fbpx
ಆರೋಗ್ಯ

ಹಾಲು ಸಾಕಾಗ್ದೆ ನಿಮ್ಮ ಪುಟ್ಟ ಮಗು ಅಳ್ತಿದ್ರೆ ಬಾಣಂತಿ ತಾಯಿಯರು ಎದೆ ಹಾಲು ಜಾಸ್ತಿ ಮಾಡ್ಕೊಳ್ಳೋಕೆ ಹೀಗೆ ಮಾಡಿ

ತಾಯಿಯ ಎದೆ ಹಾಲನ್ನು ಹೆಚ್ಚಿಸಲು ಮನೆ ಮದ್ದುಗಳು.

ಮಗುವು ಜನಿಸಿದ ನಂತರ ಕೆಲವು ಬಾಣಂತಿಯರಿಗೆ ಎದೆಯ ಹಾಲು ಉತ್ಪತ್ತಿ ತುಂಬಾ ಕಡಿಮೆ ಇರುತ್ತದೆ ಅಥವಾ ಇನ್ನೂ ಕೆಲವರಿಗೆ ಉತ್ಪತ್ತಿಯೇ ಆಗುವುದಿಲ್ಲ.ಹೀಗಿರುವಾಗ ಮಗುವಿಗೆ ಹಾಲು ಒದಗಿಸುವುದು ಬಹಳ ಕಷ್ಟವಾಗಿಬಿಡುತ್ತದೆ.ಅಂತವರು ಆಸ್ಪತ್ರೆಗೆ ಹೋಗಿ ಅನೇಕ ಔಷಧಿಗಳನ್ನು ಸೇವಿಸುತ್ತಾರೆ.ಇವೆಲ್ಲಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಎದೆ ಹಾಲನ್ನು ಉತ್ಪತ್ತಿ ಮಾಡಬಹುದಾದಂತಹ ಸುಲಭ ಉಪಾಯಗಳು ಇಲ್ಲಿವೆ ನೋಡಿ.

 

 

1. ಸೊಂಪು-ಸೊಂಪನ್ನು ಚೆನ್ನಾಗಿ ತಿನ್ನಬೇಕು ಹೇಗೆಂದರೆ ಎರಡು ಚಮಚ ಸೊಂಪನ್ನು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ಹಾರಿಸಿ ಅದರ ಜೊತೆಗೆ ಬೆಲ್ಲ ಅಥವಾ ಕಲ್ಲು ಸಕ್ಕರೆಯನ್ನು ಹಾಕಿ ದಿನಕ್ಕೆ ಮೂರು ಬಾರಿ ಊಟದ ಅಥವಾ ತಿಂಡಿ ತಿಂದ ನಂತರ ಕುಡಿಯಿರಿ.ಹೀಗೆ ಮಾಡಿದರೆ ಎದೆ ಹಾಲು ಬೇಗ ಉತ್ಪತ್ತಿಯಾಗುತ್ತದೆ.

 

 

2. ಮೆಂತ್ಯಕಾಳು-ಎರಡು ಚಮಚದಷ್ಟು ಮೆಂತ್ಯಕಾಳನ್ನು ರಾತ್ರಿಯ ಸಮಯದಲ್ಲಿ ನೀರಿನಲ್ಲಿ ನೆನೆಸಿ ಬೆಳ್ಳಗ್ಗೆ ಎದ್ದ ಮೇಲೆ ಆ ನೀರು ಮತ್ತು ಮೆಂತ್ಯ ಎರಡನ್ನು ಅಗಿದು ತಿನ್ನಿ.
ಹೀಗೆ ತಿನ್ನಲು ಕಹಿ ಎನಿಸಿದರೆ ಗೋಧಿಯ ಪಾಯಸದ ಜೊತೆ ಎರಡು ಚಮಚ ಮೆಂತ್ಯ ಬೆರೆಸಿ ಪಾಯಸ ಮಾಡಿಕೊಂಡು ತಿನ್ನಿ. ಅಕ್ಕಿ ಬೆಲ್ಲದ ಪಾಯಸದ ಜೊತೆ ಎರಡು ಚಮಚ ಮೆಂತ್ಯ ಹಾಕಿ ಬೇಯಿಸಿಕೊಂಡು ತಿನ್ನಬಹುದು ಆಗ ಅದರ ಕಹಿ ರುಚಿ ಇರುವುದಿಲ್ಲ.

 

 

3. ಜೀರಿಗೆ-ಜೀರಿಗೆ ಕಷಾಯ ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆಗೆ ಬಹಳ ಒಳ್ಳೆಯ ಮನೆಮದ್ದು. ಎರಡು ಗ್ರಾಂ ಜೀರಿಗೆ ಅಂದರೆ ಒಂದು ಚಮಚ ಜೀರಿಗೆ ಪುಡಿಯನ್ನು ಶುದ್ಧವಾದ ಹಸುವಿನ ತುಪ್ಪದಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ತಿನ್ನಿ ಬೆಳಗ್ಗೆ ಮತ್ತು ರಾತ್ರಿ.ಜೀರಿಗೆಯನ್ನು ಮೊದಲೇ ಉರಿದು ಮಿಕ್ಸಿಯಲ್ಲಿ ಪುಡಿಮಾಡಿ ಒಂದು ಗಾಜಿನ ಡಬ್ಬಕ್ಕೆ ಹಾಕಿಟ್ಟುಕೊಳ್ಳಿ.

ಬೆಳಗಿನ ವೇಳೆಯಲ್ಲಿ ಶುಂಠಿಯ ಕಷಾಯ ಮತ್ತು ರಾತ್ರಿ ಜೀರಿಗೆ ಕಷಾಯ ಹೀಗೆ ಬೇಕಾದರೂ ಕುಡಿಯಬಹುದು.

 


4. ಒಣ ಶುಂಠಿಯ ಪುಡಿ-ಒಣ ಶುಂಠಿಯನ್ನು ಚೆನ್ನಾಗಿ ಪುಡಿ ಮಾಡಿ ಒಂದು ಗಾಜಿನ ಡಬ್ಬಿಗೆ ಹಾಕಿ ಇಟ್ಟುಕೊಳ್ಳಿ. ಒಂದು ಚಿಕ್ಕ ಚಮಚ ಶುಂಠಿಯ ಪುಡಿ ಮತ್ತು 4 ರಿಂದ 5 ಗ್ರಾಂ ಬೆಲ್ಲ ಸೇರಿಸಿ ದಿನಕ್ಕೆ ಎರಡು ಬಾರಿಯಂತೆ ತಿನ್ನಿ.

 


5. ಮಿಶ್ರಣ-ಅಂದರೆ 50 ಗ್ರಾಂ ಜೀರಿಗೆ,50 ಗ್ರಾಂ ಕಲ್ಲು ಸಕ್ಕರೆ,50 ಗ್ರಾಂ ತುಪ್ಪ ಈ ಮುರನ್ನೂ ಮಿಕ್ಸಿಯಲ್ಲಿ ಪುಡಿ ಮಾಡಿ ಒಂದು ಗಾಜಿನ ಬಾಟಲಿಗೆ ಹಾಕಿ ಇಟ್ಟುಕೊಳ್ಳಿ.ಪ್ರತಿದಿನ ಒಂದು ದಿನಕ್ಕೆ ಮೂರು ಬಾಯಿಯಂತೆ ಒಂದು ಚಮಚದಷ್ಟನ್ನು ಹಾಗೆಯೇ ತಿನ್ನಬಹುದು ಯಾವುದೇ ಕಹಿ ಇರುವುದಿಲ್ಲ.ಹೀಗೆ ಒಂದು ವಾರ ಮಾಡಿದರೆ ಎದೆ ಹಾಲು ಸರಾಗವಾಗಿ ಉತ್ಪತ್ತಿಯಾಗುತ್ತದೆ.


6. ಶತಾವರಿ ಗಿಡದ ಬೇರಿನ ಚೂರ್ಣ-ಶತಾವರಿ ನೋಡಿರುವವರು ಬಹಳ ಅಪರೂಪ. ಇದನ್ನು ಆಯುರ್ವೇದದಲ್ಲಿಯೂ ಸಹ ಉಪಯೋಗಿಸುತ್ತಾರೆ ನಿಮಗೆ ಈ ಗಿಡದ ಬೇರು ಸಿಗದಿದ್ದಲ್ಲಿ ಆಯುರ್ವೇದ ಮಳಿಗೆಗಳಲ್ಲಿ ಶತಾವರಿ ಚೂರ್ಣ ಎಂದು ಕೇಳಿದ್ರೆ ಕೊಡುತ್ತಾರೆ ಅದು ಪತಂಜಲಿ,ಹಿಮಾಲಯ ಹೀಗೆ ವಿವಿಧ ರೀತಿಯ ಬ್ರಾಂಡನ ಹೆಸರಿನಲ್ಲಿ ಅಂಗಡಿಗಳಲ್ಲಿ ಸಿಗುತ್ತದೆ. ಎರಡು ಚಮಚದಷ್ಟು ಚೂರ್ಣವನ್ನು ಬೆಚ್ಚಗಿನ ಹಾಲಿನಲ್ಲಿ ಬೆಲ್ಲ ಅಥವಾ ಕಲ್ಲು ಸಕ್ಕರೆ ಸೇರಿಸಿ ಮಿಶ್ರಣ ಮಾಡಿ ಕುಡಿಯಿರಿ.ಎರಡು ವಾರಗಳೊಳಗೆ ಎದೆಯ ಹಾಲು ಎತ್ತೆಚ್ಛವಾಗಿ ಉತ್ಪತ್ತಿಯಾಗಲು ಶುರುವಾಗುತ್ತದೆ.

 


7. ಬಾರ್ಲಿ-ಬಾರ್ಲಿ ಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಹಾರಿಸಿ ಆ ನೀರನ್ನು ಕುಡಿಯಬೇಕು 10 ರಿಂದ 15 ದಿನಗಳ ಒಳಗಾಗಿ ಎದೆಹಾಲು ಉತ್ಪತ್ತಿಯಾಗುವ ಸೂಚನೆಗಳು ಕಾಣುತ್ತವೆ.

 


8. ಗೋಧಿ ರೆವೆ ಪಾಯಸ- 200 ಗ್ರಾಂ ಗೋಧಿ,ಐದು ಎಸಳು ಬೆಳ್ಳುಳ್ಳಿ,ಐದು ಏಲಕ್ಕಿ,ಒಂದು ಚಿಟಕಿಯಷ್ಟು ಚೆಕ್ಕೆ, ಒಂದು ಚಮಚ ಜೀರಿಗೆ ಪುಡಿ ಮತ್ತು ಅರ್ಧ ಲೀಟರ್ ಹಾಲಿನಲ್ಲಿ ಈ ಮೇಲೆ ಹೇಳಿರುವ ಎಲ್ಲವನ್ನು ಹಾಕಿ ಪಾಯಸ ಮಾಡಿ ಕುಡಿಯಿರಿ.10 ರಿಂದ 15 ದಿನಗಳ ಒಳಗಾಗಿ ಎದೆ ಹಾಲಿಗೆ ಯಾವುದೇ ಕೊರತೆ ಬರದೆ ಸುಗಮವಾಗಿ ಉತ್ಪತ್ತಿಯಾಗುತ್ತದೆ.

 


9. ಇಷ್ಟೇ ಅಲ್ಲದೇ ಪ್ರತಿದಿನ ದ್ರಾಕ್ಷಿ ರಸ ಒಂದು ಲೋಟ ಕುಡಿಯಿರಿ.

 


10. ಗೋಧಿ ಹುಲ್ಲಿನ ರಸ ಅಥವಾ ಜ್ಯೂಸ್ ಪ್ರತಿದಿನ ಒಂದು ಲೋಟ ಕುಡಿಯಬೇಕು.

 


11. ಇದೆಲ್ಲದರ ಜೊತೆಗೆ ಕ್ಯಾರೆಟ್ ಜ್ಯೂಸ್, ಬೀಟ್ರೂಟ್ ಜ್ಯೂಸ್, ಪಾಲಕ್ ಸೊಪ್ಪು,ಪ್ರತಿ ದಿನ ಅರ್ಧ ಲೀಟರ್ ಹಾಲು,ಎಂಟು ಲೋಟ ನೀರು,ತೊಂಡೆಕಾಯಿ, ಬೆಳ್ಳುಳ್ಳಿ, ಮೆಂತ್ಯ,ಜೀರಿಗೆ,ಸೊಂಪು ಶುದ್ದ ಹಸುವಿನ ತುಪ್ಪ, ಮೊಳಕೆ ಕಾಳುಗಳು,ಗೆಣಸು,ಪರಂಗಿ ಹಣ್ಣು,ಸೋರೆಕಾಯಿ ಇವೆಲ್ಲವುಗಳನ್ನು ನಿಮ್ಮ ದಿನ ನಿತ್ಯದ ಆಹಾರದಲ್ಲಿ ಯಥೇಚ್ಛವಾಗಿ ಬಳಸಿ ಮತ್ತು ಮಗುವಿಗೆ ತಪ್ಪದೇ ಮೊದಲು 6 ತಿಂಗಳ ವರೆಗೂ ಎದೆಹಾಲನ್ನೇ ಕುಡಿಸಿ ಆಗ ಮಗುವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top