲಿ ತಮ್ಮ ಜತೆಗೆ ನಿಂತವರ, ಸಹಾಯ ಮಾಡಿದವರಿಗೆ ವಂದನೆಗಳನ್ನು ಸಲ್ಲಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳಲು ಮಾತು ಆರಂಭಿಸಿದ ರವಿ ಬೆಳೆಗೆರೆ ” ನಾನು ಪತ್ರಿಕೋದ್ಯಮಕ್ಕೆ ಬಂದು ಒಟ್ಟಾರೆ 25 ವರ್ಷಗಳಾಗಿವೆ, ಈ ಅವಧಿಯಲ್ಲಿ ನಾನು 89 ಪುಸ್ತಕ ಬರೆದಿದ್ದೀನಿ, ನನ್ನ ಬರಹಗಳನ್ನು ಓದುವ ಓದುಗರಿಗೆ ಇನ್ನೂ ಹೆಚ್ಚಿನದನ್ನು ಕೊಡಬೇಕು ಎಂದು ಅನ್ಕೊಂಡಿದ್ದೀನಿ” ಎಂದು ಹೇಳಿ ತಮ್ಮ ಮಾತು ಮುಗಿಸಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top