fbpx
ತಿಂಡಿ ತೀರ್ಥ

ಅತಿ ಸುಲಭವಾಗಿ ಪ್ಯಾನ್‌ ಕೇಕ್‌ ಮಾಡುವ ವಿಧಾನ

 ಅತಿ ಸುಲಭವಾಗಿ  ಪ್ಯಾನ್‌ ಕೇಕ್‌  ಮಾಡುವ ವಿಧಾನ

ಪ್ಯಾನ್‌ ಕೇಕ್‌  ಮಾಡಲು ಬೇಕಾಗುವ ಸಾಮಗ್ರಿಗಳು:

8 ರಿಂದ 10 ಇಂಚುಗಳಷ್ಟು ಉದ್ದದ ಕೇಕ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳ ಪಟ್ಟಿ ಇಂತಿದೆ. ಕೇಕ್‌ನ ಗಾತ್ರಕ್ಕನುಗುಣವಾಗಿ ಈ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ.

*2 ಕಪ್‌ ಹಿಟ್ಟು (ಅಂದಾಜು 255 ಗ್ರಾಂ)

*2 ಮೊಟ್ಟೆಗಳು

*11/2 ಕಪ್‌ ಹಾಲು (350 ಮಿ.ಲೀ.)

*1/2 ಚಮಚಾ ಬೇಕಿಂಗ್ ಪುಡಿ

*2 ಚಮಚಾ ಬೆಣ್ಣೆ ಅಥವಾ ಅಡುಗೆಗೆ ಉಪಯೋಗಿಸುವ ಎಣ್ಣೆ

*5 ಚಮಚಾ ಸಕ್ಕರೆ

 

ಪ್ಯಾನ್ ಕೇಕ್  ಮಾಡುವ ವಿಧಾನ :

  1. ಮೊಟ್ಟೆಯನ್ನು ಒಡೆದು ಪಾತ್ರೆಯೊಳಗೆ ಸುರಿದು ಚೆನ್ನಾಗಿ ಕಲಕಿ.ಹಿಟ್ಟು ಹಾಗೂ ಇತರ ಸಾಮಗ್ರಿಗಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಅಡುಗೆ ಸೋಡಾವನ್ನೂ ಚಿಟಿಕೆಯಷ್ಟು ಬಳಸಬಹುದು.
  2. ಮೈಕ್ರೋವೇವ್‌ ಓವೆನ್‌ನಲ್ಲಿ ಇಡಬಹುದಾದಂತ ಪಾತ್ರೆಯಲ್ಲಿ ಬೆಣ್ಣೆಯನ್ನು ಕರಗಿಸಿ. ಚೆನ್ನಾಗಿ ಕರಗಿದ ಬಳಿಕ ಪಾತ್ರೆಯನ್ನು ಇಳಿಸಿಡಿ.
  3. ಕರಗಿದ ಬೆಣ್ಣೆ ಅಥವಾ ಎಣ್ಣೆಗೆ ಹಾಲನ್ನು ಮಿಶ್ರಣ ಮಾಡಿ, ಬಿಸಿ ಮಾಡಿ. ಕೆಲವು ಒಣ ವಸ್ತುಗಳನ್ನೂ ಈ ಸಂದರ್ಭದಲ್ಲಿ ಸೇರಿಸಬಹುದು.ಆದರೆ ತುಂಬಾ ಹೊತ್ತು ಬಿಸಿ ಮಾಡಬೇಡಿ. ಇದರಿಂದ ಪ್ಯಾನ್‌ಕೇಕ್‌ಗಳ ಗುಣಮಟ್ಟ ಮತ್ತು ಆಕಾರ ಬದಲಾಗುತ್ತದೆ. 4. ಈ ಮಿಶ್ರಣವನ್ನು ಹುರಿಯಲು ಕಡಿಮೆ ಪ್ರಮಾಣದ ಉರಿ ಸಾಕು. ನಿಮ್ಮಮ ಸ್ಟೌನಲ್ಲಿ ಹುರಿಯುವ ಆಯ್ಕೆಯಿದ್ದರೆ ಅದನ್ನೇ ಆಯ್ಕೆ ಮಾಡಿಕೊಳ್ಳಿ. ಇದರಿಂದ ನಿಗದಿತ ಪ್ರಮಾಣದ ಶಾಖ ಸಿಕ್ಕು ಕೇಕ್‌ ಚೆನ್ನಾಗಿ ಆಗುತ್ತದೆ. ಮಿಶ್ರಣ ಪಾತ್ರೆಗೆ ಅಂಟಿಕೊಳ್ಳುವುದನ್ನೂ ತಪ್ಪಿಸಬಹುದು. ಹುಂ, ಪಾತ್ರೆಗೆ ಬೆಣ್ಣೆ ಅಥವಾ ಎಣ್ಣೆಯನ್ನೂ ಲೇಪಿಸಿಕೊಂಡರೆ ಪಾತ್ರೆಗೆ ಅಂಟಿಕೊಳ್ಳುವುದನ್ನು ತಪ್ಪಿಸಬಹುದು.
  4. ಕೇಕ್‌ನ ಮಿಶ್ರಣ ಬಿಸಿಯಾಗುತ್ತಿರುವಾಗ ನೀರನ್ನು ಚಿಮುಕಿಸಿ ಹದ ನೋಡಬಹುದು. ಮಿಶ್ರಣದ ಮೇಲೆ ನೀರಿನ ಹನಿಗಳು ಕುಣಿಯುತ್ತವಾದರೆ ಪಾಕ ಸಿದ್ಧವಾಗಿದೆಯೆಂದೇ ಅರ್ಥ.
  5. ಹುರಿಯುವ ಪಾತ್ರೆಗೆ ಈ ಮಿಶ್ರಣವನ್ನು ದೊಡ್ಡ ತುದಿಯ ಚಮಚ ಅಥವಾ ಬೇರೆ ಪಾತ್ರೆಯಿಂದ ಸುರಿಯಿರಿ. ಪ್ರತೀ ಬೇಯಿಸುವ ಪಾತ್ರೆಯ ಗಾತ್ರಕ್ಕನುಗುಣವಾಗಿ 1/4 ಪ್ರಮಾಣದಲ್ಲಿ ಮಿಶ್ರಣವನ್ನು ಸುರಿಯಿರಿ. ಈ ಪ್ರಮಾಣದಲ್ಲಿ ಸುರಿಯುವುದರಿಂದ ಉತ್ತಮ ಸ್ವಾಧ ಹಾಗೂ ಗುಣಮಟ್ಟದ ಪ್ಯಾನ್‌ ಕೇಕ್‌ಗಳನ್ನು ಪಡೆಯಬಹುದಾಗಿದೆ.
  6. ಪ್ರತ್ಯೇಕ ಪಾತ್ರೆಗಳಲ್ಲಿ ಮಿಶ್ರಣವನ್ನು ಸುಮಾರು ಎರಡು ನಿಮಿಷಗಳ ಕಾಲ ಬೇಯಿಸಿ. ಇದು ಹೊಂಬಣ್ಣಕ್ಕೆ ತಿರುಗಿದೆ ಮತ್ತು ಅಂಚಿನಲ್ಲಿ ಗುಳ್ಳೆಗಳು ಮೂಡುವವರೆಗೂ ಬಿಸಿ ಮಾಡಿ. ಇದು ಕೇಕ್‌ಗೆ ಒಂದು ನವಿರಾದ ಆಕಾರವನ್ನು ಕೊಡುತ್ತದೆ.
  7. ಕೇಕ್‌ನ ಬಣ್ಣ ಹೊನ್ನಿನಂತೆ ಕಾಣ ತೊಡಗಿದಾಗ ಉರಿಯನ್ನು ಬಂದ್‌ ಮಾಡಿ, ಪಾತ್ರೆಯನ್ನು ಇಳಿಸಿ. ಈ ಬಣ್ಣ ನಿಮ್ಮಲ್ಲಿ ಸಮಾಧಾನ ಮೂಡಿಸದಿದ್ದರೆ ಅಥವಾ ಕೇಕ್‌ ಮತ್ತಷ್ಟು ರೋಸ್ಟ್‌ ಆಗಬೇಕಾಗಿದ್ದು ನಿಮ್ಮ ಉದ್ದೇಶವಾಗಿದ್ದರೆ ಮತ್ತೆ ಮೂವತ್ತು ಸೆಕೆಂಡುಗಳ ಕಾಲ ಬಿಸಿ ಮಾಡಿ.
  8. ಹೌದು, ನೀವು ಬಯಸಿದ ಪಾನ್‌ಕೇಕ್ ಈಗ ಸಿದ್ಧವಾಗಿದೆ. ಸೂಕ್ತ ಪರಿಮಳ,ಕಡಲೆಕಾಯಿ, ಬೆಣ್ಣೆ, ಸಿರಪ್, ಜೆಲ್ಲಿ, ಚಾಕೊಲೇಟ್ ಪುಡಿ ಹಾಗೂ ಹಣ್ಹನ ಚೂರುಗಳನ್ನೂ ಸೇರಿಸಿ ಬಾಯಿ ಚಪ್ಪರಿಸುತ್ತಾ ತಿನ್ನಿ. ಎಂಜಾಯ್!

 

ಸಲಹೆಗಳು:

*ಸಕ್ಕರೆ ಮುಕ್ತವಾದ ಕೇಕ್‌ ಬೇಕಿದ್ದವರು ಪ್ರೋಟೀನ್‌ ಪೌಡರ್‌ ಅಥವಾ ಮೊಟ್ಟೆಯ ಬಿಳಿಯಬಾಗವನ್ನು ಹೆಚ್ಚಾಗಿ ಬಳಸಿ ಕೇಕ್‌ ತಯಾರಿಸಿಕೊಳ್ಳಬಹುದು.

*ನೀವು ಬಳಸಿರುವ ಹಿಟ್ಟು ಸರಿಯಾಗಿ ಬುರುಗು ಬರದೇ ಇದ್ದ ಪಕ್ಷದಲ್ಲಿ ಅದಕ್ಕೆ ಬೇಕಿಂಗ್‌ ಪೌಡರ್‌ ಅಥವಾ ಅಡುಗೆ ಸೋಡಾವನ್ನೂ ಸೇರಿಸಬೇಕಾಗಬಹುದು.ಅಥವಾ ಎರಡನ್ನೂ ಬಳಸಬೇಕಾಗಬಹುದು.

*ಇದರ ರುಚಿಯಯನ್ನು ಮತ್ತಷ್ಟು ಹೆಚ್ಚಿಸಲು ಸಕ್ಕರೆ ಮತ್ತು ಲಿಂಬೆರಸ ಸಹಕಾರಿ. ಕೇಕ್ ಅಲಂಕಾರಕ್ಕೂ ಇದು ಸೂಕ್ತವಾದದ್ದು. *ಕೇಕ್‌ ತಯಾರಿಸುವವಾಗ ಸಾಧ್ಯವಾದಷ್ಟೂ ಅಂಟಿಕೊಳ್ಳದ ಗುಣವಿರುವ ಪಾತ್ರೆಯನ್ನೇ ಬಳಸಿ. ಅದಾಗದಿದದ್ದರೆ ಮಿಶ್ರಣವನ್ನು ಓವನ್‌ ಗೆ ಹಾಕುವ ಮುನ್ನ ಪಾತ್ರೆಗೆ ಕೊಬ್ಬನ್ನು ಸವರಿ.

* ದಾಲ್ಚಿನ್ನಿಯಂಥ ವಸಸ್ತುಗಳನ್ನು ಬೆರೆಸುವುದರಿಂದ ಸ್ವಾಧವನ್ನು ಹೆಚ್ಚಿಸಬಹುದು.

* ಪ್ಯಾನ್ ಕೇಕ್ ಗಳ ಅಲಂಕಾರಕ್ಕೆ ಚಾಕೋಲೆಟ್‌ ಚೂರುಗಳು, ಸ್ಟ್ರಾಬೆರಿ, ಬಾಳೆ, ಚೆರೀ ಹಣ್ಣುಗಳನ್ನು ಬಳಸುವುದರಿಂದ ಸ್ವಾಧವೂ ಹೆಚ್ಚಾಗುತ್ತದೆ. ಕಣ್ಣಿಗೂ ಅಂದವಾಗಿ ಕಾಣುತ್ತದೆ.

*ಹಾಲು ಅಥವಾ ಬಿಯರ್‌ ಸೇವಿಸುತ್ತಿರುವ ಸಂದರ್ಭದಲ್ಲಿ ಈ ಕೇಕ್‌ನ್ನು ತಿಂದರೆ ಸ್ವಾಧ ಮತ್ತಷ್ಟು ರುಚಿಯಾಗಿರುತ್ತದೆ.

*ಬೇಕಿಂಗ್‌ ಪೌಡರ್‌ ಪ್ರಮಾಣ ಹೆಚ್ಚಾದದಷ್ಟೂ ಇದರ ರುಚಿಯೂ ವೃದ್ಧಿಯಾಗುತ್ತದೆ.

*ಸೂರ್ಯ ಕಾಂತಿ ಎಣ್ಣೆ ಬಳಸಿಕೊಂಡೂ ಪಾನ್‌ಕೇಕ್‌ ತಯಾರಿಸಬಹುದು.

*ಇಷ್ಟರ ಮೇಲೂ ಮತ್ತೂ ಹೊಸ ರುಚಿಯ ಪಾನ್‌ ಕೇಕ್‌ ತಿನ್ನುವ ಆಸೆಯಿದ್ದರೆ, ವೆನಿಲ್ಲಾ, ಹಣ್ಣಿನ ಪೇಸ್ಟ್ ಮುಂತಾದ ಕ್ರೀಮ್‌ಗಳನ್ನು ಲೇಪಿಸಿ ರುಚಿಯನ್ನು ಸವಿಯಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top