fbpx
ಮನೋರಂಜನೆ

ಕಾರ್ತಿಕ್ ಜಯರಾಮ್ ‘ಬಾಲಿವುಡ್’ ಮುಂದೆ ಕನ್ನಡ ಚಿತ್ರರಂಗವನ್ನು ಅಣುಕಿಸಿ ಕನ್ನಡಿಗರ ಕೋಪಕ್ಕೆ ತುತ್ತಾಗಿದ್ದು ಹೀಗೆ

ಕಾರ್ತಿಕ್ ಜಯರಾಮ್ ‘ಬಾಲಿವುಡ್’ ಮುಂದೆ ಕನ್ನಡ ಚಿತ್ರರಂಗವನ್ನು ಅಣುಕಿಸಿ ಕನ್ನಡಿಗರ ಕೋಪಕ್ಕೆ ತುತ್ತಾಗಿದ್ದು ಹೀಗೆ..

 


‘ಅಶ್ವಿನಿ ನಕ್ಷತ್ರ’ ಎನ್ನುವ ಕನ್ನಡ ಸೀರಿಯಲ್ ಒಂದರಲ್ಲಿ ನಾಯಕನಟನಾಗಿ ಅಭಿನಯಿಸಿ ಭಾರಿ ಜನ ಮನ್ನಣೆ ಗಳಿಸದ್ದ ಕಾರ್ತಿಕ್ ಜಯರಾಮ್ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ .
2014 ರಲ್ಲಿ ಜಸ್ಟ್ ಲವ್ ಎನ್ನುವ ಕನ್ನಡ ಸಿನಿಮಾ ಒಂದರಲ್ಲಿ ಅಭಿನಯ ಕೂಡ ಮಾಡಿದ್ದರು .

 


2013 ರಿಂದ 2015 ರ ವರೆಗೆ, ಕಾರ್ತಿಕ್ ಅವರು ಅಶ್ವಿನಿ ನಕ್ಷತ್ರ ಎನ್ನುವ ಕನ್ನಡ ಸೀರಿಯಲ್ ನಲ್ಲಿ ಕಾಣಿಸಿಕೊಂಡರು ‘ಜಯ ಕೃಷ್ಣ’ ಅಥವಾ “ಜೆ.ಕೆ.” ಪಾತ್ರದಲ್ಲಿ ಅದ್ಭುತವಾಗಿ ಮಿಂಚಿದ್ದರು .

 


2015 ರಲ್ಲಿ, ಪೌರಾಣಿಕ ಹಿಂದಿ ಟಿವಿ ಸರಣಿಯ ‘ಸಿಯಾ ಕೆ ರಾಮ್’ ಸ್ಟಾರ್ ಪ್ಲಸ್ನಲ್ಲಿ ಪ್ರಸಾರವಾಗಿರುವ ಧಾರವಾಹಿ ಇದರಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ .

ಈ ರಾವಣನ ಪಾತ್ರ ಕಾರ್ತಿಕ್ ರವರಿಗೆ ರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟಿತ್ತು .

 

 

ಆದರೆ ಮೊನ್ನೆ ಫೇಸ್ ಬುಕ್ ನಲ್ಲಿ ಅವರು ಮಾಡಿದ ಆ ಒಂದು ಸ್ಟೇಟಸ್ ಕನ್ನಡಿಗರ ಕೋಪದ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು

ಆ ಸ್ಟೇಟಸ್ ನ ಒಕ್ಕಣಿ ಹೀಗಿತ್ತು

 

 

“ಧನ್ಯವಾದಗಳು ಬಾಲಿವುಡ್ ಇಂಡಸ್ಟ್ರಿ ರಾವಣನ ಪಾತ್ರವನ್ನು ಅಚ್ಚುಕಟ್ಟಾಗಿ ನಟಿಸಿದ ನಟರಲ್ಲಿ ಒಬ್ಬನನ್ನಾಗಿ ಆಯ್ಕೆ ಮಾಡಿದ್ದಕ್ಕೆ
ಸ್ಯಾಂಡಲ್ ವುಡ್ ಪೌರಾಣಿಕ ಪಾತ್ರ ಒಂದಕ್ಕೆ ನನ್ನನ್ನು ನಿರಾಕರಿಸಿತ್ತು
ಧನ್ಯವಾದಗಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಕ್ಕೆ
ನಾನು ಕೊಳದಲ್ಲಿ ಈಜುವ ಬದಲು ಸಮುದ್ರದಲ್ಲಿ ಈಜಲು ಇಷ್ಟಪಡುತ್ತೇನೆ

ನಿಮ್ಮ ಪ್ರೀತಿಯ
ಓಂ ಸಾಯಿ ರಾಮ್
ಹರ ಹರ ಮಹದೇವ್ ”

ಈ ಸ್ಟೇಟಸ್ ಹಾಕುತ್ತಿದ್ದಂತೆ ತರಾಟೆಗೆ ತೆಗೆದುಕೊಂಡ ನೆಟ್ಟಿಗರು , ಕಾರ್ತಿಕ್ ರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳಲು ಶುರು ಮಾಡಿದರು ಇದಾದ ಕೆಲವು ಗಂಟೆಗಳಲ್ಲೇ ಕಾರ್ತಿಕ್

ತಮ್ಮ ಸ್ಟೇಟಸ್ ಮರು ಬದಲಾಯಿಸಿಕೊಂಡಿದ್ದಾರೆ .

 

 

ಆದರೂ ಹತ್ತಿದ ಏಣಿಯನ್ನು ದೂರ ತಳ್ಳಿ ಹಿಂದಿನ ದಾರಿ ಮರೆತಿದ್ದಾರೆ ಎಂಬುದು ಹಲವರ ಅಭಿಪ್ರಾಯವಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top