fbpx
ಮನೋರಂಜನೆ

ಬೆಳ್ಳಂ ಬೆಳಿಗ್ಗೆ “ತಾರಕ್” ಚಿತ್ರವನ್ನು ಥಿಯೇಟರ್ ನಿಂದಲೇ ಫೇಸ್ ಬುಕ್ ನಲ್ಲಿ ಲೈವ್ ಮಾಡಿದ ಕಿಡಿಗೇಡಿಗಳು..!

ಬೆಳ್ಳಂ ಬೆಳಿಗ್ಗೆ “ತಾರಕ್” ಚಿತ್ರವನ್ನು ಥಿಯೇಟರ್ ನಿಂದಲೇ ಫೇಸ್ ಬುಕ್ ನಲ್ಲಿ ಲೈವ್ ಮಾಡಿದ ಕಿಡಿಗೇಡಿಗಳು..!

 

 

ರಾಜ್ಯದಂತ ಇಂದು ತೆರೆ ಕಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ತಾರಕ್” ಚಿತ್ರವನ್ನು ಬೆಳ್ಳಂ ಬೆಳಿಗ್ಗೆ ಥಿಯೇಟರ್ ನಿಂದಲೇ ಫೇಸ್ ಬುಕ್ ನಲ್ಲಿ ಲೈವ್ ಮಾಡಲಾಗಿದೆ. ಇತ್ತೀಚಿಗೆ ದ್ರುವ ಸರ್ಜಾ ನಟನೆಯ ಭರ್ಜರಿ ಚಿತ್ರಕ್ಕೂ ಫೇಸ್ಬುಕ್ ನಲ್ಲಿ ಲೈವ್ ಮಾಡಿದ ಸಮಸ್ಯೆ ಎದುರಾಗಿತ್ತು.

 

 

ಅರ್ಲಿ ಮಾರ್ನಿಂಗ್ ಷೋ ನೋಡಲು ಹೋಗಿರುವ ಕೆಲವು ಕಿಡಿಗೇಡಿಗಳು ಈ ರೀತಿ ಚಿತ್ರದ ಪ್ರಮುಖ ಸೀನ್ ಗಳನ್ನು ಫೇಸ್ಬುಕ್ ನಲ್ಲಿ ಲೈವ್ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದು ಈ ಕಿಡಿಗೇಡಿಗಳ ವಿರುದ್ಧ ಸಂಭಂದ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ. ಪರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರಗಳಿಗೆ ಥಿಯೇಟರ್ ಗಳೇ ಸಿಗದೇ ಕನ್ನಡ ಚಿತ್ರರಂಗಕ್ಕೆ ಫೇಸ್ಬುಕ್ ಲೈವ್ ಎನ್ನುವುದು ಕಂಟಕವಾಗಿ ಪರಿಣಮಿಸಿದೆ.

 

 

ಹಾಗಾಗಿ ನಮ್ಮ ಅರಳಿಕಟ್ಟೆ ತಂಡವು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಒಳ್ಳೆಯ ಕನ್ನಡ ಚಿತ್ರಗಳನ್ನು ಈ ರೀತಿ ಫೇಸ್ ಬುಕ್ ನಲ್ಲಿ ಲೈವ್ ಮಾಡಬೇಡಿ ಕೊಳ್ಳಬೇಡಿ ಏಕೆಂದರೆ ಇದರಿಂದ ಕೋಟ್ಯಂತರ ರೂಪಾಯಿಯನ್ನು ಹಾಕಿ ಚಿತ್ರ ತೆಗೆದಿರುವ ನಿರ್ಮಾಪಕರಿಗೆ ನಷ್ಟವುಂಟಾಗುತ್ತದೆ. ಒಂದು ಚಿತ್ರಕ್ಕಾಗಿ ಸಾವಿರಾರು ಜನರು ಕಷ್ಟ ಪಟ್ಟಿರುತ್ತಾರೆ ಅವರ ಶ್ರಮಕ್ಕೆ ಸ್ವಲ್ಪ ಬೆಲೆ ಕೊಡಿ, ಒಂದು ಒಳ್ಳೆಯ ಕನ್ನಡ ಚಿತ್ರ ನೆಲಕಚ್ಚುವ ಹಾಗೆ ಮಾಡಬೇಡಿ, ಚಿತ್ರಮಂದಿರದಲ್ಲಿ ಯಾರಾದರೂ ಲೈವ್ ವಿಡಿಯೋ ಮಾಡುತ್ತಿದ್ದರೆ ಅಂತಹವರನ್ನು ತಡೆಯಿರಿ.

 

 

ಅಂದಹಾಗೆ ತಾರಕ್ ಚಿತ್ರದಲ್ಲಿ ನಟ ದೇವರಾಜ್ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮಿಲನ ಪ್ರಕಾಶ್ ತಾರಕ್ ಚಿತ್ರವನ್ನು ನಿರ್ದೇಶಿಸಿದ್ದು ದರ್ಶನ್ ಗೆ ನಾಯಕಿಯಾಗಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವತ್ಸವ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಲಕ್ಷ್ಮಣ ದುಷ್ಯಂತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top