ಅಲಮೇಲಮ್ಮನ ಶಾಪ
ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲೀ, ಮೈಸೂರು ರಾಜರಿಗೆ ಮಕ್ಕಳಾಗದೆ ಹೋಗಲಿ” ಈ ಶಾಪವನ್ನು 16ನೇ ಶತಮಾನದಲ್ಲಿ ಮೈಸೂರು ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣ ವಿಜಯನಗರದ ಅರಸರಿಗೆ ಸೇರಿದ್ದು, ಶ್ರೀರಂಗ ರಾಯ ಎಂಬ ಪ್ರತಿನಿಧಿ ನೋಡಿಕೊಳ್ಳುತ್ತಿದ್ದರು ಇವರ ಪತ್ನಿ ಅಲಮೇಲಮ್ಮನವರು.
ಶ್ರೀರಂಗರಾಯರಿಗೆ ಬೆನ್ನುಫಣಿ ರೋಗವಿತ್ತು.ಅವರು ತಲಕಾಡಿಗೆ ಹೋಗಿ ಅಲ್ಲಿ ವೈದ್ಯೇಶ್ವರ ಸ್ವಾಮಿಯ ಪೂಜೆ ಮಾಡುತ್ತಿದ್ದರು ಆದರು ಶ್ರೀರಂಗರಾಯರಿಗೆ ರೋಗ ನಿವಾರಣೆ ಆಗಲಿಲ್ಲ ನಂತರ ತಲಕಾಡಿನಲ್ಲಿಯೆ ಮರಣಹೊಂದಿದರು.
ಅವರ ಮರಣ ನಂತರ ಅಲಮೇಲಮ್ಮ ತಲಕಾಡಿನ ಪಕ್ಕದಲ್ಲಿ ನದಿಯ ಆಚೆಗಿರುವ ಮಾಲಂಗಿ ಎನ್ನುವ ಗ್ರಾಮದಲ್ಲಿ ಹೋಗಿ ನೆಲಸಿದಳು. ಶ್ರೀರಂಗಪಟ್ಟಣ ಮೈಸೂರು ಮನೆತನಕ್ಕೆ ಸೇರಿದ ರಾಜ ಒಡೆಯರ ಕೈವಶವಾಯಿತು.
ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದಲ್ಲಿ ಮಂಗಳವಾರ, ಶ್ರುಕ್ರವಾರ, ದೇವಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಆ ಸಂಧರ್ಭದಲ್ಲಿ ಅಲಮೇಲಮ್ಮ ತಮ್ಮಲ್ಲಿದ್ದ ಅಮೂಲ್ಯವಾದ ಆಭರಣಗಳನ್ನು ದೇವರಿಗೆ ಅಲಂಕರಿಸಿ ಮತ್ತೆ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಳು.ಈ ವಿಷಯವು ಅಧಿಕಾರಿಗಳಿಂದ ಮೈಸೂರು ರಾಜರಿಗೆ ತಿಳಿಯುತ್ತದೆ.
ರಾಜರು ಅಲಮೇಲಮ್ಮನವರಿಗೆ ಒಡವೆ ಗಳನ್ನು ತಮಗೆ ಒಪ್ಪಿಸಬೇಕೆಂದು ಆಜ್ಞೆ ಹೊರಡಿಸುತ್ತಾರೆ ,ಇದರಿಂದ ಬಹಳವಾಗಿ ಸಂಕಟ ಪಟ್ಟುಕೊಂಡು , ತಮ್ಮ ಮುತ್ತಿನ ಮೂಗುತಿಯನ್ನು ನದಿಯ ತೀರಕ್ಕೆ ಎಸೆದು ತಮ್ಮ ಎಲ್ಲ ಒಡವೆಗಳನ್ನು ಸೆರಗಿನಲ್ಲಿ ಮಡಿಲಿಗೆ ಕಟ್ಟಿಕೊಂಡು “ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲೀ, ಮೈಸೂರು ರಾಜರಿಗೆ ಮಕ್ಕಳಾಗದೆ ಹೋಗಲಿ” ಎಂದು ಶಾಪ ನೀಡಿ ಮಾಲಂಗಿ ಸಮೀಪದ ಕಾವೇರಿ ನದಿಗೆ ಹಾರಿ ಸತ್ತು ಹೋದರು.
ಮೈಸೂರು ಒಡೆಯರ ವಂಶಾವಳಿ
1399ರಿಂದ ಶುರುವಾದ ಮೈಸೂರು ಸಾಮ್ರಾಜ್ಯದ ಆಳ್ವಿಕೆ
1.ಆದಿ ಯದುರಾಯ ಗದ್ದುಗೆ ಏರಿದರು
2.ಹಿರಿಯ ಬೆಟ್ಟದ ಚಾಮರಾಜ ವಡೆಯರ್ 1423-1459
3.ತಿಮ್ಮರಾಜ ವಡೆಯರ್ 1459-1478
4.ಹಿರಿಯ ಇಮ್ಮಡಿ ಚಾಮರಾಜ ವಡೆಯರ್ 1478-1513
5.ಹಿರಿಯ ಬೆಟ್ಟದ ಮುಮ್ಮಡಿ ಚಾಮರಾಜ ವಡೆಯರ್ 1513-1553
6.ಇಮ್ಮಡಿ ತಿಮ್ಮರಾಜ ವಡೆಯರ್ 1553-1572
7.ಬೋಳ ನಾಲ್ವಡಿ ಚಾಮರಾಜ ವಡೆಯರ್ 1572-1576
8.ಬೆಟ್ಟದ ಮುಮ್ಮಡಿ ಚಾಮರಾಜ ವಡೆಯರ್ 1576-1578
9.ಒಂದನೇ ರಾಜ ವಡೆಯರ್ 1578-1617
(1612 ರಲ್ಲಿ ಅಲಮೇಲಮ್ಮನ ಶಾಪ ಶುರುವಾಯ್ತು ಅಂತ ಹೇಳಲಾಗುತ್ತದೆ)
10.ಆರನೇ ಚಾಮರಾಜ ವಡೆಯರ್
1617-1637
11.ಇಮ್ಮಡಿ ರಾಜ ವಡೆಯರ್ 1637-1638
12.ಒಂದನೇ ಕಂಠೀರವ ನರಸರಾಜ ವಡೆಯರ್ 1638-1659
13.ದೊಡ್ಡ ದೇವರಾಜ ವಡೆಯರ್ 1659-1673 (ದತ್ತುಪುತ್ರ)
14.ಚಿಕ್ಕ ದೇವರಾಜ ವಡೆಯರ್ 1673-1704 (ದತ್ತುಪುತ್ರ)
15.ಕಂಠೀರವ ನರಸರಾಜ ವಡೆಯರ್ 1704-1714
16.ಒಂದನೇ ದೊಡ್ಡ ಕೃಷ್ಣರಾಜ ವಡೆಯರ್ 1714-1732
17.ಏಳನೇ ಚಾಮರಾಜ ವಡೆಯರ್ 1732-1734 (ದತ್ತುಪುತ್ರ)
18.ಇಮ್ಮಡಿ ಕೃಷ್ಣ ರಾಜ ವಡೆಯರ್ 1734-1766 (ದತ್ತುಪುತ್ರ)
19.ನಂಜರಾಜ ವಡೆಯರ್ 1766-1770
20. ಎಂಟನೇ ಬೆಟ್ಟದ ಚಾಮರಾಜ ವಡೆಯರ್ 1770-1776
21.ಒಂಬತ್ತನೇ ಖಾಸಾ ಚಾಮರಾಜ ವಡೆಯರ್ 1776-1796
22.ಮುಮ್ಮಡಿ ಕೃಷ್ಣ ರಾಜ ವಡೆಯರ್ 1799-1868
23.ಹತ್ತನೇ ಚಾಮರಾಜ ವಡೆಯರ್1868 – 1894 (ದತ್ತುಪುತ್ರ)
24.ನಾಲ್ವಡಿ ಕೃಷ್ಣ ರಾಜ ವಡೆಯರ್1902-1940
25.ಹನ್ನೊಂದನೇ ಚಾಮರಾಜ ವಡೆಯರ್(1940-1947) (ದತ್ತುಪುತ್ರ)
26. ಶ್ರೀಕಂಠದತ್ತ ನರಸಿಂಹರಾಜ್ ವಡೆಯರ್ ಬಹದ್ದೂರ್ (1953-2013)
27.ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್(2015 ರಿಂದ ಪ್ರಸ್ತುತ) (ದತ್ತುಪುತ್ರ)
ಈ ವಂಶವಳಿಯನ್ನು ಗಮನಿಸಿದರೆ 1612 ರಿಂದ 7 ರಾಜರು ದತ್ತು ಪುತ್ರರಾಗಿದ್ದಾರೆ.
ಇನ್ನೊಂದೆಡೆ ಕೆಲವು ಇತಿಹಾಸಕಾರರ ಪ್ರಕಾರ ಬ್ರಿಟಿಷ್ ವೈಸ್ ರಾಯ್
ಡಾಲ್ ಹೌಸಿಯ ‘ದತ್ತು ಪುತ್ರರಿಗೆ ಹಕ್ಕಿಲ್ಲ ‘ ಎಂಬ ಕಾನೂನಿನ ಪ್ರಕಾರ ದತ್ತು ರಾಜರಿಗೆ ಸಾಮ್ರಾಜ್ಯದ ಮೇಲೆ ಯಾವುದೇ ಹಕ್ಕಿರುವುದಿಲ್ಲ ಹೀಗಾಗಿ ಈ ಕಾನೂನಿನಿಂದ ಮುಕ್ತಿ ಹೊಂದಲು ಅಲಮೇಲಮ್ಮನ ಕಥೆ ಹುಟ್ಟಿರಬಹುದು ಎಂದು ಹೇಳಲಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
