fbpx
ಆರೋಗ್ಯ

ಇದ್ದಿಲಲ್ಲಿ ಹಲ್ಲು ಉಜ್ಜುತ್ತಿರಾ ತುಂಬ ಒಳ್ಳೆದು , ಕೊಲ್ಗೆಟ್ ಗು ಇತ್ತೀಚಿಗೆ ಗೊತ್ತಾಯ್ತು !

1917 ರಲ್ಲಿ ಕೊಲ್ಗೆಟ್ ಇನ್ನು ಭಾರತೀಯ ಮಾರ್ಕೆಟ್ ಒಳಗಡೆ ಬಂದಿರ್ಲಿಲ್ಲ ಅವರು ಕೊಟ್ಟ ಮೊದಲ ಜಾಹಿರಾತು ಹೀಗಿದೆ
ಸೊಸೆ ಪೈಲ್ವಾನ್ ಮಾವನನ್ನು ಕೇಳ್ತಾಳೆ “ಹೊಟ್ಟೆಗೆ ಬಾದಾಮಿ ಹಾಲು ಹಾಗು ಹಲ್ಲಿಗೆ ಇದ್ದಿಲ?” ಅಂತ ಈ ಜಾಹಿರಾತು ಒಂದು ರೀತಿ ಭಾರತೀಯರ ಹಳೆಯ ದಂತ ಮಂಜನ (ಟೂತ್ ಪೌಡರ್ ,ಪೇಸ್ಟ್ ) ವಾದ ಇದ್ದಿಲಲ್ಲಿ ಹಲ್ಲು ಉಜ್ಜಿದರೆ ಕೆಟ್ಟದ್ದು ಎಂದು ತೋರಿಸುವಂತಿತ್ತು .

ಹಾಗೆಯೇ ಎಲ್ಲರು ಅಪ್ಡೇಟ್ ಆಗುವ ಭರದಲ್ಲಿ ಪ್ರಶ್ನೆ ಮಾಡದೆ ಕೊಲ್ಗೆಟ್ ಉಪಯೋಗಿಸಲು ಶುರು ಹಚ್ಕೊಂಡ್ರು , ಪೇಸ್ಟ್ ಬಂದ್ಮೇಲೆ ಬ್ರಷ್ ಬರದೇ ಇರುತ್ತಾ ?
ಸತತ 70 ವರ್ಷಗಳು ಸೋಲಿಲ್ಲದ ಸರದಾರರಂತೆ ಭಾರತೀಯ ಮಾರುಕಟ್ಟೆಯನ್ನ ಆಳಿದ್ರು .

ಈಗ ವಿಷಯ ಏನಪ್ಪಾ ಅಂದ್ರೆ 2015 ನೇ ಜುಲೈ ನಲ್ಲಿ ಕೊಲ್ಗೆಟ್ ಡೀಪ್ ಚಾರ್ಕೋಲ್ ಎಂದು ಮೊತ್ತೊಂದು ಕೊಲ್ಗೆಟ್ ನ ಪದಾರ್ಥ ಒಂದನ್ನ ಮಾರುಕಟ್ಟೆಗೆ ಬಿಡುತ್ತಾರೆ.
ಥೂತ್ ಪೇಸ್ಟ್ ನಲ್ಲಿ ಉಪ್ಪು ಇದ್ಯಾ? ಚಾರ್ಕೋಲ್ ಬಳಸಿ ಪಳ ಪಳ ಹಲ್ಲು ನಿಮ್ಮದಾಗಿಸಿಕೊಳ್ಳಿ ಹೀಗೆ.

 

ಪ್ರಶ್ನೆ ಏನಂದ್ರೆ ಕೊಲ್ಗೆಟ್ ಗೆ ಭಾರತೀಯರ ವೈದ್ಯ ಪದ್ದತಿ ತಿಳಿಯಲು ೯೮ ವರ್ಷ ಬೇಕಾಯ್ತು .

ಇದ್ದಿಲಲ್ಲಿ ಕಾರ್ಬನ್ ಗುಣ ಅಧಿಕವಾಗಿದ್ದು ಹಲ್ಲಲ್ಲಿ ಯಾವುದೇ ಕೊಳೆ, ಕಲೆ ಬಿಡದೆ ಸ್ವಚ್ಛ ಮಾಡುತ್ತದೆ.
ಆದರೆ ನಮಗೆ ಹಿತ್ತಲ ಗಿಡ ಮದ್ದಲ್ಲ ಅಲ್ಲವೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top