fbpx
ಸಮಾಚಾರ

ತಾರಕ್ ಚಿತ್ರವನ್ನು ಲೈವ್ ಮಾಡಿದ ಆಸಾಮಿ ಲೈವ್ ಮಾಡಿದಕ್ಕೆ ಕೊಟ್ಟ ಕಾರಣ ಏನು ಗೊತ್ತಾ?

ತಾರಕ್ ಚಿತ್ರವನ್ನು ಲೈವ್ ಮಾಡಿದ ಆಸಾಮಿ ಲೈವ್ ಮಾಡಿದಕ್ಕೆ ಕೊಟ್ಟ ಕಾರಣ ಏನು ಗೊತ್ತಾ?

 

 

ನೆನ್ನೆ ರಾಜ್ಯದಂತ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿರುವ ತಾರಕ್ ಚಿತ್ರವನ್ನು ಕೆಲವು ಕಿಡಿಗೇಡಿಗಳು ಚಿತ್ರಮಂದಿರದಿಂದಲೇ ಫೇಸ್ ಬುಕ್ ಲೈವ್ ಮಾಡಿದ್ದರು. ಇದನ್ನು ಅರಳಿಕಟ್ಟೆ ವರದಿ ಮಾಡಿತ್ತು. ಹೀಗೆ ಲೈವ್ ಮಾಡಿದವರಲ್ಲಿ ವ್ಯಕ್ತಿಯೊಬ್ಬನು ತನ್ನ ತಪ್ಪನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾನೆ.. ಮುಂದೆ ಓದಿ.

 

 

“ನಾವೆಲ್ಲ ಡಾನ್ಸ್ ಮಾಡ್ತಿದ್ವಿ ನನ್ ಮೊಬೈಲ್ ನಮ್ ಹುಡ್ಗ ಅತ್ರ ಇತ್ತು ಅವನು ಸೆಲೆಬ್ರೇಶನ್ ಮಾಡ್ತಿರೋದು ಲೈವ್ ಮಾಡ್ತಿನಿ ಅಂದ ಮಾಡು ಅಂದೇ ಅವ್ನು ಸ್ಟಾರ್ಟಿಂಗ್ ಎಂಟ್ರಿ ಸೀನ್ ಮಾಡಿದನೇ ನನ್ನ ಕಡೆಯಿಂದ ಸಾರಿ…. ನಂಗೆ ಇದೆಲ್ಲ ಗೊತ್ತೆ ಇಲ್ಲ ನಮ್ ಫ್ರಂಡ್ಜ್ ಹೇಳುದ್ಮೇಲೆ ಗೊತಾಯ್ತು … ಬೆಳಿಗ್ಗೆನೇ ವಿಡಿಯೋ ಡಿಲೀಟ್ ಮಾಡಿದೀನಿ” ಎಂದು ಕ್ಷಮೆ ಕೇಳಿದ್ದಾನೆ.

 

 

ನಮ್ಮ ಅರಳಿಕಟ್ಟೆ ತಂಡವು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಒಳ್ಳೆಯ ಕನ್ನಡ ಚಿತ್ರಗಳನ್ನು ಈ ರೀತಿ ಫೇಸ್ ಬುಕ್ ನಲ್ಲಿ ಲೈವ್ ಮಾಡಬೇಡಿ ಕೊಳ್ಳಬೇಡಿ ಏಕೆಂದರೆ ಇದರಿಂದ ಕೋಟ್ಯಂತರ ರೂಪಾಯಿಯನ್ನು ಹಾಕಿ ಚಿತ್ರ ತೆಗೆದಿರುವ ನಿರ್ಮಾಪಕರಿಗೆ ನಷ್ಟವುಂಟಾಗುತ್ತದೆ. ಒಂದು ಚಿತ್ರಕ್ಕಾಗಿ ಸಾವಿರಾರು ಜನರು ಕಷ್ಟ ಪಟ್ಟಿರುತ್ತಾರೆ ಅವರ ಶ್ರಮಕ್ಕೆ ಸ್ವಲ್ಪ ಬೆಲೆ ಕೊಡಿ, ಒಂದು ಒಳ್ಳೆಯ ಕನ್ನಡ ಚಿತ್ರ ನೆಲಕಚ್ಚುವ ಹಾಗೆ ಮಾಡಬೇಡಿ, ಚಿತ್ರಮಂದಿರದಲ್ಲಿ ಯಾರಾದರೂ ಲೈವ್ ವಿಡಿಯೋ ಮಾಡುತ್ತಿದ್ದರೆ ಅಂತಹವರನ್ನು ತಡೆಯಿರಿ.

 

 

ಅಂದಹಾಗೆ ತಾರಕ್ ಚಿತ್ರದಲ್ಲಿ ನಟ ದೇವರಾಜ್ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮಿಲನ ಪ್ರಕಾಶ್ ತಾರಕ್ ಚಿತ್ರವನ್ನು ನಿರ್ದೇಶಿಸಿದ್ದು ದರ್ಶನ್ ಗೆ ನಾಯಕಿಯಾಗಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವತ್ಸವ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಲಕ್ಷ್ಮಣ ದುಷ್ಯಂತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top