fbpx
ದೇವರು

ತಾಯಿ ದುರ್ಗೆ ಬಗ್ಗೆ ಎಲ್ರು ತಿಳ್ಕೊಳ್ಳೆ ಬೇಕಾದ ಆಶ್ಚರ್ಯ ತರಿಸೋ 10 ವಿಷಯಗಳು

ದುರ್ಗಾ ದೇವಿಯು ಮಹಿಷಾಸುರನನ್ನು ಸಂಹರಿಸಿದ ಮೇಲೆ ಮೂರು ಲೋಕದಲ್ಲಿಯೂ  ಪ್ರಖ್ಯಾತಿಯಾಗಿ ಹೆಸರನ್ನು ಪಡೆದಳು. ಅಂತಹ ಶಕ್ತಿಶಾಲಿ ದೇವಿಗೆ ನಮ್ಮನ್ನು ರಕ್ಷಿಸುವ ಮತ್ತು ನಾಶ  ಮಾಡುವ ಎರಡು  ಶಕ್ತಿಯಿದೆ ಅಂತಹ ದೇವಿಯ ಬಗ್ಗೆ ಇನ್ನೂ ಕೆಲವು ವಿಷಯಗಳನ್ನು ತಿಳಿಯೋಣ ಬನ್ನಿ.

 

 

ಮಾತೇ ದುರ್ಗಾ ದೇವಿಯು ಅತ್ಯಂತ ಶಕ್ತಿಶಾಲಿ ಮತ್ತು ಪ್ರಮುಖ  ದೇವತೆಯಾಗಿದ್ದಾಳೆ  ಶಕ್ತಿ ದೇವತೆಗೆ ದುರ್ಗಾ ದೇವಿ ಎನ್ನುವ ಹೆಸರು  ರಾಕ್ಷಸನಾದ ಮಹಿಷಾಸುರನನ್ನು   ಸಂಹರಿಸಿದ ಮೇಲೆ ಬಂದಿದ್ದು. ಅಂತಹ ಅತ್ಯಂತ ಶಕ್ತಿಶಾಲಿಯಾದ  ದುರ್ಗಾ ದೇವಿಯ ಬೆಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಇನ್ನೂ  ಕೆಲವು ಕುತೂಹಲಕಾರಿಯಾಗಿರುವ  ಸಂಗತಿಗಳು ಇವೆ.

 

1.ದುರ್ಗಾ ದೇವಿಗೆ  8 ರಿಂದ 10 ಕೈಗಳು ಇದ್ದು ಆ ಎಂಟು ಕೈಗಳು ಸಹ ಎಂಟು ದಿಕ್ಕುಗಳನ್ನು ಪ್ರತಿನಿಧಿಸುತ್ತವೆ.ಹಿಂದೂ ಧರ್ಮದಲ್ಲಿ ಈ ಎಂಟು ಕೈಗಳು ಏನನ್ನು ಸೂಚಿಸುತ್ತವೆ ಎಂದರೆ ಆ 8 ಕೈಗಳು ಕೂಡ ಎಂಟು ದಿಕ್ಕುಗಳಿಂದಲೂ ಸಹ ತನ್ನ ಭಕ್ತರನ್ನು ರಕ್ಷಿಸುವಳು ಎಂಬ ಸಂಕೇತವಾಗಿವೆ.

 

 

2.ದುರ್ಗಾ ದೇವಿಯನ್ನು ಶಕ್ತಿ ಎಂದು ಪ್ರತಿಬಿಂಬಿಸಲಾಗಿದೆ.ಇವಳೇ ದೇವಿ ಶಕ್ತಿಯ ತತ್ವವಾಗಿದ್ದು ,ಈ ಜಗತ್ತನ್ನು ಸಂರಕ್ಷಿಸಲು ಅವಳ ಶಕ್ತಿಯಲ್ಲಿ ಪುರುಷ ದೇವರ ಶಕ್ತಿಯು ಸಹ  ಸಂಹಿಲನವಾಗಿದೆ.

 

 

3.ದುರ್ಗಿಯು ಸಿಂಹದ ಮೇಲೆ ಕುಳಿತು ಸವಾರಿ ಮಾಡುವುದೇ ಅವಳ ಚಿಹ್ನೆ ಅಥವಾ ಸಂಕೇತವಾಗಿದೆ.ಇದು  ಏನನ್ನು ಸೂಚಿಸುವುದು  ಎಂದರೆ ಅವಳು ಅತ್ಯಂತ ಶಕ್ತಿಶಾಲಿ ಯಾಗಿದ್ದು ಮತ್ತು ಕೆಟ್ಟ ಮತ್ತು ದುಷ್ಟ ಶಕ್ತಿಗಳನ್ನು ನಾಶ ಮಾಡುವುದ ಅಲ್ಲದೆ ಸದ್ಗುಣಗಳನ್ನು ಸಹ ರಕ್ಷಿಸುತ್ತಾಳೆ  .

 

 

4.ದುರ್ಗಾ ದೇವಿಯ ಕೈಯಲ್ಲಿ ಹಿಡಿದಿರುವ ತ್ರಿಶೂಲವು ಮೂರು ಗುಣಗಳನ್ನು ಪ್ರತಿಬಿಂಭಿಸುತ್ತದೆ.ಅವುಗಳಾದ ಸತ್ವ(ಮನಸ್ಸಿನ ಸ್ಥಿತಿ ), ರಾಜಸ (ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುವ ಶಕ್ತಿ), ತಾಮಸಿಕ( ಒತ್ತಡ ಮತ್ತು ಸೋಮಾರಿತನ ).ಶಾಂತಿ,ನೆಮ್ಮದಿಯನ್ನು ಗಳಿಸುವುದಕ್ಕೆ ಈ ಮೂರು ಶಕ್ತಿಗಳನ್ನು ಸಮಾನವಾಗಿ ಕಾಣ ಬೇಕಾಗುತ್ತವೆ.

 

 

5.ದುರ್ಗಾ ದೇವಿಯು ಶಿವನ ಅರ್ಧ ಭಾಗವೇ ಆಗಿದ್ದಾಳೆ.( ಹೊಳೆಯುವ ಶಿವನ  ದೇಹದ ಅರ್ಧ  ಭಾಗ ಗಮನಾರ್ಹವಾಗಿದೆ).ದೇವಿಯು ಅಭಿವ್ಯಕ್ತಿಯ ರೂಪವಾಗಿದ್ದು.ಶಿವನೇ ಈ  ವಿಶ್ವದ ಮತ್ತು ಇಡೀ ಜಗತ್ತಿನ ತಂದೆಯಾಗಿದ್ದು ದೇವಿಯು ತಾಯಿ ಯಾಗಿದ್ದಾಳೆ.

 

 

6.ಮೂರು ಕಣ್ಣಿರುವ ದುರ್ಗಾ ದೇವಿಯನ್ನು ತ್ರಯಂಬಕೇ ಎಂದು ಕರೆಯಲಾಗುತ್ತಾದೆ. ಅದು ಅಗ್ನಿ,ಸೂರ್ಯ, ಮತ್ತು ಚಂದ್ರನ ಪ್ರಾತಿನಿಧ್ಯವನ್ನು ವಹಿಸುತ್ತದೆ.

 

 

7.ಭಾರತದ ಪಶ್ಚಿಮ ದಿಕ್ಕಿನಲ್ಲಿರುವವರು  ನವರಾತ್ರಿಯನ್ನು ದಾಂಡಿಯ ಎಂಬ ಹೆಸರಿನಿಂದ   ಆಚರಿಸುತ್ತಾರೆ.

ಭಾರತದ ಉತ್ತರ ದಿಕ್ಕಿನಲ್ಲಿರುವವವರು  ನವರಾತ್ರಿಯನ್ನು ರಾಮಲೀಲ ಎಂದು ಆಚರಿಸುತ್ತಾರೆ .

ಪೂರ್ವದಲ್ಲಿ  ಗೋಲು ಅಥವಾ  ಬುನಾಲು ಎಂದು ನವರಾತ್ರಿಯನ್ನು  ಆಚರಿಸುತ್ತಾರೆ.

ದಕ್ಷಿಣ ಭಾರತದಲ್ಲಿ ನವರಾತ್ರಿಯನ್ನು  ದುರ್ಗಾ ಪೂಜೆಯೆಂದು ಅಥವಾ ದಸರಾ ಎಂದು  ಆಚರಿಸುತ್ತಾರೆ.

 

 

8.ದೇವಿಯು ಮಹಿಷಾಸುರನನ್ನು ಸಂಹರಿಸಿದಳು.ಅವಳು ಅವನನ್ನು ಸಂಹರಿಸಲು ಒಂಬತ್ತು ದಿನಗಳ ಕಾಲ ಅನೇಕ ಅವತಾರಗಳನ್ನು ತಾಳಿದ್ದಳು ಮತ್ತು  ಅನೇಕ ತಂತ್ರಗಳನ್ನು ಸಹ  ಉಪಯೋಗಿಸುತ್ತಾಳೆ.

 

 

9.ಪ್ರಾರಂಭದಲ್ಲಿ ದುರ್ಗಾ ದೇವಿಯ ಪೂಜೆಯನ್ನು ಬಸಂತಿ ಪೂಜೆಯೆಂದು ವಸಂತ ಮಾಸದಲ್ಲಿ ಆಚರಿಸಲಾಗುತ್ತಿತ್ತು.ಶರತ್ಕಾಲದ ಆಚರಣೆಯು ತುಂಬಾ ವಿಭಿನ್ನವಾಗಿದ್ದು.ಅದನ್ನು ಅಕಲ  ಭೋಧನ ಅಥವಾ ಋತುವಿನ ಆರಾಧನೆಯೆಂದು ಪೂಜಿಸಲಾಗುವುದು.

 

 

10.ಅವಳನ್ನು  ಶಕ್ತಿ ಎಂದು ನಿರೂಪಿಸಲಾಗಿದೆ ಅಥವಾ ಸ್ತ್ರೀ ತತ್ವ ದೈವೀಕ ಶಕ್ತಿಯಾಗಿದ್ದಾಳೆ.ಮತ್ತು ಇದರ ಜೊತೆಗೆ  ಜಗತ್ತಿನಲ್ಲಿ ಫಲವತ್ತತ್ತೆಯ ದೇವಿಯಾಗಿದ್ದು  ಮತ್ತು ಒಲವನ್ನು ಪ್ರೇರೇಪಿಸುವವಳು ದುರ್ಗಾ ದೇವಿಯೇ ಆಗಿದ್ದಾಳೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top