fbpx
ದೇವರು

ಇದು ನಿಮ್ಮತ್ರ ಇದ್ದರೆ ನಿಮ್ಮ ಸಕಲ ಇಷ್ಟಾರ್ಥಗಳು ಪೂರೈಸುತ್ತವೆ

ನಮ್ಮ ಮನೆಯೇ ದೇವಾಲಯ, ಅದರಲ್ಲಿರುವ ಮನಷ್ಯರೇ ದೇವರುಗಳು ಇದು ನಮಗೆ ಶಿವ ತತ್ವ ತಿಳಿಸುವ ಅಂಶ. ಆದರೆ ನಾವು ಪೂಜೆ ಮಾಡುವ ಕೊಠಡಿ ಅಥವಾ ಮನೆಯಲ್ಲಿ ದೇವರನ್ನು ಇಡುವ ಸ್ಥಳ ಎಂಬುದು ಪರಮ ಪವಿತ್ರವಾದುದು. ಹಾಗೆಯೇ ತಮ್ಮ ಇಷ್ಟ ದೇವರಿಗೆ ಮಾಡುವ ಪೂಜೆಗಳು ಅಲ್ಲಿಯೇ ಮಾಡುತ್ತವೆ. ಹಾಗಾದರೆ ಅಲ್ಲಿ ಇರಲೇಬೇಕಾದ ಪೋಟೋ ಯಾವುದು ಗೊತ್ತಾ.?

ಆ ಪೋಟೋ ಬಗ್ಗೆ ತಿಳಿಯುವ ಮುಂಚೆ ಈ ಕಥೆಯನ್ನು ತಿಳಿದುಕೊಳ್ಳೋಣ ಬನ್ನಿ. ಶ್ರೀ ವಿಷ್ಣು ಕೂರ್ಮ ಅವತಾರದಲ್ಲಿ ದರ್ಶನ ಕೊಡುವ ಮುಂಚೆ ರಾಕ್ಷಸರು, ದೇವತೆಗಳು ಅಮೃತಕ್ಕಾಗಿ ಸಮುದ್ರ ಮಂಥನ ಮಾಡುವಾಗ ಅಲ್ಲಿ ಶ್ರೀ ಮಹಾಲಕ್ಷ್ಮಿ ಜೊತೆಗೆ ಇನ್ನೂ ಹಲವು ಉತ್ಪತ್ತಿಯಾದವು. ಅವುಗಳೆಂದರೆ ಲಕ್ಷ್ಮಿದೇವಿ, ಲಕ್ಷ್ಮಿದೇವಿ ಅಕ್ಕ ಜ್ಯೇಷ್ಠ ದೇವಿ, ಲಿಲಿ ಹೂವುಗಳು, ಐರಾವತ (ಇಂದ್ರನ ವಾಹನ), ಕಾಮಧೇನು (ಹಸು), ಲಕ್ಷ್ಮೀದೇವಿಯ ಜೊತೆಗೆ ಬಂದವು. ಕಾಮಧೇನು ಅಂದರೆ ಹಸುವಿನ ಸ್ವರೂಪ. ಹಸು ಎಂದರೆ ಶ್ರೀ ಮಹಾಲಕ್ಷ್ಮಿಗೆ ಇಷ್ಟವಾದ ಪ್ರಾಣಿ. ಹಾಗಾಗಿಯೇ ಸಲಕ ದೇವತೆಗಳು ಕಾಮಧೇನುವಿನಲ್ಲಿ ಇರುತ್ತಾರೆ. ಹಾಗೆಯೇ ಕಾಮಧೇನು ಅಂದರೆ ನಾವು ಕೇಳಿದ್ದನು ಕೊಡುವ ಸಕಲ ಶುಭವನ್ನು ಮಾಡುವಂತಹದ್ದು ಎಂದು ಅರ್ಥ.

ಯಾರು ಹಸುವನ್ನು ಪೂಜಿಸುತ್ತಾರೋ ಅವರಿಗೆ ಅಷ್ಟೈಶ್ವರ್ಯವನ್ನು ದೊರಯಲಿ ಎಂದು ಶ್ರೀ ಮಹಾವಿಷ್ಣು ವರವನ್ನು ನೀಡಿದ್ದಾನೆ. ಹಾಗೆಯೇ ಯಾರು ಕಾಮಧೇನು ರೂಪದಲ್ಲಿರುವ ಹಸುವಿನ ಪ್ರತಿಮೆ(ಪೋಟೋ)ವನ್ನು ಪೂಜಿಸುತ್ತಾರೋ ಅವರಿಗೆ ಭೋಗಭಾಗ್ಯಗಳು, ಸುಖ ಸಂತೋಷಗಳು ಸಿಗುತ್ತವಯ ಎಂದು ಆಶೀರ್ವಾದಿಸಿದ್ದರು. ಹಾಗಾಗಿ ಪುರಾಣದಲ್ಲಿ ಕಾಲದಲ್ಲಿ ದೇವತೆಗಳು, ರಾಜರು ಸಹ ಬೆಳ್ಳಿ ಅಥವಾ ಬಂಗಾರದಲ್ಲಿ ಮಾಡಿದ ಕಾಮಧೇನುವಿನ ಪೂಜೆ ಮಾಡುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top