fbpx
ಕನ್ನಡ

ಕರ್ನಾಟಕದ ‘ಕೋಲಾಟ’ ಗುಜರಾತ್ ನ ‘ದಾಂಡಿಯಾ’ ಆದ ಕಥೆ ,ಇದು ನಮ್ಮ ಸಂಸ್ಕೃತಿಯನ್ನು ಗುಜರಾತ್ ಸಾಲವಾಗಿ ಪಡೆದ ಕಥೆ ..

ಗುಜರಾತ್ ನ ಬೆಳವಣಿಗೆಯಲ್ಲಿ ಕನ್ನಡಿಗರ ಕೊಡುಗೆ , ಕನ್ನಡದ ಕಿಡಿಗಳೇ ಇದು ಕನ್ನಡಿಗರ ಸಂಸ್ಕೃತಿ , ಶೌರ್ಯ, ತ್ಯಾಗ, ಸಾಹಸವನ್ನು ಗುಜರಾತ್ ಗೆ ಎರವಲು ಕೊಟ್ಟ ಕಥೆ

garbaa

ಕ್ರಿ.ಶ 11 ನೇ ಶತಮಾನದ ಗೋವಾ ಕದಂಬ ಮನೆ ತನದ ಚಂದ್ರಪುರದ ರಾಜ ಜಯಕೇಶಿಯ ಮಗಳೇ ಈ ಮೀನಲ್ ದೇವಿ (ಮಾಯನಲ್ಲ ) ರಾಣಿ ಮೀನಲ್ ದೇವಿ ಅನಿಲ್ವಾಡ ದ ಸೋಲಂಕಿ ವಂಶದ ರಾಜ ಕರ್ಣ -1 ರನ್ನು ವಿವಾಹವಾಗಿದ್ದರು. ಕರ್ಣ -1 ಕರ್ಣಾವತಿ ಅಂದರೆ ಇಂದಿನ ಅಲಹಾಬಾದ್ ಅನ್ನು ಸಬರಮತಿ ನದಿಯ ದಂಡೆಯ ಮೇಲೆ ಸ್ಥಾಪಿಸಿದವರು ಇವರೇ .

2000px-indian_kadamba_empire_map-svg

ಈ ದಂಪತಿಗಳಿಗೆ ಒಂದೂ ಮುದ್ದಾದ ಗಂಡು ಮಗುವಿನ ಜನನವಾಗುತ್ತದೆ ಆ ಮಗುವಿನ ಹೆಸರು ಸಿದ್ಧರಾಜ ಜಯಸಿಂಹ , ರಾಜ ಒಂದನೇ ಕರ್ಣ ಯುದ್ಧದಲ್ಲಿ ಅಕಾಲಿಕ ಮರಣವನ್ನು ಹೊಂದುತ್ತಾನೆ ಆಗಿನ್ನೂ ಸಿದ್ಧರಾಜ ಜಯಸಿಂಹ ಪುಟ್ಟ ಬಾಲಕ .

ಪುಟ್ಟ ಬಾಲಕ ಸಿದ್ಧರಾಜ ಜಯಸಿಂಹನಿಗೆ ಪಟ್ಟಾಭಿಷೇಕ ಮಾಡದ ಪರಿಸ್ಥಿತಿಯಲ್ಲಿ ಸ್ವತಃ ರಾಣಿ ಮೀನಲ್ ದೇವಿ ರಾಜ್ಯಭಾರ ಮಾಡಲು ಶುರು ಮಾಡುತ್ತಾರೆ.ರಾಜ್ಯದ ಆಡಳಿತದ ಜೊತೆಗೇ ತನ್ನ ಮಗನ ಯುದ್ಧ ಭ್ಯಾಸ , ಆಡಳಿತ ರೂಡಿಗಳು ಇನ್ನಿತರ ರಾಜ ತಾಂತ್ರಿಕ ವಿಷಯಗಳ ಬಗ್ಗೆಯೂ ತರಬೇತಿ ಶುರುವಾಗುತ್ತದೆ.

ರಾಜಶೇಖರ್ ಸೂರಿ ರವರ ಪ್ರಬಂಧ ದಲ್ಲಿ ಇದರ ಉಲ್ಲೇಖವನ್ನು ಕಾಣಬಹುದು ,ಅನೇಕ ಕೆರೆ ಕಟ್ಟೆ ಗಳು, ಗುಡಿ ಗೋಪುರಗಳು ಇವರ ಕೊಡುಗೆಯಾಗಿವೆ, ಸೋಮನಾಥ ಪುರದ ದೇವಾಲಯದ ದರ್ಶನಕ್ಕೆ ಯಾತ್ರಿಗಳಿಗೆ ವಿಧಿಸಲಾಗಿದ್ದ ಸುಂಕವನ್ನು ತೆಗೆಸಿರುವುದು ಇವರ ವಿಶೇಷ .

musicians-and-dancers-sculptor-halebidu

ಎರಡೂ ಅತ್ಯುತ್ತಮ ಗುಣಮಟ್ಟದ ಕೆರೆ ಗಳಾದ ಗುಜರಾತ್ ನ ವಿರಮಗಮ್ ಬಳಿಯ ಮಿನಲ್ಸರ್ ಅಥವಾ ಮನಸ್ರ್ ಕೆರೆ ಹಾಗೂ ಅಹಮದಾಬಾದ್ನ ಧೋಲ್ಕಾ ದ ಬಳಿ ಮಾಳ್ವ ಕೆರೆ, ಕೆಲವು ಪುರಾವೆಗಳ ಪ್ರಕಾರ ಧೋಲ್ಕಾ ಕೆರೆ ಕಟ್ಟುವ ಸಂಧರ್ಭದಲ್ಲಿ ಕೆರೆ ಯೋಜನೆಯಂತೆ ಕೆರೆ ಹರಿಯುವ ಸ್ಥಳದಲ್ಲಿ ಒಬ್ಬ ಮಹಿಳೆಯ ಮನೆಯೊಂದಿತ್ತು , ಆಕೆ ರಾಣಿ ಮೀನಲ್ ದೇವಿಯನ್ನು ತನ್ನ ಮನೆಯನ್ನು ಕೆರೆ ಕಟ್ಟುವ ಸಲುವಾಗಿ ಕೆಡವದಿರಳು ಮನವಿ ಮಾಡುತ್ತಾಳೆ ,

ಮಹಿಳೆಯ ಅಹವಾಲನ್ನು ಆಲಿಸಿದ ರಾಣಿ ಮನೆಯನ್ನು ಕೆಡುವುದಿಲ್ಲವೆಂದು ಆಣೆ ಮಾಡುತ್ತಾರೆ ,ಇದರಿಂದ ಕೆರೆಯ ಯೋಜನಾ ನಕ್ಷೆಯನ್ನೇ ಬದಲಾಯಿಸುತ್ತಾರೆ ಹಾಗೂ ಮಹಿಳೆಗೆ ಅಪಾರ ಪ್ರಮಾಣದ ಕಾಣಿಕೆಯನ್ನು ನೀಡಲು ಇಚ್ಛಿಸುತ್ತಾರೆ ಇದನ್ನು ನಿರಾಕರಿಸುವ ಮಹಿಳೆ ನಿಮ್ಮ ಕೆರೆಯಿಂದ ನಾನು ಜನಪ್ರಿಯಳಾಗಳು ಇಚ್ಛಿಸುತ್ತೇನೆ ಎಂದು ಹೇಳಿ ಹೊರಟು ಬಿಡುತ್ತಾಳೆ. ಇದರಲ್ಲಿ ರಾಣಿಯ ಪ್ರಜಾ ಪ್ರೇಮ,ಕ್ಷೇಮಪರತೆ ಎದ್ದು ಕಾಣುತ್ತದೆ ,ಅಂದಿನಿಂದ ನಾಡಿನಾದ್ಯoತ “ನ್ಯಾಯವನ್ನು ಕಾಣ ಬೇಕಾದರೆ ಧೋಲ್ಕಾಗೆ ಹೋಗಿ ಮಾಳ್ವ ಕೆರೆಯನ್ನು ನೋಡು ” ಎಂಬ ಉಕ್ತಿ ಪ್ರಚಲಿತವಾಗುತ್ತದೆ .

ಮೀನಲ್ ದೇವಿಯವರನ್ನು ಅನೇಕ ಪುರಾಣ ಕತೆಗಳಲ್ಲಿ ಉಲ್ಲೇಖಿಸಿದ್ದಾರೆ , ಸಂಸ್ಕೃತದ ಮುದ್ರಿತಕುಮುದಾಚಂದ್ರ ಪ್ರಕರಣದಲ್ಲಿ ಜೈನರ ಪ್ರಮುಖ ಎರಡು ಪಂಗಡಗಳಾದ ಶ್ವೇತಂಬರ ಹಾಗೂ ದಿಗಂಬರರ ನಡುವಿನ ಕೆಲವು ಭಿನ್ನಾಭಿಪ್ರಾಯಗಳನ್ನು ಪ್ರಸ್ತಾಪಿಸುತ್ತಾರೆ ,ಇದರಲ್ಲಿ ಒಂದು ಪ್ರಮುಖ ಭಿನ್ನವಾದವೆನೆಂದರೇ ಹೆಂಗಸರು ನಿರ್ವಾಣ ಹೊಂದಬಹುದೇ ಅಥವಾ ಇಲ್ಲವೇ ಎಂಬುದು .

ಇದರಲ್ಲಿ ಶ್ವೇತಂಬರ ಜೈನರ ವಾದವೆನೆಂದರೆ ಸತ್ವ ವನ್ನು ದೈವಿಕ ಗುಣಗಳನ್ನು ಹೊಂದಿದ ಯಾವ ಮಹಿಳೆ ಬೇಕಾದರೂ ಮೋಕ್ಷ ವನ್ನು ಹೊಂದಬಹುದು ಎಂಬುದು ಇದಕ್ಕೆ ಇಂಬು ಕೊಡುವಂತೆ ಪೌರಾಣಿಕದ ಸೀತಾ ಮಾತೆ ಹಾಗೂ ರಾಣಿ ಮೀನಲ್ ದೇವಿಯನ್ನು ಉದಾಹರಣೆ ನೀಡುತ್ತಾರೆ.

dandiya

ಕರ್ನಾಟಕದ ನೃತ್ಯ ಪ್ರಕಾರವಾದ ಕೋಲಾಟ ಅಥವಾ ಹಳೆಯ ದ್ರಾವಿಡ ಪದ ‘ಕುರವೈ ಕುಟ್ಟು’ ವನ್ನು ಗುಜರಾತ್ ಗೆ ಪರಿಚಯಿಸಿದ್ದು ಸಹ ಇದೆ ಕದಂಬ ಸಿಂಹಿಣಿ ಮೀನಲ್ ದೇವಿ. ಈ ನೃತ್ಯ ಪ್ರಕಾರ ಗಾರ್ಭವೆಂದು ಗುಜರಾತ್ ನಲ್ಲಿ ಜನಪ್ರಿಯ ಗೊಳ್ಳುತ್ತದೆ ಹಾಗೂ ನವರಾತ್ರಿಯoದು ದುರ್ಗೆಯ ಗಾರ್ಭ ನೃತ್ಯ ರೂಪಕ ಆರಾಧನೆ ನಡೆಯುವುದು ವಿಶೇಷ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top