fbpx
ಪ್ರಯಾಣ

ಚಿತ್ರದುರ್ಗ ಜಿಲ್ಲೆಯ ಬಗ್ಗೆ ಆಶ್ಚರ್ಯ ಹಾಗು ಹೆಮ್ಮೆಪಡುವಂತ 32 ವಿಷಯಗಳು ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು.

ಚಿತ್ರದುರ್ಗ ಜಿಲ್ಲೆಯ ಸಂಕ್ಷಿಪ್ತ ಪರಿಚಯ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಿತ್ರದುರ್ಗ ಜಿಲ್ಲೆ ಇರುವುದು ನಮ್ಮ ಕರ್ನಾಟಕ ರಾಜ್ಯದಲ್ಲಿ ತುಮಕೂರು,ದಾವಣಗೆರೆ ,ಬಳ್ಳಾರಿ ಜೆಲ್ಲೆಗಳು ಜಿಲ್ಲೆಯನ್ನು ಸುತ್ತುವರಿದಿವೆ. ಅಂತೆಯೇ ಇಲ್ಲಿ ಬೇಸಿಗೆಯಲ್ಲಿ ಬಿಸಿಲು ತುಂಬಾ ಜಾಸ್ತಿ ಹಾಗೆ ಕಲ್ಲುಗಳು ಜಾಸ್ತಿ.ತಿಳಿಯೋಣ ಬನ್ನಿ ಚಿತ್ರದುರ್ಗದ ವಿಶೇಷತೆಗಳನ್ನು….

1.ಏಳು ಸುತ್ತಿನ ಕಲ್ಲಿನ ಕೋಟೆಯಿರುವ ಅಭೇದ್ಯ ನಾಡು.

2.ರಾಜ ,ವೀರ,ಮದಕರಿ ನಾಯಕರು ಆಳಿದ ನಾಡು.

3.ವೀರ ವನಿತೆ ಒನಕೆ ಓಬ್ಬವ್ವನವರು  ಆಳಿದ ನಾಡು.

4.ನಮ್ಮ ಕರ್ನಾಟಕ ರಾಜ್ಯದ ಎಕ್ಯೆಕ ತಾಮ್ರದ ಗಣಿ ಇಂಗಳ್ ದಾಳ್ ಜಿಲ್ಲೆಯದ್ದು .

5.ಅತಿ ಹೆಚ್ಚು ವಿದ್ಯುತ್ ಪವರ್ ಉತ್ಪಾದನೆ ಮಾಡುವ ಜಿಲ್ಲೆ.

6.ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ಚಳಿ ದಾಖಲಾಗಿರುವ ಜಿಲ್ಲೆ.

7.ಏಷ್ಯಾ ಖಂಡದಲ್ಲೇ ಅತೀ ಹೆಚ್ಚು ಗಾಳಿ ಬೀಸುವ ಪ್ರದೇಶ ಎಂಬ ಹೆಗ್ಗಳಿಕೆ ಹೊಂದಿರುವ ಜಿಲ್ಲೆ.

8.ರಾಜ್ಯದಲ್ಲೇ ಅತಿ ಹೆಚ್ಚು ಶೇಂಗಾ ಅಂದರೆ ಕಡ್ಲೆಕಾಯಿ ಬೆಳೆಯುವ ಜಿಲ್ಲೆ.

9.ರಾಜ್ಯದ ಅತೀ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆ.

10.ರಾಜ್ಯದ ಅತೀ ಹೆಚ್ಚು ರಾಗಿ ಬೆಳೆಯುವ ಜಿಲ್ಲೆ.

11.ಅತೀ ಹೆಚ್ಚು ಅಡುಗೆ ಎಣ್ಣೆ ತಯಾರಿಸುವ ಅಂದರೆ  ‘ಮಿನಿ ಬಾಂಬೆ’ಎಂದು ಕರೆಯುವ ಚಳ್ಳಕೆರೆ ಜಿಲ್ಲೆಯದ್ದು.

12.ಸುಪ್ರಸಿದ್ಧ ಮೊಳಕಾಲ್ಮೂರಿನ ಕಂಬಳಿ ನೇಯ್ಗೆ ಈ  ಜಿಲ್ಲೆಯದ್ದು.

13.ರಾಷ್ಟ್ರಕವಿ ಕುವೆಂಪುರವರ ಗುರುಗಳಾದ ತ. ರಾ.ಸು ರವರು ಹುಟ್ಟಿದ ನಾಡು.

14.ರಾಜ್ಯದ ನಂಬರ್ ಒನ್ ಮುಖ್ಯಮಂತ್ರಿ ಎಂದು ಕರೆಸಿಕೊಂಡಿರುವ ದಿ. ಎಸ್. ನಿಜಲಿಂಗಪ್ಪ ಅವರು ಹುಟ್ಟಿದ ನಾಡು.

15.ರಾಜ್ಯದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದಾದ  ನಾಯಕನಹಟ್ಟಿ ಜಾತ್ರೆ ಜಿಲ್ಲೆಯದ್ದು.

16.ಪಂಚಗಣಾದೀಶ್ವರರಲ್ಲಿ ಒಬ್ಬರಾದ  ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ಐಕ್ಯವಾದ ಜಿಲ್ಲೆ ಇದು.

17.ತ್ರೇತಾಯುಗದ ರಾಮನ ಕಾಲದ  ಅತೀ ಹೆಚ್ಚು ರಾಮಾಯಣದ ಉಲ್ಲೇಖ ವಿರುವ ಜಿಲ್ಲೆ ಇದು.

18.ಜಟಾಯು ಪಕ್ಷಿ ಮತ್ತು ಶ್ರವಣ ಕುಮಾರರ  ಕರ್ಮ ಭೂಮಿ ಇದು.

19.ಅತಿ ಹೆಚ್ಚು ಬುಡಕಟ್ಟು ಜನಾಂಗದವರನ್ನು ಹೊಂದಿರುವ ಜಿಲ್ಲೆಯಿದು.

20.ಬುಡಕಟ್ಟು ಜನಾಂಗದವರ ಅತಿ ಹೆಚ್ಚು ಆಚರಣೆಗಳು ಜಿಲ್ಲೆಯಲ್ಲಿ ಈಗಲೂ ಚಾಲ್ತಿಯಲ್ಲಿವೆ.

21.ಅಶೋಕನ ಮೊಟ್ಟ ಮೊದಲ ಶಾಸನ ಚಿತದುರ್ಗ ಜಿಲ್ಲೆಯದ್ದು.

22.ಚಂದ್ರವಳ್ಳಿಯ ಕದಂಬರ ಮಯೂರವರ್ಮನ  ಮೊಟ್ಟ ಮೊದಲನೆ ಶಾಸನ ಜಿಲ್ಲೆಯದ್ದು.

23.ಫಿರಂಗಿಯಿಂದಲೂ ಬೇದಿಸಲಾಗದ ಕಲ್ಲಿನ ಕೋಟೆ ಇರುವುದು ಜಿಲ್ಲೆಯದ್ದು.

24.ಪ್ರಸಿದ್ದ ಮಠಗಳಲ್ಲಿ ಒಂದಾದ ಮೂರುಘಮಟ ಇರುವುದು ಜಿಲ್ಲೆಯಲ್ಲಿ.

25.ಅತೀ ದೊಡ್ಡ ಬಸವೇಶ್ವರರ ಶಿಲಾಮೂರ್ತಿ ಸ್ಥಾಪಿಸಲ್ಪಡುತ್ತಿರುವುದು ಜಿಲ್ಲೆಯಲ್ಲಿ.

26.ರಾಜ್ಯದ ಅತಿ ದೊಡ್ಡ ಪ್ರದೇಶವಾದ ನುಂಕಿಮಲೇ ಬೆಟ್ಟ ಇರುವುದು ಜಿಲ್ಲೆಯಲ್ಲಿ.

27.ಜಯದೇವರಂತಹ ಶಿವಶರಣರು ಹರಸಿ ಬೆಳೆಸಿದ ನಾಡಿದು.

28.ಅತಿ ಕಡಿಮೆ ಅಪರಾಧ ಪ್ರಕರಣ ಹೊಂದಿರುವ  ಜಿಲ್ಲೆ ಇದು.

29.ಜಾಗೋ ಭರತ್ ಜಾಗೋ ಮೊದಲ ಕಾರ್ಯಕ್ರಮ ನಡೆದಿದ್ದು ಜಿಲ್ಲೆಯಲ್ಲಿ.

30.ಸರ್.ಎಂ.ವಿಶ್ವೇಶ್ವರಯ್ಯನವರು ಮೊದಲ ಅಣೆಕಟ್ಟಿನ ಪರಿಕಲ್ಪನೆಯಾದ ವಾಣಿ ವಿಲಾಸ ಸಾಗರ,ಮಾರಿ ಕಣಿವೆ ಸಾಗರ ಇರುವುದು ಜಿಲ್ಲೆಯಲ್ಲಿ.

31.ಇಡೀ ರಾಜ್ಯದಲ್ಲೇ ಎಕ್ಯೆಕ ಬಯಲು ರಂಗಮಂಟಪ ನಿಮಗೆ ನೋಡಲು ಸಿಗುವುದು ಜಿಲ್ಲೆಯಲ್ಲಿ.

32.ಕನ್ನಡ ಚಲನ  ಚಿತ್ರ ಮಂದಿರದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ನಾಗರಹಾವು,ಕಲ್ಲರಳಿ ಹೂವಾಗಿ ಚಿತ್ರೀಕರಣ ನೆಡೆದದ್ದು ಜಿಲ್ಲೆಯಲ್ಲಿ.

33.ಅತೀ ಹೆಚ್ಚು ಮಾಸ್ತಿಕಲ್ಲು,  ವೀರಗಲ್ಲು ಗಳು ಪತ್ತೆಯಾಗಿರುವುದು ಜಿಲ್ಲೆಯಲ್ಲಿ.

34.ಭಾರತೀಯ ವಿಜ್ಞಾನ ಸಂಸ್ಥೆ ಇರುವುದು ಜಿಲ್ಲೆಯಲ್ಲಿ.

35.ವಿಸ್ಮಯದ ಹಿಮವತ್ಕೆದಾರ್ ಇರುವುದು ಜಿಲ್ಲೆಯಲ್ಲಿ.

ಇದನ್ನೆಲ್ಲ ತಿಳಿದ ಮೇಲೆ ನೀವು ಯಾರದರು ಚಿತ್ರದುರ್ಗ ದವರಾಗಿದ್ದರೆ ಹೆಮ್ಮೆಯಿಂದ ಹೇಳಿಕೊಳ್ಳಿ ನಾನು ಚಿತ್ರದುರ್ಗದ ಕಲ್ಲಿನ ಕೋಟೆಯ ನಾಡಿನಿಂದ ಬಂದಿರುವೆ ಎಂದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published.

To Top