fbpx
ಧರ್ಮ

ದ್ರೌಪದಿನ ಕೆಣಕಿದ ಕೀಚಕ ಮತ್ತೆ ಅವನ ತಮ್ಮಂದಿರಿಗೆ ಭೀಮ ಹೆಂಗಸಿನ ವೇಷ ಹಾಕೊಂಡು ಹೆಂಗೆ ಗೂಸಾಕೊಟ್ಟ ಅಂತಾ ಓದಿ ಚೆನ್ನಾಗಿದೆ

ಕೀಚಕ ವಧೆ –  ಸ್ತ್ರೀ ವೇಶದಿಂದ  105 ಕೀಚಕರ ವಧೆ ಮಾಡಿದ ಭೀಮ.

ವಿರಾಟನಗರದ ಸೇನಾಪತಿ ಸುದೇಷ್ಣೆಯ ತಮ್ಮನೇ ಕೀಚಕನು.ಅವನೊಂದಿಗೆ ನೂರಾರು ಉಪ ಕೀಚಕರು ಇರುವುದರಿಂದಾಗಿ ಸಂಪೂರ್ಣ ಮತ್ಸ್ಯ ದೇಶದಲ್ಲಿ ಅವನಿಗೆ ಎಲ್ಲರೂ ಹೆದರಿದ್ದರು.ಕೀಚಕನು ವಿರಾಟರಾಜನಿಗೆ ಬಲವಾಗಿದ್ದನು.ಒಮ್ಮೆ ಅವನು ತನ್ನ ಅಕ್ಕನನ್ನು ನೋಡಲು ಬಂದನು.ಆಗ ದಾಸಿಯರ ಮಧ್ಯದಲ್ಲಿರುವ ಸೈರಂದ್ರಿಯನ್ನು ನೋಡಿದನು.ಅವಳನ್ನು ಕಂಡಾಗ ಆಶ್ಚರ್ಯದೊಂದಿಗೆ ಅವನಿಗೆ ಆಸೆಯಾಯಿತು.

 

ಅವನು ಅಕ್ಕಾ, ಈ ಸುಂದರಿ ಯಾರು ? ಇಂತಹವಳಿಗೆ ಈ ರೀತಿ ದಾಸಿಯ ಕೆಲಸವೇ ?  ಎಂದು ಕೇಳಿದನು.ಅನಂತರ ಸೈರಂದ್ರಿಗೆ ಸುಂದರಿ ನೀನು ಯಾರು ?ಇಲ್ಲಿ ಕಷ್ಟ ಪಡಬೇಡ.ನನ್ನನ್ನು ಮದುವೆಯಾಗಿ ಸುಖವಾಗಿರುವುದು ನಿನಗೆ ಇಷ್ಟವೇ ? ಎಂದು ಕೇಳಿದನು.ಸೈರಂದ್ರಿಯು ಅವನೊಂದಿಗೆ ಮಾತನಾಡದೇ ಹೋಗಲು ಅವನು ಬಲಾತ್ಕಾರವಾಗಿ ಸೈರಂದ್ರಿಯ ಕೈ ಹಿಡಿಯಲೆತ್ನಿಸಿದನು.ಸೈರಂದ್ರಿ ಅಲ್ಲಿಂದ ದೂರ ಓಡಿ ಹೋದಳು.

 

 

ಕೀಚಕನು ಸೈರಂದ್ರಿಯನ್ನು ನೋಡಿದಾಗಿನಿಂದಲೂ ಚಡಪಡಿಸುತ್ತಿದ್ದನು.ಅಕ್ಕನನ್ನು ಒತ್ತಾಯ ಮಾಡಿ ನೀನು ಹೇಗಾದರೂ ಸೈರಂದ್ರಿಯನ್ನು ಒಲಿಸು ಇಲ್ಲದಿದ್ದರೆ ಕೆಟ್ಟ ಪರಿಣಾಮ ಉಂಟಾಗುವುದು ಎಂದು ಎಚ್ಚರಿಸಿದನು. ಸುದೇಷ್ಣೆ  ಸಹ ಹೆದರಿ ಮರುದಿನ ಕೀಚಕನಿಗೆ ಪಾನಕವನ್ನು ಕೊಟ್ಟು ಬಾರೆಂದು ಸೈರಂದ್ರಿಯನ್ನು ಕಳಿಸಲು  ಇಚ್ಛಿಸಿದಳು.

 

 

ಸುದೇಷ್ಣೆ ಸೈರಂದ್ರಿಯನ್ನು ಕರೆದು “ನೀನು ನನ್ನ ತಮ್ಮನಿಗೆ ಪಾನಕವನ್ನು ಕೊಟ್ಟು ಬಾರೆಂದು”ತಿಳಿಸಿದಳು. ಬೇರೆ ದಾರಿಯೇ ಇಲ್ಲದಿದ್ದರಿಂದಾಗಿ ಸೈರಂದ್ರಿ ಕೀಚಕನ ಮನೆಗೆ ಹೋದಳು.ಕೀಚಕನು ಸೈರಂದ್ರಿ ಬಂದಾಗ ಸ್ವಾಗತ ಮಾಡಿದನು.ಬಾ ಇದು ನಿನ್ನ ಅರಮನೆ.ಇಲ್ಲಿ ನೀನೇ ಮಹಾರಾಣಿ ಈ ಪೀತಾಂಬರವನ್ನು ಉಟ್ಟುಕ್ಕೋ ಎಂದು ಪ್ರೀತಿಯಿಂದ ಕರೆದನು.ಅವಳ ಕೈ ಹಿಡಿಯಲು ಬಯಸಿದನು.

 

 

ಆಗ ಸೈರಂದ್ರಿಯು ಪೀತಾಂಬರವನ್ನು ಅಲ್ಲಿಯೇ ಬಿಸಾಡಿದಳು. “ಕಾಪಾಡಿ” ಎಂದು ಕೂಗುತ್ತಾ ಹೊರಗೆ  ಹೋಗಲು ಬಯಸಿದಾಗ ಕೀಚಕನು ಸಹ ಅವಳನ್ನು ಅನುಸರಿಸಿ ಬಂದನು.ಸೈರಂದ್ರಿಯ ತಲೆಗೂದಲು ಹಿಡಿದು “ನಿನಗೆಷ್ಟು ಅಹಂಕಾರ ?”  ಎಂದು ಹೇಳಿ ಬೆನ್ನ ಮೇಲೆ ಗುದ್ದಿದನು.ದ್ರೌಪದಿಯು ಈ ರೀತಿ ಅವಮಾನ ಪಡುತ್ತಿರುವುದು ಎರಡನೇ ಬಾರಿ ಅವಳಿಗೆ  ಮತ್ತೆ ಸಭೆಯಲ್ಲಿ ಆದಂತೆಯೇ ಅವಮಾನವಾಯಿತು.

ಹಿಂದೆ ಪಂಚ ಪಾಂಡವರು ಸೋತು ಅಸಹಾಯಕರಾಗಿದ್ದರು, ಈಗ ಅಜ್ಞಾತ ವಾಸದಲ್ಲಿದ್ದಾರೆ.ಯಾರಿಂದ ರಕ್ಷಣೆ ಪಡೆಯಲಿ ?ಎಂದು ದುಃಖಿಸಿದಳು.ಕೀಚಕನ ದುಷ್ಟತನವನ್ನು ವಿರಾಟನು ಅಸಹಾಯಕನಾಗಿ ನೋಡಿದನು.ಭೀಮನು ಕಟ ಕಟ ಹಲ್ಲು ಕಡಿದನು.ಯುಧಿಷ್ಠಿರನು ಕಣ್ಣಸನ್ನೆಯಲ್ಲಿಯೇ ಮೌನವಾಗಿರುವಂತೆ ಸೂಚನೆ ನೀಡಿದನು.

ಎಲ್ಲರೆದುರಿಗೆ ಅವಮಾನವಾದಂತಾಗಿ ದ್ರೌಪದಿಗೆ ಕೀಚಕನು ಎರಡು ಪೆಟ್ಟು ಹಾಕಿ ಹಿಂತಿರುಗಿದನು.ಸೈರಂದ್ರಿ ಆಳುತ್ತಲೇ ಅಂತಃಪುರಕ್ಕೆ ಬಂದಳು.ತನ್ನ ದುಃಖವನ್ನು ನಿವೇದಿಸಿದಳು.ಅಡುಗೆ ಕೆಲಸದಲ್ಲಿದ್ದ ವಲ್ಲಬನು ದುಃಖಪಡುತ್ತಿರುವಾಗ,ವಲ್ಲಭ ನಿನ್ನ ಸಂಕಟಕ್ಕೆ ಎಂದು ಕೊನೆ ಎಂದು ಬಿಕ್ಕಿ ಬಿಕ್ಕಿ  ಅತ್ತಳು. ನೀವು ಐವರಿದ್ದರು ನಾನು ಈ ರೀತಿ ಕಷ್ಟಪಡಬೇಕಾಯಿತು. ಅವಮಾನ ಪಡಬೇಕಾಯಿತು.ಎಂದು ಹೇಳಿದಳು.

 

 

ಭೀಮಸೇನನು ದ್ರೌಪದಿ ನೀನು ದುಃಖಿಸಬೇಡ,ನಾವು ಅಜ್ಞಾತವಾಸದಲ್ಲಿದ್ದೇವೆ.ಇನ್ನೆರಡು ತಿಂಗಳು ಮಾತ್ರವೇ ಉಳಿದಿವೆ.ಕೀಚಕನು ಮಾಡಿದ್ದಕ್ಕೆ ಯೋಗ್ಯ ಶಿಕ್ಷೆ ವಿಧಿಸುತ್ತೇನೆ.ನೀನು ಅವನಿಗೆ ನಾಳೆ ನಾಟ್ಯ ಶಾಲೆಗೆ ಬರುವಂತೆ ತಿಳಿಸು.ಅಲ್ಲಿಯೇ ಅವನನ್ನು ಮುಗಿಸುತ್ತೇನೆ ಎಂದು ಸಮಾಧಾನ ಪಡಿಸಿ ಕಳಿಸಿದನು.

ಮರುದಿನ ಸುದೇಷ್ಣೆಯ  ಅಂತಃಪುರಕ್ಕೆ ಬಂದ ಕೀಚಕ ಮತ್ತೆ ಸೈರಂದ್ರಿಗೆ ಮದುವೆ ಆಗುವಂತೆ ಒತ್ತಾಯ ಪಡಿಸಿದನು.ಆಗ ಸೈರಂದ್ರಿ ಬಲವಂತನಾದ ನಿನ್ನೊಂದಿಗೆ ವೈರದಿಂದ ನನಗೇನು ಪ್ರಯೋಜನವಿಲ್ಲ.ಆದರೆ ನಾನು ಎಲ್ಲರೆದುರಿಗೆ ನಾನು ನಿನ್ನನ್ನು ಮದುವೆಯಾಗಲಾರೆ. ಆದ್ದರಿಂದ ನನ್ನ ಪತಿಗಳು ಗಂಧರ್ವರು ಸಿಟ್ಟಿಗೇಳುತ್ತಾರೆ. ಆದ್ದರಿಂದ ಇಂದು ಮದ್ಯರಾತ್ರಿಯೇ ನೀನು ನಾಟ್ಯ ಶಾಲೆಗೆ ಬಾ ಎಂದು ಹೇಳಿದಳು.ಕೀಚಕನಿಗೆ ಬಹಳ ಸಂತೋಷವಾಯಿತು.

ಕೀಚಕನು ಸೈರಂದ್ರಿ ತನಗೆ ಸಿಕ್ಕಳು ಎಂದೇ ತಿಳಿದು ಅತ್ಯಂತ ಆನಂದದಿಂದ ಸಡಗರದಿಂದ ಸರ್ವ ಅಲಂಕಾರಗಳಿಂದ ಮದುವಣಿಗನಂತೆ ವೇಷ ಧರಿಸಿ ನಡುರಾತ್ರಿಯಲ್ಲಿ ನಾಟ್ಯ ಶಾಲೆಗೆ ಬಂದನು. ನಾಟ್ಯ ಶಾಲೆಯಲ್ಲಿ ದೀಪವು ಸಹ ಇರಲಿಲ್ಲ.ಕೀಚಕನು “ಪ್ರಿಯೆ ಸೈರಂದ್ರಿ ನಾನು ಬಂದಿದ್ದೇನೆ ಕೀಚಕ” ,ಎಂದು ಹೇಳಿ ಮಂಚದ ಕಡೆಗೆ ಬಂದನು.

 

 

ಆ ಕ್ಷಣದಲ್ಲಿ ಭೀಮನು ಎದ್ದು ಕೀಚಕನ ಕೆನ್ನೆಗೆ ಹೊಡೆದನು ಅಬಲೆಯ ಮೇಲೆ ಅತ್ಯಾಚಾರ ಬಯಸಿದ ಹೇಡಿಯೇ,ನನ್ನೊಂದಿಗೆ ಈಗ ನೀನು ಸೆಣಸು ಬಾ ಎಂದು ಕರೆದನು..ಆಗ ಸೈರಂದ್ರಿ, ತನಗೆ ಮೋಸ ಮಾಡಿದಳು ಎಂದು ಕೀಚಕನಿಗೆ ತಿಳಿಯಿತು.ಭೀಮ ಮತ್ತು ಕೀಚಕರ ಬಾಹು ಯುದ್ಧ ಆರಂಭವಾಯಿತು. ಅವರಿಬ್ಬರು ಸಮಬಲರು.

ಬಲಿಷ್ಟವಾದ  ಮುಷ್ಠಿಗಳಿಂದ ಗುದ್ದಿಕೊಂಡರು.ಅನೇಕ ರೀತಿಯ ಪೆಟ್ಟುಗಳಿಂದ ಬೀಳಿಸಲು ಪ್ರಯತ್ನಿಸಿದರು.ಹತ್ತಾರು ಬಾರಿ ಭೀಮನು ಕೀಚಕನನ್ನು ಕೆಡವಿದನು.ಕೀಚಕನ ಎದೆಗೆ ಗುದ್ದಿದನು. ಎತ್ತಿ ಬಗೆದನು.ಹೀಗೆ ಕೀಚಕನು ಮಾಂಸದ ಮುದ್ದೆಯಂತಾಗಿ ಕೆಳಗೆ ಬಿದ್ದು ಸತ್ತನು.ಸೈರಂದ್ರಿಯು ನನ್ನ ಪತಿ ಗಂಧರ್ವನು ಕೀಚಕನಿಗೆ ಬುದ್ದಿ ಕಲಿಸಿ ಸಾಯಿಸಿದ್ದಾನೆ.ಎಂದು ಆನಂದದಿಂದ ಅಂತಃಪುರಕ್ಕೆ ಓಡಿ ಹೋಗಿ ಹೇಳಿದಳು.ಕೀಚಕನ ಹೆಣವನ್ನು ನೋಡಿ ಅವನಿಂದ ತೊಂದರೆಗೆ ಒಳಗಾದವರು ಸಂತುಷ್ಟರಾದರು.ಅವನ ತಮ್ಮಂದಿರು 105 ಜನರು ಕೋಪದಿಂದ ಸೈರಂದ್ರಿಯನ್ನು ಸಹ ಕೀಚಕನ ಹೆಣದೊಂದಿಗೆ ಕಟ್ಟಿ ಸ್ಮಶಾನದ ಕಡೆಗೆ ಒಯ್ಯ ತೊಡಗಿದರು.

 

 

ಇದನ್ನು ತಿಳಿದಾಗ ಭೀಮನು ವೇಷ ಬದಲಿಸಿಕೊಂಡು ಸ್ಮಶಾನದ ಕಡೆಗೆ ನಡೆದನು.ಒಂದು ಮರವನ್ನೇ ಕಿತ್ತು ಅವರ ಮೇಲೆ ಆಕ್ರಮಣ ಮಾಡಿದನು.ಭೀಮನು ಎಲ್ಲ ಉಪ ಕೀಚಕರನ್ನು ಒಡೆದು ಸಾಯಿಸಿದನು.ಎಲ್ಲರನ್ನು ಸೇರಿಸಿ ದಾಹ ಕಾರ್ಯ ಮಾಡಿದನು.ಸೈರಂದ್ರಿಯು ಗಂಧರ್ವರು ಉಪಕೀಚಕರನ್ನು ಕೊಂದಿದ್ದಾರೆಂದು ತಿಳಿಸಿದಳು.ಅನಂತರದಲ್ಲಿ ಸೈರಂದ್ರಿಗೆ ಗೌರವ ತೋರುತ್ತಾ ಎಲ್ಲರೂ ಹೆದರುತ್ತ ಇರತೊಡಗಿದರು.ಅವಳು ತನ್ನ ಕಾರ್ಯಗಳನ್ನು ನಡೆಸಿಕೊಂಡು ಕಾಲಕಳೆಯ ತೊಡಗಿದಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top