fbpx
ಸಮಾಚಾರ

ಭಾರತದಲ್ಲಿ ಭಾನುವಾರವೇ ಏಕೆ ರಜಾದಿನವಾಗಿದೆ ಗೊತ್ತಾ? ಇದಕ್ಕೆ ಕಾರಣವಾದ ಈ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು.

ಭಾರತದಲ್ಲಿ ಭಾನುವಾರವೇ ಏಕೆ ರಜಾದಿನವಾಗಿದೆ ಗೊತ್ತಾ? ಇದಕ್ಕೆ ಕಾರಣವಾದ ಈ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು.

 

 

ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರೇತರ ಸಂಸ್ಥೆಗಳೂ ಸೇರಿದಂತೆ ಎಲ್ಲಾ ಕೆಲಸಗಳಿಗೂ ಭಾನುವಾರ ರಜಾದಿನವಾಗಿರುತ್ತೆ. ಈ ವಿಷ್ಯ ನಿಮಗೆಲ್ಲರಿಗೂ ಗೊತ್ತು ಆದರೆ ವಾರದ ಏಳು ದಿನಗಳಲ್ಲಿ ಏಕೆ ಭಾನುವಾರದ ದಿನವೇ ರಜೆಯನ್ನು ನೀಡಲಾಗಿದೆ ಎಂದು ನಿಮಗೇನಾದರೂ ತಿಳಿದಿದೆಯೇ. ಆ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ ಬನ್ನಿ.

 

 

ಭಾರತದಲ್ಲಿ ಪ್ರತಿ ಭಾನುವಾರ ರಜೆ ದಿನವನ್ನಾಗಿ ಜಾರಿಗೆ ತಂದವರು ನಾರಾಯಣ್ ಮೇಘಾಜಿ ಲೋಖಂಡೇ. ಭಾರತದ ಟ್ರೇಡ್ ಯೂನಿಯನ್ ಚಳುವಳಿಯ ಪಿತಾಮಹ ಎಂದೇ ಕರೆಯಲ್ಪಡುವ ನಾರಾಯಣ್ ಮೇಘಾಜೀ ಲೋಖಂಡೆ ಅವರು ಭಾರತದ ಕಾರ್ಮಿಕ ಚಳುವಳಿಯ ಪ್ರಮುಖರಾಗಿದ್ದು, 1848ರಲ್ಲಿ ಮುಂಬಯಿಯ ಥಾಣೆಯಲ್ಲಿ ಜನಿಸಿದರು. ಪಾಶ್ಚಿಮಾತ್ಯ ದೇಶದಲ್ಲಿ ಶಿಕ್ಷಣ ಪಡೆದ ಮೊದಲ ಬ್ರಾಹ್ಮಣೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

 

19 ನೇ ಶತಮಾನದಲ್ಲಿ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿಗಳನ್ನು ಸುಧಾರಿಸುವುದಕ್ಕಾಗಿ ಮತ್ತು ಸಮಾಜದಲ್ಲಿನ ಜಾತಿವ್ಯವಸ್ಥೆ ಮತ್ತು ಕೋಮು ವಿವಾದಗಳ ಕುರಿತು ಧೈರ್ಯದ ಪ್ರಯತ್ನಗಳನ್ನೂ ಮಾಡಿದಂತ ವ್ಯೆಕ್ತಿ ನಾರಾಯಣ್ ಮೇಘಾಜಿ ಲೋಖಂಡೇ.

ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಇದ್ದಂತಹ ಕಾಲದಲ್ಲಿ ನಮ್ಮ ಭಾರತೀಯರನ್ನು ವಾರದ ಏಳು ದಿನ ಕೂಡ ದುಡಿಸಿಕೊಳ್ಳುತ್ತಿದ್ದರು. ಇದ ವಿರುದ್ಧ ದನಿ ಎತ್ತಿದ ನಾರಾಯಣ್ ಮೇಘಾಜಿ ಲೋಖಂಡೇಯವರು ನಮಗೆ ವಾರದಲ್ಲಿ ಒಂದು ದಿನ ರಜೆ ಬೇಕು ಎಂದು ಬ್ರಿಟಿಷ್ ಸರ್ಕಾರದ ಮುಂದೆ ಬೇಡಿಕೆಯನ್ನಿಟ್ಟಿದ್ದರು. ಅದಕ್ಕೆ ಬ್ರಿಟಿಷ್ ಸರ್ಕಾರ ತಿರಸ್ಕರಿಸಿತ್ತು. ನಂತರ 1884ರಲ್ಲಿ ಮೊದಲ ಕಾರ್ಮಿಕ ಸಂಘಟನೆ ’ಬಾಂಬೆ ಮಿಲ್ ಹ್ಯಾಂಡ್ಸ್ ಅಸೋಸಿಯೇಶನ್’ನ್ನು ಸ್ಥಾಪಿಸಿ ಅದರ ಮೂಲಕ ಕೆಲವು ಹೋರಾಟಗಳನ್ನು ಮಾಡಿ ಕಾರ್ಮಿಕರಿಗೆ ಭಾನುವಾರ ರಜೆ ನೀಡುವಂತೆ ಮಾಡಿದರು.

 

 

ಭಾನುವಾರ ರಾಜ ದಿನವನ್ನಾಗಿ ಮಾಡಿದ ನಂತರ ಕಾರ್ಮಿಕರಿಗೆ ಮಧ್ಯಾಹ್ನದ ವೇಳೆ ಅರ್ಧ ಗಂಟೆ ವಿರಾಮ ನೀಡಬೇಕು ಎಂಬುದನ್ನು ಜಾರಿಗೊಳಿಸಿದ್ದರು. ನಾರಾಯಣ್ ಮೇಘಾಜೀ ಲೋಖಂಡೆ ಅವರ ಸ್ಮರಣಾರ್ಥವಾಗಿ ಭಾರತೀಯ ಅಂಚೆ ಇಲಾಖೆಯು 2005ರ ಮೇ 3ರಂದು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿತ್ತು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top