fbpx
ಮನೋರಂಜನೆ

ಸ್ಯಾಂಡಲ್ ವುಡ್ ಗೆ ಹೊಸ ವಿಷ್ಣುವರ್ಧನ್ ಎಂಟ್ರಿ..! ಯಾರು ಗೊತ್ತಾ?

ಸ್ಯಾಂಡಲ್ ವುಡ್ ಗೆ ಹೊಸ ವಿಷ್ಣುವರ್ಧನ್ ಎಂಟ್ರಿ..! ಯಾರು ಗೊತ್ತಾ?

 

 

ಕನ್ನಡ ಚಿತ್ರರಂಗಕ್ಕೆ ಒಬ್ಬರೇ ವಿಷ್ಣುವರ್ಧನ್ ಅದು ಸಾಹಸ ಸಿಂಹ ವಿಷ್ಣುವರ್ಧನ್ ಎನ್ನುವುದು ಕರ್ನಾಟಕದಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಆದರೆ ಹಾಗೆನ್ನುವವರಿಗೆಲ್ಲಾ ಇಲ್ಲಿ ಹೊಸ ಸುದ್ದಿಯೊಂದಿದೆ. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ವಿಷ್ಣುವರ್ಧನ್ ರ ಎಂಟ್ರಿಯಾಗಿದೆ. ಇದೇನಪ್ಪ ಇದು ಅಂತ ಶಾಕ್ ಆದ್ರಾ? ಶಾಕ್ ಅಗೆಬೇಡಿ ಮುಂದೆ ಓದಿ.

 

 

ಈ ನಟನ ಮೂಲಹೆಸರು ಪ್ರತಾಪ್ ಆದರೆ ಸ್ವತಃ ವಿಷ್ಣುವರ್ಧನ್ ಅಭಿಮಾನಿಯಾಗಿರುವ ಕಾರಣ ತನ್ನ ಹೆಸರನ್ನು ವಿಷ್ಣುವರ್ಧನ್ ಎಂದು ಇಟ್ಟುಕೊಂಡಿದ್ದಾನೆ. ಹಂದಹಾಗೆ ಈತ ಅಭಿನಯಿಸುತ್ತಿರುವ ಚಿತ್ರದ ಹೆಸರು “A2A2A”. ವಿಚಿತ್ರ ಟೈಟಲ್ ನೊಂದಿಗೆ ಸೆಟ್ಟೇರಿರುವ ಈ ಚಿತ್ರವು ಕನ್ನಡದ ಪ್ರಖ್ಯಾತ ಐದು ಚಿತ್ರಗಳನ್ನು ಮಿಕ್ಸ್ ಮಾಡಿ ಆರನೇ ಕತೆಯನ್ನು ಹೊಂದಲಿದೆ.

 

 

ಸಾಹಸಸಿಂಹ ವಿಷ್ಣುವರ್ಧನ್‌ ಅವರ “ಬಂಧನ, ರಾಜ್‌ಕುಮಾರ್‌ ಅವರ “ಕಸ್ತೂರಿ ನಿವಾಸ’, , ಉಪೇಂದ್ರ ಅವರ “ಉಪೇಂದ್ರ’, ಕಿಚ್ಚ ಸುದೀಪ್‌ ಅವರ “ಹುಚ್ಚ’, ಶಿವರಾಜಕುಮಾರ್‌ ಅವರ “ಜೋಗಿ’ ಚಿತ್ರಗಳನ್ನು ಆಧರಿಸಿ ಆರನೇ ಕತೆಯನ್ನು ಸಿದ್ಧಪಡಿಸಿದ್ದಾರಂತೆ ನಿರ್ದೇಶಕ ಆರ್.ಕೆ.ನಾಯಕ್. ಆದಿ-ಅಂತ್ಯ-ಆರಂಭ ಎಂಬ ಕಾನ್ಸೆಪ್ಟ್ ಹೊಂದಿರುವ ಈ ಚಿತ್ರಕ್ಕೆ ಸೆಪ್ಟೆಂಬರ್ 27 ರಂದು ಮೂಹರ್ತವಾಗಿದೆ.

 

 

`ಎ2ಎ2ಎ’ ಚಿತ್ರದಲ್ಲಿ ವಿಷ್ಣುವರ್ಧನ್ ಎನ್ನುವವರು ನಾಯಕರಾಗಿ ನಟಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಹಿತನ್ ಹಾಸನ್ ಚಿತ್ರದ ಮತ್ತೊಬ್ಬ ನಾಯಕ. ಚಿತ್ರದಲ್ಲಿ ಅಮೃತಾ ರಾಜ್ ನಾಯಕಿ. ಚಿತ್ರಕ್ಕೆ ಹಿತನ್ ಹಾಸನ್ ಅವರೇ ಸಂಗೀತ ಸಂಯೋಜಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top