ಮೊದಲನೆಯದಾಗಿ ಕೆಂಪೇಗೌಡರ “ಐಕ್ಯ” ಸ್ಥಳವೆಂದು ಗುರುತಿಸಲ್ಪಟ್ಟಿರುವ ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮದ ಗೋಪುರದ ಬಗ್ಗೆ ನಾವು ಕೊಟ್ಟ ಮಾಹಿತಿಗೆ/ಪೋಸ್ಟ್ ಗೆ ನಿಮ್ಮ ಅಭೂತಪೂರ್ವ ಬೆಂಬಲ ಸೂಚಿಸಿದಕ್ಕೆ ನಮ್ಮ ಹ್ರುದ್ಪೂರ್ವಕ ಕೃತಜ್ಞತೆಗಳು.
ಶಿಥಿಲಾವಸ್ಥೆಯಲ್ಲಿದ್ದ ನಾಡ ಪ್ರಭು ಕೆಂಪೇಗೌಡರ ಸಮಾಧಿಯನ್ನು ಪ್ರ-ಪ್ರಥಮವಾಗಿ ಗುರುತಿಸಿದ್ದು ” ಸಾಮಾನ್ಯ ಕನ್ನಡಿಗ Samanya Kannadiga ” ತಂಡದ ಸದಸ್ಯರು. ಇದ್ದನು ಹುಡುಕಿದ ಸದಸ್ಯರು Sandeep Parswanath Bhavya Srinivas Gowda Lohith Gowda Pavan Srinath ಅಲ್ಲಿ ಕಂಡು ಬಂದ ಅನೇಕ ಚಿಹ್ನೆಗಳು, ಗುರುತುಗಳನ್ನು ತಾಳೆ ಹಾಕಿದ ನಂತರವಷ್ಟೇ ನಾವು ಈ ಸಮಾಧಿ ಕೆಂಪೇಗೌಡರದ್ದು ಎಂದು ನಿಶ್ಚಯಿಸಿದ್ದೆವು. ನಾಡಪ್ರಭುಗಳ ಸಮಾಧಿಯ ಸಂಪೂರ್ಣ “ಜೀರ್ಣೋದ್ದಾರಕ್ಕೆ ” ನಾವು ಪಣ ತೊಟ್ಟಿದ್ದೆವು.
ಮಾಗಡಿ ತಾಲ್ಲೂಕಿನ ಕೆಂಪಾಪುರ ಗ್ರಾಮದಲ್ಲಿ ಪತ್ತೆಯಾಗಿರುವ ಸಮಾಧಿಯು ಹಿರಿಯ ಕೆಂಪೇಗೌಡರದು ಎಂದು ಕೆಂಪೇಗೌಡರ ಸಮಾಧಿ ಅಧ್ಯಯನ ಸಮಿತಿ ಮೇಯರ್ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದ ನಾಡಪ್ರಭು ಕೆಂಪೇಗೌಡ ಮಾನವಿಕ ಮತ್ತು ಸಮಾಜ ವಿಜ್ಞಾನ ಕೇಂದ್ರದ ನಿರ್ದೇಶಕ ಎನ್.ಶೇಕ್ ಮಸ್ತಾನ್ ಅವರ ನೇತೃತ್ವದ ನಾಲ್ಕು ಸದಸ್ಯರ ಸಮಿತಿಯು ಮೇಯರ್ ಅವರಿಗೆ 10 ಪುಟಗಳ ವರದಿ ನೀಡಿತು.
‘ಕೆಂಪಾಪುರದಲ್ಲಿ ಪತ್ತೆಯಾದ ಸಮಾಧಿ ಕುರಿತಂತೆ ಅಧ್ಯಯನ ನಡೆಸುವಂತೆ ಮೇಯರ್ ಅವರು ಸೂಚಿಸಿದ್ದರು. ತರುವಾಯ, ಕೆಂಪಾಪುರಕ್ಕೆ ಭೇಟಿ ನೀಡಿ ಸಮಾಧಿ ಕುರಿತಂತೆ ಮಾಹಿತಿ ಕಲೆ ಹಾಕಿದೆವು’ ಎಂದು ಹೇಳಿದರು.
ನಮ್ಮ ತಂಡವು ಗೋಪುರದ ಬಳಿ ಹೋದಾಗ, ಅತ್ಯಂತ ಜವಾಬ್ದಾರಿಯುತವಾಗಿ, ಕೂಲಂಕುಶವಾಗಿ ಅಲ್ಲಿರುವ ದೃಶ್ಯಾವಳಿಯನ್ನು ನಮ್ಮ ಕ್ಯಾಮೆರಾ ಗಳಲ್ಲಿ ಸೆರೆ-ಹಿಡಿದಿದ್ದೆವು. ಅಲ್ಲಿ ಬರೆಯಲಾಗಿರುವ ಅಕ್ಷರವನ್ನು ನಾವು ಕೆಲವು ತಜ್ಞ ರೊಂದಿಗೆ ಮಾತನಾಡಿ ಅವರ ಅಭಿಪ್ರಾಯ ತಿಳಿದುಕೊಂಡಿದ್ದೆವು.
ಗೋಪುರದ ಸಂಪೂರ್ಣವಾದ ಚಿತ್ರಗಳನ್ನು, ಅಲ್ಲಿ ಜರುಗಿಸಲಾದ ಕಲ್ಲುಗಳನ್ನು, ಮತ್ತು ಅನೇಕ ಸೂಕ್ಷ್ಮವಾದ ಮಾಹಿತಿಯನ್ನು ನಾವು ಕಂಡು ಹಿಡಿದು, ನಮ್ಮ ಕ್ಯಾಮೆರಾ ಗಳಲ್ಲಿ ಮತ್ತು ನಮ್ಮ ಡೈರಿ ಗಳಲ್ಲಿ ದಾಖಲಿಸಿಕೊಂಡಿದ್ದೆವು. ಬಹುಷಃ, ಅಲ್ಲಿ ಈವರೆಗೂ ಭೇಟಿ ನೀಡಿರುವ ರಾಜಕೀಯ ದಿಗ್ಗಜರು ಅವರ ಬೆಂಬಲಿಗರು, ಪಾಲಿಕೆಯ ಸದಸ್ಯರು, ಮಹಾಪೌರರು ಕೂಡ ಈ ಗೋಜಿಗೆ ಹೋಗಿಲ್ಲ. ಕೇವಲ ಹೇಳಿಕೆಗಳಿಗೆ ಮಾತ್ರ ಅವರ ಮಾತುಗಳು ಸೀಮಿತವಾಗಿದೆ.
‘ಕೆಂಪಾಪುರದಲ್ಲಿ ಪತ್ತೆಯಾಗಿರುವ ಸಮಾಧಿ ಮೇಲೆ ನಿರ್ಮಿಸಿರುವ ಗೋಪುರವು ಬೆಂಗಳೂರ ನಗರದ ನಾಲ್ಕು ದಿಕ್ಕಿಗೆ ಹಿರಿಯ ಕೆಂಪೇಗೌಡರು ನಿರ್ಮಿಸಿರುವ ದ್ರಾವಿಡ ಶೈಲಿಯ ಗಡಿ ಗೋಪುರಗಳನ್ನು ಹೋಲುತ್ತದೆ. ಸಮಾಧಿ ಮೇಲಿನ ಮಂಟಪದ ಮೇಲೆ ‘ಹಿರಿಯ ಕೆಂಪೇಗೌಡಯ್ಯನವರು ಕುಣಿಗಲಿಂದ ಬಂದು ಬಳಿಯ (ಯೆ) ಜಗಳವಂನು ಮಾಡ ಅಯಿಕ್ಯವಾಗಿ ಕೈಲಾಸಕ್ಕೆ ಹೋದ ಸ್ಥಳ’ ಎಂಬ ಬರಹವಿದೆ’ ಎಂದು ತಿಳಿಸಿದರು.
‘ಈ ಬರಹವನ್ನು ಅವಲೋಕಿಸಿದಾಗ ಕೆಂಪಾಪುರದಲ್ಲಿ ನಡೆದ ಯುದ್ಧವೊಂದರಲ್ಲಿ ಹಿರಿಯ ಕೆಂಪೇಗೌಡರು ವೀರಮರಣ ಅಪ್ಪಿದರು ಎನ್ನುವುದು ತಿಳಿದು ಬರುತ್ತದೆ. ತರುವಾಯ ತಮ್ಮ ತಂದೆಯ ಸ್ಮರಣಾರ್ಥ ಇಮ್ಮಡಿ ಕೆಂಪೇಗೌಡರು ವೀರ ಸಮಾಧಿ ಕಟ್ಟಿಸಿರಬಹುದು ಎಂಬ ನಿರ್ಣಯಕ್ಕೆ ಬರಲಾಗಿದೆ’ ಎಂದರು.
‘ಸ್ಮಾರಕದ ಬಳಿಯೇ ಇರುವ ಕೆರೆಯಲ್ಲಿ ಶಾಸನವೊಂದು ಪತ್ತೆಯಾಗಿದೆ. ಆ ಶಾಸನದಲ್ಲಿ ಛತ್ರಿ ಹಿಡಿದು ನಿಂತಿರುವ ಹಿರಿಯ ಕೆಂಪೇಗೌಡರ ಚಿತ್ರದ ಕೆತ್ತನೆಯಿದೆ. ಜತೆಗೆ, ಅಶ್ವಾರೋಢ ಕೆಂಪೇಗೌಡರ ಚಿತ್ರಗಳು ಕೂಡ ಕಂಡುಬಂದಿವೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಇದು ಹಿರಿಯ ಕೆಂಪೇಗೌಡರದೇ ಸಮಾಧಿ ಎಂದು ನಿರ್ಣಯಕ್ಕೆ ಬರಲಾಗಿದೆ’ ಎಂದು ಹೇಳಿದರು.
‘ಸಮಾಧಿ ಕುರಿತಂತೆ ನಾವು ಸಲ್ಲಿಸಿರುವುದು ಪ್ರಾಥಮಿಕ ವರದಿ ಮಾತ್ರ. ಈ ಬಗ್ಗೆ ಇನ್ನೂ ವಿವರವಾದ ಸಂಶೋಧನೆ ಮತ್ತು ಕ್ಷೇತ್ರಕಾರ್ಯ ನಡೆಸುವ ಅಗತ್ಯವಿದೆ. ಕೆಂಪಾಪುರದಲ್ಲಿ ಯುದ್ಧ ಏಕೆ ಮತ್ತು ಯಾರ, ಯಾರ ನಡುವೆ ಅದು ಜರುಗಿತು? ಕೆಂಪೇಗೌಡರು ಕುಣಿಗಲ್ನಿಂದ ಮಾಗಡಿಗೆ ಏಕೆ ಬಂದು ಯುದ್ಧ ಮಾಡಿದರು? ಇತ್ಯಾದಿ ಸಮಾಧಿ ಪರಿಸರದ ಹತ್ತು ಹಲವು ಪ್ರಶ್ನೆಗಳಿಗೆ ನಾವು ಇನ್ನು ಉತ್ತರ ಕಂಡು ಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.
ಈ ಐತಿಹಾಸಿಕ ಜಾಗವನ್ನು ಮೊದಲು ನಮ್ಮ ತಂಡ ಕಂಡು ಹಿಡಿದು ಇದನ್ನು ಕನ್ನಡಿಗರಿಗೆ ಪರಿಚಯಿಸಿ, ಮಾಹಿತಿ ನೀಡಿದ್ದು ಸಾಮಾನ್ಯ ಕನ್ನಡಿಗ ತಂಡ. ಇದಕ್ಕಿಂತ ಮುಂಚೆ ನಿಮ್ಮ ಪಕ್ಷದವರು ಏನು ಮಾಡುತ್ತಿದರು ಹೇಳಬಹುದೇ? ಸಮಾಧಿಯ ಬಗ್ಗೆ, ನಿಮಗೆ ಅಷ್ಟೊಂದು ಕಾಳಜಿ ಇದ್ದಲ್ಲಿ, ನೀವು ಸ್ಥಳೀಯರಲ್ಲಿ ಇದರ ಬಗ್ಗೆ ವಿಚಾರಿಸಿದ್ದೀರಾ? ಹೇಳಿ?
ಇಷ್ಟು ವರ್ಷಗಳ ಕಾಲ [ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ನಷ್ಟೇ ದೂರವಿದ್ದ ಸ್ಮಾರಕ ಇವರಿಗೆ ಕಾಣಿಸಲಿಲ್ಲವೇ?] ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷರೊಬ್ಬರು — ಈ ಸಮಾಧಿಯನ್ನು ನೋಡಿದ್ದೇ ನಾನು ಎಂದು ಹೇಳಿಕೆ ಕೊಟ್ಟಿದಾರೆ. ಇದು ಸರಿಯೇ? ನಾಡಪ್ರಭುಗಳ ಮೇಲೆ ಅತ್ಯಂತ ಗೌರವ ಇಟ್ಟುಕೊಂಡಿರುವ ನಮ್ಮ-ನಿಮ್ಮೆಲ್ಲರ ಸಾಮಾನ್ಯ ಕನ್ನಡಿಗ ಸದಸ್ಯರು ಈ ಸಮಾಧಿಯನ್ನು ಪ್ರ-ಪ್ರಥಮವಾಗಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿದಾಗ ಮಾತ್ರ ಇವರಿಗೂ ಸತ್ಯ ಗೊತ್ತಾಗಿದ್ದು.
ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ, ಸಮಿತಿ ಸದಸ್ಯ ಪ್ರೊ.ಎಂ.ಮುನಿರಾಜಪ್ಪ ಮಾತನಾಡಿ, ‘ಸಮಾಧಿ ಮೇಲೆ ನಿರ್ಮಿಸಿರುವ ಗೋಪುರದ ಮಂಟಪ ಸ್ತಂಭಗಳ ಮೇಲೆ 48 ಉಬ್ಬು ಚಿತ್ರಗಳು ಪತ್ತೆಯಾಗಿವೆ. ಹೊಯ್ಸಳರ ಗಂಡಭೇರುಂಡ, ವಿಜಯನಗರದ ಉಗ್ರನರಸಿಂಹ ಇತ್ಯಾದಿ ರಾಜಮುದ್ರೆಗಳ ಜತೆಗೆ, ಯುದ್ಧದಲ್ಲಿ ಹೋರಾಡುತ್ತಿರುವ ಹಿರಿಯ ಕೆಂಪೇಗೌಡರ ಉಬ್ಬು ಚಿತ್ರ ಕೂಡ ಇದೆ’ ಎಂದು ತಿಳಿಸಿದರು.
ಕನ್ನಡಿಗರ ಪರವಾಗಿ ಒಂದು ತಂಡ ಕಟ್ಟಿಕೊಂಡು, ಹಲವಾರು ಉದ್ಯೋಗದಲ್ಲಿದ್ದುಕೊಂಡು ಕನ್ನಡಕಾಗಿ “ಅಳಿಲು ಸೇವೆ” ಸಲ್ಲಿಸುತ್ತಿರುವ ಸಾಮಾನ್ಯ ಕನ್ನಡಿಗ ತಂಡ ಬಯಸುವುದಿಷ್ಟೇ – ನಾಡ ಪ್ರಭು ಗಳ ಐಕ್ಯ ಸ್ಥಳಕ್ಕೆ ರಾಜಕೀಯ ಬಣ್ಣ ಬಲೆಯಬೇಡಿ, ಅನಗತ್ಯವಾದ ಹೇಳಿಕೆ ನೀಡಬೇಡಿ, “ನಾನು”, “ನಾವು”, “ನಮ್ಮ ಪಕ್ಷ” ಹೇಳಿಕೆಗಳನ್ನು ಕೊಡಬೇಡಿ, ಮಾಧ್ಯಮದಲ್ಲಿ ಬಿತ್ತರವಾಗುತ್ತಿರುವ [ರಾಜಕೀಯ ಕೃಪಾಪೋಷಿತ] ಹೇಳಿಕೆಗಳನ್ನು ನಂಬಬೇಡಿ. ಮುಂದೆ, ಇದರ ಸಂಶೋದನೆಯ ವೇಗವನ್ನು ಹೆಚ್ಚಿಸಿ, ಇತಿಹಾಸ ತಜ್ಞರನ್ನು ಕರೆಯಿಸಿ ಇದು ಹಿರಿಯ ಕೆಂಪೇಗೌಡರ “ಐಕ್ಯ” ಸ್ಥಳ ಹೌದೋ ಇಲ್ಲವೋ ಎಂಬ ಮಾಹಿತಿಯನ್ನು ಕೊಡಿ. [ಬೇಕಾದ ಮಾಹಿತಿಯನ್ನು ನಾವು ಕೊಡುತ್ತೇವೆ, ತಂಡದೊಂದಿಗೆ ನಾವು ಸಹಕರಿಸುತ್ತೇವೆ]. ಗೋಪುರವನ್ನುಸಂಶೋದಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಿ, ಮತ್ತು ಎಲ್ಲ ಸಂಸ್ಥೆಗಳ “co-ordinated effort” ಆಗಿ, ಗೋಪುರದ ಸಂಪೂರ್ಣ ಮಾಹಿತಿಯನ್ನು, 2 ತಿಂಗಲಿನೊಳಗೆ ನೀಡುವದಾಗಿ ಸಾಧ್ಯವೇ? ಉತ್ತರಿಸಿ?
ವಿ.ಸೂ: ಇಷ್ಟಾದ ನಂತರ, ನಿಮಗೆ ಸ್ವಲ್ಪ ಕೂಡಾ ವೃತ್ತಿಪರತೆ, ಕನ್ನಡ ಪರ ಅಭಿಮಾನ ವಿದ್ದರೆ ನಮಗೊಂದು ಧನ್ಯವಾದ ಹೇಳಿ. [ಹೇಳಲೇಬೇಕೆಂದು ಕಡ್ಡಾಯವೇನಿಲ್ಲ].
ನಮಗೆ ಒಂದು ಮೆಸೇಜ್ ಹಾಕಿದರು ಸಾಕು.
[ ನಿಮ್ಮ ಕಾಮೆಂಟ್ಸ್ ಅನ್ನು ಕೆಳಗೆ ಹಾಕಿ. ನಿಮ್ಮ ಬೆಂಬಲ, ಪ್ರೋತ್ಸಾಹ ನೀಡಿ]
ಕನ್ನಡಮ್ಮನ ಸೇವೆಯಲ್ಲಿ
ನಿಮ್ಮ
-ಸಾಮಾನ್ಯ ಕನ್ನಡಿಗ Samanya Kannadiga
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
