fbpx
ಮನೋರಂಜನೆ

ಎಲ್ಲರೂ ಇಷ್ಟ ಪಡೋ ಚಾಲೆಂಜಿಂಗ್ ಸ್ಟಾರ್ ದರ್ಶನ್’ನ ಬರಬೇಡಿ ಅಂತ ಹೇಳಿದ್ದು ಯಾರು ಗೊತ್ತಾ? ಹೀಗೆ ಹೇಳಲು ಕಾರಣವೇನು..?

ಎಲ್ಲರೂ ಇಷ್ಟ ಪಡೋ ಚಾಲೆಂಜಿಂಗ್ ಸ್ಟಾರ್ ದರ್ಶನ್’ನ ಬರಬೇಡಿ ಅಂತ ಹೇಳಿದ್ದು ಯಾರು ಗೊತ್ತಾ? ಹೀಗೆ ಹೇಳಲು ಕಾರಣವೇನು..?

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಮಿಲನ ಪ್ರಕಾಶ್ ನಿರ್ದೇಶನದ ಬಹುನಿರೀಕ್ಷಿತ ‘ತಾರಕ್’ ಚಿತ್ರ ದಸರಾ ಹಬ್ಬದ ಪ್ರಯುಕ್ತ ನಾಳೆ ಬಿಡುಗಡೆಗೊಳ್ಳುತ್ತಿದೆ. ಈಗಾಗಲೇ ಟ್ರೈಲರ್ ಟೀಸರ್ ಗಳು ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರವನ್ನು ಕಣ್ತುಂಬಿಕೊಳ್ಳಲು ದರ್ಶನ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.. ಹೀಗಿರುವಾಗ ದರ್ಶನ್’ರನ್ನ ನೀವು ಬರಬೇಡಿ ಎಂದು ಹೇಳಿದ್ದಾರಂತೆ.ಅವರ್ಯಾರು? ಮುಂದೆ ಓದಿ.

 

 

ತಾರಕ್ ಚಿತ್ರದ ಪ್ರೊಮೋಷನ್ ಗೆಂದು ಖಾಸಗಿ ಚಾನೆಲ್ ವೊಂದರ ಕಾರ್ಯಕ್ರಮಕ್ಕೆ ದರ್ಶನ್ ಮತ್ತು ತಾರಕ್ ಚಿತ್ರತಂಡ ಹೋಗಿತ್ತು ಆ ವೇಳೆ ಮಾತನಾಡುತ್ತ ದರ್ಶನ್ ಅವರು “ನನ್ನನ್ನು ಥಿಯೇಟರ್ ಓನರ್ ಗಳು ಚಿತ್ರ ರಿಲೀಸ್ ಆದ ಸಮಯದಲ್ಲಿ ಬರಬೇಡಿ ಎಂದು ಹೇಳುತ್ತಾರೆ” ಎಂದು ಹೇಳಿದ್ದಾರೆ. ಕಾರಣ ಏನೆಂದರೆ,

 

 

ಹೇಳಿಕೇಳಿ ದರ್ಶನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು, ದರ್ಶನ್ ಥಿಯೇಟರ್ ಗೆ ಬಂದಾಗ ಅವರನ್ನು ನೋಡಲೆಂದು ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಬರುತ್ತಾರೆ. ಅವರಲ್ಲಿ ಚಿತ್ರ ನೋಡಲು ಕೆಲವರಿಗೆ ಟಿಕೆಟ್ ಸಿಗುತ್ತೆ ಇನ್ನು ಕೆಲವರಿಗೆ ಟಿಕೆಟ್ ಸಿಗೋದಿಲ್ಲಾ. ಟಿಕೆಟ್ ಸಿಗದೇ ನಿರಾಸೆಗೊಂಡವರು ಥಿಯೇಟರ್ ಮೇಲೆ ಕಲ್ಲು ತೂರಾಟ ಮಾಡಿ ಗಾಜುಗಳನ್ನೆಲ್ಲಾ ಹೊಡೆದು ಹಾಕಿ ಥಿಯೇಟರ್ ನ ಅಂದವನ್ನು ಹಾಳು ಮಾಡುತ್ತಾರಂತೆ. ಹಾಗಾಗಿ ದರ್ಶನ್ಅವರಿಗೆ ನೀವು ಥಿಯೇಟರ್ ಗೆ ಬರಬೇಡಿ ಸರ್ ಎಂದು ಥಿಯೇಟರ್ ಮಾಲೀಕರು ಕೇಳಿಕೊಳ್ಳುತ್ತಾರಂತೆ..

 

 

ತಾರಕ್ ಚಿತ್ರದಲ್ಲಿ ನಟ ದೇವರಾಜ್ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ತಾರಕ್ ಚಿತ್ರವನ್ನು ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶಿಸಿದ್ದು ದರ್ಶನ್ ಗೆ ನಾಯಕಿಯಾಗಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವತ್ಸವ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಲಕ್ಷ್ಮಣ ದುಷ್ಯಂತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top