ಒಮ್ಮೆ ರಾಜಸ್ಥಾನದ ರಾಜ ಜೈಸಿಂಗ್ ಲಂಡನ್ ಪ್ರವಾಸ ಕೈಗೊಂಡಿದ್ದರು.ಅದೊಂದು ದಿನ ಜೈಸಿಂಗ್ ಲಂಡನ್ನಿನ “ಬಾಂಡ್” ಬೀದಿಯಲ್ಲಿ ಸಾಮಾನ್ಯ ಪ್ರಜೆಯಂತೆ ನಡೆದು ಬರುತ್ತಿದ್ದರು .ಆಗ “ರೋಲ್ಸ್ ರಾಯ್ಸ್” ಕಾರಿನ ಮಾರಾಟ ಮಳಿಗೆ ಅವರ ಕಣ್ಣಿಗೆ ಬಿತ್ತು.ಅಂಗಡಿಯ ಒಳಗೆ ಬಂದ ಜೈಸಿಂಗ್ ರಿಗೆ ಕಾರನ್ನು ಕೊಂಡುಕೊಳ್ಳುವ ಮನಸ್ಸಾಯಿತು.
ಅದರಂತೆ ಅಲ್ಲಿನ ಮಾಲೀಕನ ಬಳಿ ಕಾರಿನ ಬೆಲೆಯನ್ನು ವಿಚಾರಿಸಿದರು.ಜೈಸಿಂಗ್ ಅವರ ಸಾಮಾನ್ಯ ವೇಷಭೂಷಣಗಳನ್ನು ನೋಡಿದ ಮಾಲೀಕ ಕಾರಿನ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ,ಉಡಾಪೆ ಮಾತುಗಳನ್ನಾಡಿ ತುಚ್ಛವಾಗಿ ಕಂಡನು.ಇದರಿಂದ ಅವಮಾನಿತರಾದ ಜೈಸಿಂಗ್ ನೇರವಾಗಿ ತಾವು ಉಳಿದುಕೊಂಡಿದ್ದ ಹೋಟೆಲ್ ಗೆ ಹೋದವರೆ..ತಮ್ಮ ಸೇವಕರಿಗೆ ತಾವು ಕಾರಿನ ಮಳಿಗೆಗೆ ಹೋಗಬೇಕೆಂದು ಆಜ್ಞೆ ಮಾಡಿದರು.
ಕಾರಿನ ಮಳಿಗೆ ವರೆಗು ರತ್ನಗಂಬಳಿ ಹಾಸು ಉರುಳಿತು. ಜೈಸಿಂಗ್ ರಾಜನ ಪೋಷಾಕಿನಲ್ಲಿ ಕಾರಿನ ಮಳಿಗೆಗೆ ಆಗಮಿಸಿದರು.ಇದನ್ನು ಕಂಡ ಮಾಲೀಕ ಕಂಗಾಲಾದನು.ಸ್ವಲ್ಪ ಹೊತ್ತಿನ ಮುಂಚೆ ಇಲ್ಲಿಗೆ ಬಂದಿದ್ದ ಸಾಮಾನ್ಯ ವ್ಯಕ್ತಿ ಇವರೇನಾ?ಎಂದು ಆಶ್ಚರ್ಯವಾಯಿತು.
ರಾಜ ಜೈಸಿಂಗ್ ಕೂಡಲೆ ಅಂಗಡಿಯಲ್ಲಿಟ್ಟಿದ್ದ ಒಟ್ಟು ಆರು ಕಾರುಗಳನ್ನು ಖರೀದಿಸಿ,ಸಾಗಾಣಿಕೆಯ ವೆಚ್ಚವನ್ನು ತಾವೇ ಪಾವತಿ ಮಾಡಿ ಭಾರತಕ್ಕೆ ತಂದರು. ಅಷ್ಟಕ್ಕೆ ಸುಮ್ಮನಾಗದ ಜೈಸಿಂಗ್ ಆರು ಐಷಾರಮಿ ಕಾರುಗಳನ್ನು ನಗರದ ಬೀದಿ ಕಸ ತುಂಬಿ ಸಾಗಿಸಲು ಬಳಸುವಂತೆ ತಮ್ಮ ರಾಜ್ಯದ ನಗರಪಾಲಿಕೆಗೆ ಆಜ್ಞೆ ಮಾಡಿದರು. ಅದರಂತೆ ರೋಲ್ಸ್ ರಾಯ್ಸ್ ಕಾರು ಕಸದ ವಾಹನವಾಯಿತು.
ದಿನಕಳೆದಂತೆ ಈ ಸುದ್ದಿ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿತು. ರೋಲ್ಸ್ ರಾಯ್ಸ್ ಕಂಪನಿಯ ಪ್ರತಿಷ್ಟೆ ಮತ್ತು ಬೇಡಿಕೆ ಕುಸಿಯತೊಡಗುತ್ತದೆ. ಇದರಿಂದ ಕಂಗೆಟ್ಟ ಕಂಪನಿ ರಾಜ ಜೈಸಿಂಗ್ ಅವರಿಂದ ವಿವರಣೆ ಕೇಳಿತು. ಜೈಸಿಂಗ್ ಲಂಡನ್ನಿನ ಶೋರೂಮಿನಲ್ಲಿ ತಮಗಾದ ಅವಮಾನವನ್ನು ವಿವರಿಸಿದರು.
ಕೂಡಲೆ ಕಂಪನಿಯು ತಮ್ಮಿಂದಾದ ಪ್ರಮಾದಕ್ಕೆ ಕ್ಷಮೆ ಕೇಳಿತು. ಅಷ್ಟಲ್ಲದೆ ಮತ್ತೆ ಆರು ಹೊಸ ಕಾರುಗಳನ್ನು ಕೊಡುತ್ತೇವೆ, ಕಾರಿನಲ್ಲಿ ಕಸ ಸಾಗಾಣಿಕೆ ಮಾಡುವುದನ್ನು ದಯವಿಟ್ಟು ಕೂಡಲೆ ನಿಲ್ಲಿಸಿ ಎಂದು ಬೇಡಿಕೊಂಡಿತು.ರಾಜ ಕಂಪನಿಯ ಕೋರಿಕೆಯನ್ನು ಮನ್ನಿಸಿ, ಕಸ ಸಾಗಾಟವನ್ನು ನಿಲ್ಲಿಸಿ ಆರು ಹೊಸ ಕಾರುಗಳನ್ನು ಉಚಿತವಾಗಿ ಪಡೆದರು. ಆ ಮೂಲಕ ಒಬ್ಬ ಭಾರತೀಯನಿಗೆ ಬ್ರಿಟಿಷ್ ಕಂಪನಿಯ ರೋಲ್ಸ್ ರಾಯ್ಸ್ ನಿಂದ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡು ಸ್ವಾಭಿಮಾನಿ ಭಾರತೀಯರಿಗೆ ಮಾದರಿಯಾದರು.
Krupe: Whats App
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
