fbpx
ದೇವರು

ಭಾನುವಾರದ ದಿನ ದುರ್ಗಾ ದೇವಿಗೆ ಈ ಸಮಯದಲ್ಲಿ ಪೂಜೆ ಮಾಡಿದರೆ ರಾಹು ದೋಷ ನಿವಾರಣೆಯಾಗುತ್ತದೆ.

ಭಾನುವಾರದ ದಿನ ದುರ್ಗಾ ದೇವಿಗೆ ಈ ಸಮಯದಲ್ಲಿ  ಪೂಜೆ ಮಾಡಿದರೆ ರಾಹು ದೋಷ ನಿವಾರಣೆಯಾಗುತ್ತದೆ.

 

 

ನವಗ್ರಹಗಳಲ್ಲಿ ಎಂಟನೇ ಗ್ರಹ ನಾದ ರಾಹು ಗ್ರಹಕ್ಕೆ ಅಧಿಪತಿ ದುರ್ಗಾ ದೇವಿ.ಆದ್ದರಿಂದಲೇ ರಾಹು ಕಾಲದಲ್ಲಿ ದುರ್ಗಾ ದೇವಿಗೆ ಪೂಜೆ ಮಾಡುತ್ತೇವೆ.ಜಾತಕದ ಪ್ರಕಾರ ರಾಹು ದೆಶೆ  ಅನುಭವಿಸುವವರು ಮತ್ತು ರಾಹು ನೀಚ ಸ್ಥಾನದಲ್ಲಿರುವವವರಿಗೆ ಕೆಲವು  ಕಷ್ಟಗಳು, ಅಡಚಣೆಗಳು ,ಮನೋವೇದನೆಗಳು ಅನುಭವಕ್ಕೆ ಬರುತ್ತದೆ ಆದ್ದರಿಂದ ರಾಹುದೋಷ ಇರುವವರು ಪ್ರತಿದಿನ ರಾಹು ಕಾಲದಲ್ಲಿ ಪ್ರಾರ್ಥನೆ ಮಾಡುವುದು ಒಳ್ಳೆಯದು.ಮುಖ್ಯವಾಗಿ ಭಾನುವಾರ ಸಂಜೆ 4:30 ರಿಂದ 6 ಗಂಟೆಯವರೆಗೆ ದುರ್ಗಾದೇವಿಗೆ ಪೂಜೆ ಸಲ್ಲಿಸಲು ಹೇಳಿ ಮಾಡಿಸಿದ ಸಮಯವಾಗಿದೆ.

 

 

ನವಗ್ರಹಗಳಲ್ಲಿ ರಾಹುವಿಗೆ ಸರ್ಪದ ರೂಪವಿರುತ್ತದೆ.ರಾಹುವಿಗೆ ದೇಹವೆಲ್ಲಾ ವಿಷದಿಂದ ಕೂಡಿ ಬರುತ್ತದೆ.ಆದರೆ ಬಾಲದಲ್ಲಿ ಮಾತ್ರ ಅಮೃತ ಇರುತ್ತದೆ.ಅದು ಕೇತು ಬಾಲದ ಭಾಗ ಕೇತು ಆಗಿರುತ್ತದೆ ಆದ್ದರಿಂದ ಭಾನುವಾರ ಸೂರ್ಯಾಸ್ತದ ಸಮಯದಲ್ಲಿ ಬರುವ ರಾಹು ಕಾಲದಲ್ಲಿ ರಾಹುವಿನ ಬಾಲ ಅಮೃತ ಶಕ್ತಿಯಿಂದ ಹೆಚ್ಚಾಗಿರುತ್ತದೆ.

 

 

ಈ ಸಮಯದಲ್ಲಿ ದುರ್ಗಾ ದೇವಿಯನ್ನು ಪೂಜಿಸಿದರೆ ನಾವು ಅಂದುಕೊಂಡ ಕೆಲಸಗಳೆಲ್ಲವೂ ದಿಗ್ವಿಜಯವಾಗಿ ಪೂರ್ತಿಯಾಗುತ್ತವೆ.

ಅನಾರೋಗ್ಯ ಸಮಸ್ಯೆ,ಋಣ ಭಾಧೆ,ಮನೆಯ ಸಮಸ್ಯೆಗಳು ದೂರವಾಗಬೇಕೆಂದರೆ, ಭಾನುವಾರ ಸಂಜೆ ಸಮಯದಲ್ಲಿ ರಾಹು ಕಾಲದಲ್ಲಿ ದುರ್ಗಾ ದೇವಿಯ ದೇವಸ್ಥಾನದಲ್ಲಿ ನಿಂಬೆಹಣ್ಣಿನ ಸಿಪ್ಪೆಯಿಂದ ದೀಪವನ್ನು ಮಾಡಿ,ಅದರಲ್ಲಿ 5 ಬತ್ತಿಯಿಂದ ತುಪ್ಪದ ದೀಪವನ್ನು ಹಚ್ಚಬೇಕು.

 

 

ಈ ತುಪ್ಪದ ದೀಪಗಳು ದೇವಿಯ ಕಡೆಗೆ ನೋಡುವಂತೆ ಇರಲಿ .ಈ ಪೂಜೆ ಮಾಡುವಾಗ ದೇವಿಗೆ ಮಲ್ಲಿಗೆ ಹೂ, ಸೇವಂತಿಗೆಯನ್ನು ದುರ್ಗಾ ದೇವಿಗೆ ಸಮರ್ಪಿಸಿರಿ.

 

 

ದೇವಿಯ ಹೆಸರಿನಲ್ಲಿ ಪೂಜೆ ಮಾಡಿಸಬೇಕು.ನಂತರ ದೇವರಿಗೆ ನಾಲ್ಕು ಪ್ರದಕ್ಷಿಣೆಯನ್ನು ಮಾಡಬೇಕು.ದುರ್ಗಾಸ್ಥಿತಿ ಪಠಿಸಬೇಕು.

ಪೂಜೆ ಆದ ನಂತರ  ನವಗ್ರಹ ಪ್ರದಕ್ಷಿಣೆಯನ್ನು ಮಾಡಬಾರದು.ಮನೆಗೆ ಬಂದಾಗ ದೇವರ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ,ಐದು ಉದುಬತ್ತಿ ಕರ್ಪುರದಿಂದ ಆರತಿಯನ್ನ ಬೆಳಗಬೇಕು.

 

 

ಹೀಗೆ 9 ವಾರಗಳು ಮಾಡಿದರೆ ದೋಷಗಳು ದೂರವಾಗಿ ಸುಖ,ಶಾಂತಿ,ನೆಲೆಸುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top