fbpx
ಸಮಾಚಾರ

ಸದ್ಯದಲ್ಲೇ ದೇಶದ ಮೊದಲ 5G ಇಂಟರ್ನೆಟ್ ಪಡೆಯುವ ನಗರವಾಗಲಿದೆ ನಮ್ಮ ಬೆಂಗಳೂರು…

ಸದ್ಯದಲ್ಲೇ ದೇಶದ ಮೊದಲ 5G ಇಂಟರ್ನೆಟ್ ಪಡೆಯುವ ನಗರವಾಗಲಿದೆ ನಮ್ಮ ಬೆಂಗಳೂರು…

 

 

5ಜಿ ತಂತ್ರಜ್ಞಾನ ಹೊಂದಿದ ದೇಶದ ಮೊದಲ ನಗರ ಎಂಬ ಗೌರವಕ್ಕೆ ಬೆಂಗಳೂರು ಪಾತ್ರವಾಗಲಿದೆ. ಭಾರತದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಿರುವ ಏರ್‌ಟೆಲ್ ಕಂಪನಿಯು ಬೆಂಗಳೂರಿನಲ್ಲಿ 5G ಇಂಟರ್ನೆಟ್ ನೀಡಲು ಸಿದ್ಧತೆ ಆರಂಭಿಸಿದೆ.

 

 

ಬೆಂಗಳೂರಿನೊಂದಿಗೆ ಕೋಲ್ಕತಾ ನಗರದಲ್ಲೂ ಕೂಡ 5ಜಿ ಇಂಟರ್ನೆಟ್ ತಂತ್ರಜ್ಞಾನ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.. 5G ಇಂಟರ್ನೆಟ್ ನಲ್ಲಿ 1GB ವರೆಗೆ 500 MBPS’ಗಿಂತ ಜಾಸ್ತಿ ವೇಗದಲ್ಲಿ ಇಂಟರ್‌ನೆಟ್ ಲಭ್ಯವಾಗುತ್ತದೆ ಆದರೆ ಸದ್ಯಕ್ಕೆ ಏರ್‌ಟೆಲ್ ನೀಡುತ್ತಿರುವ 5G ಇಂಟರ್ನೆಟ್ ಬಳ್ಳಿ 4ಜಿ ಇಂಟರ್ನೆಟ್’ಗಿಂತಲೂ ಎರಡು ಅಥವಾ ಮೂರು ಪೆಟ್ಟಿನ ವೇಗದಲ್ಲಿ ಮಾತ್ರ ಇಂಟರ್‌ನೆಟ್ ನೀಡುವ ನಿರೀಕ್ಷೆ ಇದೆ.

 

 

ಸದ್ಯ ಏರ್ಟೆಲ್ ಕಂಪನಿಯು ನೀಡುತ್ತಿರುವ 4G ಇಂಟರ್ನೆಟ್ 16 ಎಂಬಿಪಿಎಸ್ ವೇಗದಲ್ಲಿ ಲಭ್ಯವಾಗುತ್ತಿದೆ. ಹೀಗೆ ಲೆಕ್ಕಾಚಾರ ಮಾಡಿದರೆ ಏರ್‌ಟೆಲ್‌ನ 5G ಇಂಟರ್ನೆಟ್ ತಂತ್ರಜ್ಞಾನದಲ್ಲಿ 40ರಿಂದ 45 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಲಭ್ಯವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top