fbpx
ಸಾಧನೆ

ತನ್ನ ಶಸ್ತ್ರ ಚಿಕಿತ್ಸೆಯನ್ನು ತಾನೇ ಮಾಡಿಕೊಂಡ ಡಾಕ್ಟರ್ ನ ಕರುಣಾಜನಕ ಕಥೆ !

ತನ್ನ ಶಸ್ತ್ರ ಚಿಕಿತ್ಸೆಯನ್ನು ತಾನೇ ಮಾಡಿಕೊಂಡ ಡಾಕ್ಟರ್ !

ರೋಗೋಝೋವ್ ಹಾಗು ಇತರ ಹನ್ನೊಂದು ಮಂದಿ  6 ನೇ ಸೋವಿಯತ್ ಅಂಟಾರ್ಟಿಕಾದ ಆರೋಹಣದಲ್ಲಿದ್ದ ಸಮಯ.

1961 -29 ಏಪ್ರಿಲ್ ಬೆಳಿಗ್ಗೆ ರೋಗೋಝೋವ್ ಹೊಟ್ಟೆಯ ಬಲ ಭಾಗದ ಕೆಳಗೆ ತೀವ್ರವಾದ ನೋವು , ವಾಂತಿ , ಜ್ವರ , ಸುಸ್ತು , ಪಿತ್ತ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡವು
ಬಹಳಷ್ಟು ನೋವು ಅನುಭವಿಸಬೇಕಾಯ್ತು , ಎಷ್ಟು ಮಾತ್ರೆ ಮದ್ದುಗಳು ತೆಗೆದುಕೊಂಡರು ವಾಸಿಯಾಗಲಿಲ್ಲ.

1961 -30 ಏಪ್ರಿಲ್ ಬೆಳಿಗ್ಗೆ ನೋವು ನರಕದಷ್ಟೇ ತೀವ್ರವಾಯ್ತು ತಾನು ವಾಸಿಸುತ್ತಿದ್ದ ನೊವೊಲಝರ್ವ್ಸ್ಕಯ (Novolazarevskaya ) ದಿಂದ ಸೋವಿಯತ್ ರಿಸರ್ಚ್ ಸೆಂಟರ್ 1600 ಕಿ. ಮೀ ದೂರದಲ್ಲಿತ್ತು. ಆ ದಿನಗಳಲ್ಲಿ ಅಂಟಾರ್ಟಿಕಾದಲ್ಲಿ ಹಿಮವು ಹೆಚ್ಚಾಗಿದ್ದ ಕಾರಣ ವಿಮಾನಗಳು ಸಹ ಸ್ಥಗಿತಗೊಂಡಿದ್ದವು.

ತನ್ನ ಶಸ್ತ್ರ ಚಿಕಿತ್ಸೆಯನ್ನು ತಾನೇ ಮಾಡಿಕೊಳ್ಳದೆ ಬೇರೆ ವಿಧಿ ಇರಲಿಲ್ಲ.!

ಮೇ 1 -1961 ಎರಡು ಗಂಟೆಗೆ ಶಸ್ತ್ರ ಚಿಕಿತ್ಸೆ ಶುರುವಾಯ್ತು ಚಾಲಕ ಹಾಗು ಹವಾಮಾನ ತಂತ್ರಜ್ಞರಿಬ್ಬರ ಸಹಾಯದಿಂದ.
ರೋಗೋಝೋವ್ ತನ್ನ ಎದ ಭಾಗಕ್ಕೆ ತಿರುಗಿ ತನ್ನ ಬಲ ಭಾಗದ ಹೊಟ್ಟೆಯ ಮೇಲೆ ಕುಯ್ಯಲು ಶುರು ಮಾಡಿದ ಹಾಗು ತನ್ನ ಚಾಲಕ ಹಾಗು ಹವಾಮಾನ ತಂತ್ರಜ್ಞ ಸ್ನೇಹಿತರಿಬ್ಬರು ಕನ್ನಡಿಯನ್ನು ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದ ಜಾಗಕ್ಕೆ ಹಿಡಿದರು .

ರೋಗೋಝೋವ್ ಅರವಳಿಕೆ ಮದ್ದನ್ನು ಪಡೆದು ಅರೆ ಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿಯೇ ಉದರದ ಬಳಿ 10-12 ಸೆಂ ಛೇದೇಸಿದನು ಚಿಕಿತ್ಸೆ ಶುರುವಾದ 30 -40 ನಿಮಿಷಕ್ಕೆ ಪೂರ್ತಿ ಜ್ಞಾನವೇ ಹೋಯ್ತು.

ಅನಂತರ ಸ್ವಲ್ಪ ಸುಧಾರಿಸಿದ ಬಳಿಕ ಮತ್ತೆ ಶುರು ಮಾಡಿ ನಾಲ್ಕು ಗಂಟೆಯಷ್ಟರಲ್ಲಿ ಚಿಕಿತ್ಸೆ ಮುಗಿದಿತ್ತು.

ದೇಹದ ಉಷ್ಣತೆ ಐದು ದಿನಗಳಲ್ಲಿ ಮರುಕಳಿಸಿತು ಮತ್ತು ಹೊಲಿಗೆಗಳನ್ನು ಏಳು ದಿನಗಳ ನಂತರ ತೆಗೆಯಲಾಯಿತು. ಎಂದಿನಂತೆ ತನ್ನ ಕೆಲಸಕ್ಕೆ ಮರಳಿದನು.

1991 ರಲ್ಲಿ ರಷ್ಯಾ ಸೋವಿಯತ್ ಒಕ್ಕೂಟದ “Order of the Red Banner of Labour ” ಗೌರವನ್ನು ನೀಡಿ ಗೌರವಿಸಲಾಯ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top