fbpx
ಭವಿಷ್ಯ

ಜೀವನದಲ್ಲಿ ಈ ಕೆಲಸಗಳನ್ನು ಮಾಡಿದ್ರೆ ದರಿದ್ರ ಅನ್ನೋದು ಹಿಂದೇನೆ ಬರುತ್ತಂತೆ..

ನಾವು ಮಾಡುವ ಕೆಲಸ ಅಥವಾ ಅಭ್ಯಾಸಗಳಿಗೂ ಮತ್ತು ನವ ಗ್ರಹಗಳಿಗೂ ಸಂಬಂಧವಿದೆ.

 

 

ನಾವು ಮಾಡುವ ಅಭ್ಯಾಸಗಳಿಂದ ನವಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ.ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದೊಳಗಿನ ಉಪ್ಪಿಗೂ ಎತ್ತಲಿಂದೆತ್ತ ಸಂಬಂಧ ಎಂದು ಯೋಚನೆ ಮಾಡುತ್ತಿದ್ದೀರ, ಹಾ ನಿಜ ಸಂಬಂಧವಿದೆ.ನಮ್ಮ ಅಭ್ಯಾಸಗಳಿಗೂ ನವಗ್ರಹಗಳಿಗೂ ಅದರ ಫಲಗಳಿಗೂ ಸಂಬಂಧವಿದೆ.

1.ರಾತ್ರಿ ಮಲಗಿ ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಎಲ್ಲವನ್ನು ಮಡಚಿ ಸರಿಯಾದ ಸ್ಥಳದಲ್ಲಿ ಇಡಬೇಕು.ನಂತರ ಕಸವನ್ನು ಗುಡಿಸಿ ಮನೆಯಲ್ಲಿ ಸ್ವಚ್ಛಗೊಳಿಸಬೇಕು.ನೀವು ಹೀಗೆ ಮಾಡಿಲ್ಲ  ಅಂದರೆ ಎಲ್ಲೆಂದರಲ್ಲಿ ಮಲಗಿದ ಹಾಸಿಗೆ,ಹೊದಿಕೆಯನ್ನು ಹಾಗೆಯೇ ದಿನಪೂರ್ತಿ ಬಿಟ್ಟರೆ ನಕಾರಾತ್ಮಕ ಶಕ್ತಿಯು ಆ ಜಾಗದಲ್ಲಿ ಹರಡುತ್ತದೆ.ಶನಿ ಮತ್ತು ರಾಹುವಿನ ಕ್ರೂರ ದೃಷ್ಟಿಗೂ ನೀವು ಬೀಳುತ್ತೀರ.

 

 

2.ಮನೆಯ ಹೊರಗಿನಿಂದ ಮನೆಯ ಒಳಗೆ ಬರುವ ಮುನ್ನ ಚಪ್ಪಲಿಗಳನ್ನು ಹೊರಗೆ ಬಿಟ್ಟು ಕೈ- ಕಾಲುಗಳನ್ನು ತೊಳೆದು ಮುಂದಿನ ಕೆಲಸಕ್ಕೆ  ಸಜ್ಜಾಗಬೇಕು.ಇದರಿಂದ ಮನಸ್ಸಿಗೆ ಶಾಂತಿ,ನೆಮ್ಮದಿ, ದೊರೆಯುವುದು ಮನೆಯೊಳಗೆ ಕ್ರಿಮಿ -ಕೀಟಗಳ ಪ್ರವೇಶವನ್ನು ತಡೆಯಬಹುದು. ಮನೆಯ ವಾತಾವರಣ  ಚೆನ್ನಾಗಿರುತ್ತದೆ.

3. “ಅನ್ನಂ ಪರಂ ಬ್ರಹ್ಮo” ಎನ್ನುವ ಮಾತನ್ನು ನೀವೆಲ್ಲರೂ ಕೇಳಿದ್ದೀರ.ಇಲ್ಲಿ ಅನ್ನ ಎಂದರೆ ನಾವು ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳು.ನಿಮಗೆ ಎಷ್ಟು ಬೇಕೋ ಅಷ್ಟು ಆಹಾರವನ್ನು ಮಾತ್ರ ತಟ್ಟೆಗೆ ಹಾಕಿಕೊಳ್ಳಿ.ಜಾಸ್ತಿ ಹಾಕಿಕೊಂಡು ಬಿಸಾಕಬೇಡಿ.ಮಿತ ಆಹಾರ ಸೇವನೆ ದೇಹಕ್ಕೂ ಒಳ್ಳೆಯದು.ಮನಸ್ಸಿಗೂ ಹಿತ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.ಯಾರೂ ಅನ್ನವನ್ನು ಚೆಲ್ಲುತ್ತಾರೋ ಅಲ್ಲಿ ದಾರಿದ್ರ್ಯ ತಾಂಡವವಾಡುತ್ತದೆ.

 

 

4.ಮನೆಯ ಹೊರಗೆ ಪಾದರಕ್ಷೆಗಳನ್ನು ವ್ಯವಸ್ಥಿತವಾಗಿ ಬಿಡಿ ಮನೆಯೊಳಗೆ ಯಾವುದೇ ಕಾರಣಕ್ಕೂ ,ಚಪ್ಪಲಿ,ಶೂಗಳನ್ನು ಹಾಕಿಕೊಂಡು ಹೋಗಬೇಡಿ.ಸ್ವಚ್ಛವಾಗಿರುವ ಮನೆಯೊಳಗೆ ಶನಿ ಪ್ರವೇಶಿಸುವುದಿಲ್ಲ.ಅವನ ಕೆಟ್ಟ ದೃಷ್ಟಿ ಮನೆಯೊಳಗೆ ಬೀಳದೆ ಇರುವ ಹಾಗೆ ನೋಡಿಕೊಳ್ಳಿ.

 

 

5.ನಮ್ಮ ಮನೆಯ ಅಂಗಳದಲ್ಲಿರುವ ಮರ ಗಿಡಗಳು ನಮ್ಮ ಕುಟುಂಬ ಸದಸ್ಯರಿದ್ದ ಹಾಗೆ.ಅವುಗಳಿಗೆ  ನಮ್ಮ ಪ್ರೀತಿ ಮತ್ತು ಆರೈಕೆಯ ಅಗತ್ಯವಿದೆ.ಪ್ರತಿನಿತ್ಯ ಅವುಗಳಿಗೆ ನೀರು ಹಾಕುವ ಮೂಲಕ ಗುರು,ಚಂದ್ರ, ಸೂರ್ಯ ಗ್ರಹಗಳ ಅನುಗ್ರಹವನ್ನು ಸಂಪಾದಿಸಬಹುದು. ಮರ ಗಿಡಗಳು  ಇರುವ ವಾತವರಣದಲ್ಲಿ ಓಡಾಡಿದರೆ ಮನಸ್ಸಿಗೆ ಶಾಂತಿ,ನೆಮ್ಮದಿ, ಸಿಗುತ್ತದೆ.

 

 

6.ಮನೆಗೆ ಅತಿಥಿಗಳು ಬಂದರೆ ಕೂಡಲೇ  ಮೊದಲು ನೀರನ್ನು ಕುಡಿಯಲು ಕೊಡಿ.ಇದರಿಂದ ರಾಹುವಿನ ಕೆಟ್ಟ ದೃಷ್ಟಿ ಬೀರುವುದಿಲ್ಲ.

 

7.ನೀವು ಊಟ ಮಾಡಿದ ತಟ್ಟೆಗಳನ್ನು ನೀವೇ ತೊಳೆಯಿರಿ.ನಿಮ್ಮ ಎಂಜಲು ತಟ್ಟೆಗಳನ್ನು ಮತ್ತೊಬ್ಬರ  ಕೈಯಲ್ಲಿ ತೊಳೆಸಬೇಡಿ, ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳುವುದರಿಂದ  ಚಂದ್ರ ಮತ್ತು ಸೂರ್ಯ ಗ್ರಹಗಳಿಗೆ ನೀವು ಗೌರವ ಕೊಟ್ಟಂತೆ.ಹಾಗೆ ನಿಮ್ಮ ಮನಸ್ಸಿಗೂ ಶಾಂತಿ ದೊರೆಯುವುದು.

 

8.ನಿಮಗೆ ಎಲ್ಲೆಂದರಲ್ಲಿ ಉಗುಳುವ ಅಭ್ಯಾಸವಿದ್ದರೆ ತಕ್ಷಣ ನಿಲ್ಲಿಸಿ.ಹಾಗೆ ಉಗುಳುವ  ಬದಲು ಸರಿಯಾದ ಅಭ್ಯಾಸ ಮಾಡಿಕೊಳ್ಳಿ ಇದರಿಂದ ನಿಮ್ಮ ಘನತೆ ಗೌರವ ಸಹ ಹೆಚ್ಚುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top