fbpx
ದೇವರು

ಆಯುಧ ಪೂಜೆಯು ಹೇಗೆ ಆಚರಣೆಗೆ ಬಂತು ಅದರ ಹಿಂದಿರುವ ಕಥೆ ಏನು ಅಂತ ನಿಮಗೆ ಗೊತ್ತಾ ?

ಆಯುಧ ಪೂಜೆಯು ಹೇಗೆ ಆಚರಣೆಗೆ ಬಂತು ಅದರ ಹಿಂದಿರುವ ಕಥೆ ಏನು ಅಂತ ನಿಮಗೆ ಗೊತ್ತಾ ?

ಭಾರತದಾದ್ಯಂತ ಸಾಂಪ್ರದಾಯಿಕವಾಗಿ ನವರಾತ್ರಿ ಮತ್ತು ವಿಜಯದಶಮಿಯ ಹಬ್ಬವನ್ನು ಆಚರಿಸಲಾಗುತ್ತದೆ.ಸಾಂಪ್ರದಾಯಿಕವಾಗಿ ಮಹಾಭಾರತ ಕಾಲದಿಂದಲೂ ಈ ಆಯುಧ ಪೂಜೆಯನ್ನು ಆಚರಿಸುತ್ತಿದ್ದಾರೆ.

 

 

ಆಯುಧ ಪೂಜೆಯ ಆಚರಣೆಯ ಹಿಂದಿರುವ ಕಥೆ .

ಪಾಂಡವರ ಅಜ್ಞಾತವಾಸಕ್ಕೆ ಪ್ರವೇಶಿಸುವ ಮುನ್ನ ಅವರ ಮಹಾಶಕ್ತಿಯಾದ ಆಯುಧಗಳನ್ನು ಬನ್ನಿ ಮರದ ಬಳಿ ಬಚ್ಚಿಡುತ್ತಾರೆ.ಅಜ್ಞಾತವಾಸ ಮುಗಿದ ನಂತರ ಅವರು ಬನ್ನಿ ಮರದ ಬಳಿ ಬಚ್ಚಿಟ್ಟಿದ್ದ ತಮ್ಮ ಆಯುಧಗಳನ್ನು ತೆಗೆದುಕೊಂಡು ಪೂಜಿಸುತ್ತಾರೆ.ಈ ಪೂಜೆ ಮಾಡಿದ ದಿನವನ್ನೇ ಆಯುಧ ಪೂಜೆ ಎಂದು ಕರೆಯುತ್ತಾರೆ.
ಸಾಂಪ್ರದಾಯಿಕವಾಗಿ ಹಿಂದಿನ ಕಾಲದಲ್ಲಿ ಆಯುಧ ಪೂಜೆಯ ದಿನ ಸೈನಿಕರು ತಮ್ಮ ಆಯುಧಗಳಿಗೆ ಪೂಜಿಸುತ್ತಿದ್ದರು.ಕಾಲ ಕ್ರಮೇಣ ಆ ಸಂಪ್ರದಾಯವನ್ನು ನಾವು ದಿನನಿತ್ಯ ನಮ್ಮ ಜೀವನದಲ್ಲಿ ಉಪಯೋಗಿಸುವ ಎಲ್ಲಾ ವಸ್ತುಗಳನ್ನು ಒಳಗೊಂಡು ಪೂಜೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ.

 

 

ಆಯುಧ ಪೂಜೆಯಿಂದ ಮಾಲೀಕರು ತಮ್ಮ ಎಲ್ಲಾ ಉಪಕರಣಗಳನ್ನು ತೊಳೆದು ಹೂವುಗಳನ್ನು ಶೃಂಗಾರ ಮಾಡಿ ಕುಂಕುಮ,ಅರಿಷಿಣವನ್ನು,ಗಂಧವನ್ನು ಹಚ್ಚಿ ಅದಕ್ಕೆ ನಿಂಬೆಹಣ್ಣು ಇಲ್ಲವೇ ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸುತ್ತಾರೆ.

ವ್ಯವಸಾಯ ಉಪಕರಣದಿಂದ ಹಿಡಿದು ವಾಹನಗಳು,ಕಂಪ್ಯೂಟರ್ ಗಳು, ಹೀಗೆ ಮನೆಯಲ್ಲಿ ಉಪಯೋಗಿಸುವ ಪ್ರತಿಯೊಂದು ಎಲ್ಲಾ ಉಪಕರಣಗಳು ಸಹ ಈ ಆಯುಧ ಪೂಜೆಯಿಂದ ಗೌರವವನ್ನು ಸ್ವೀಕರಿಸುತ್ತಿವೆ.

 

 

ನೂತನ ವಾಹನ ಖರೀದಿ ಮಾಡುವುದರಿಂದ ಹೆಚ್ಚಾಗಿ ಆಯುಧ ಪೂಜೆಯ ದಿನದಂದೇ ತಮ್ಮ ಕಾರು,ಬೈಕಗಳಿಗೆ,ಪೂಜೆ ಸಲ್ಲಿಸಿ.ಮೊದಲು ಪ್ರಯಾಣ ಆರಂಭಿಸುತ್ತಾರೆ.ಹೀಗೆ ಮಾಡುವುದರಿಂದ ವಾಹನಗಳಿಗೆ ದೀರ್ಘ ಬಾಳಿಕೆ ಪ್ರಾಪ್ತಿಯಾಗುವುದರ ಜೊತೆಗೆ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂಬುದು ನಂಬಿಕೆಯಾಗಿದೆ.
ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳನ್ನು,ದೈವೀಕ ಶಕ್ತಿ ಇದ್ದೇ ಇರುತ್ತದೆ.ಇದರಿಂದಾಗಿ ಆಯುಧ ಪೂಜೆಯಿಂದ ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎನ್ನುವ ನಂಬಿಕೆ ಹಿಂದೂ ಧರ್ಮದಲ್ಲಿದೆ.

ಆಯುಧ ಪೂಜೆಯ ದಿನ ಮಾಡುವ ಪ್ರಾರ್ಥನೆ….

 

 

ಸರ್ವಾಯುಧಾನಾಂ ಪ್ರಥಮಂ
ನಿರ್ಮತಾಸಿ ಪಿನಾಕಿನ್ l
ಶೂಲಾಯುಧಾನ್ ವಿನಿಷ್ಕೃತ್ಯ ಕೃತಾವಾ
ಮುಷ್ಠಿ ಗ್ರಹಂ ಶುಭಂ l
ಚುರಿಕ ರಕ್ಷಮಾಂ ನಿತ್ಯಂ ಶಾಂತಿಂ
ಯಚ್ಛ ನಮೋಸ್ತುತೇ l.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top