fbpx
ಮನೋರಂಜನೆ

ಕಿರಿಕ್ ಹುಡುಕಿ ‘ರಶ್ಮಿಕಾ ಮಂದಣ್ಣ’ ಫೇವರೆಟ್ ಹೀರೋ ಯಾರು ಗೊತ್ತಾ?

ಕಿರಿಕ್ ಹುಡುಕಿ ‘ರಶ್ಮಿಕಾ ಮಂದಣ್ಣ’ ಫೇವರೆಟ್ ಹೀರೋ ಯಾರು ಗೊತ್ತಾ?

 

 

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಎಲ್ಲರ ಮನಸ್ಸನ್ನು ಗೆದ್ದಿರುವ ಮುದ್ದು ಮುಖದ ಚೆಲುವೆ ರಶ್ಮಿಕಾ ಮಂದಣ್ಣ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆದರೆ ರಶ್ಮಿಕಾ ಮಂದಣ್ಣ ರವರಿಗೆ ಫೆವೆರೆಟ್ ಹೀರೋ ಯಾರು ಗೊತ್ತಾ? ಮುಂದೆ ಓದಿ

 

 

ಅಕುಲ್ ಬಾಲಾಜಿ ನಿರೂಪಕನಾಗಿ ನಡೆಸಿಕೊಡುವ ಕಲರ್ಸ್ ಸೂಪರ್ ವಾಹಿನಿಯ ‘ಸೂಪರ್ ಟಾಕ್ ಟೈಮ್’ ಅತಿ ಹೆಚ್ಚು ವಿವಾದಗಳನ್ನು ಉಂಟು ಮಾಡುವ ಈ ಕಾರ್ಯಕ್ರಮ ವಾಗಿಬಿಟ್ಟಿದೆ ಒಂದಲ್ಲ ಒಂದು ವಿವಾದದಲ್ಲಿ ಬಹಳ ಪ್ರಚಲಿತವಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಈ ವಾರ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ದಸರಾ ವಿಶೇಷವಾಗಿ ಆಗಮಿಸಿದರು.

 

 

ಸ್ವಲ್ಪ ಮೋಜು ಮಸ್ತಿ ಹರಟೆಗಳ ನಂತರ ಅಕುಲ್ ಬಾಲಾಜಿ ರ್ಯಾಫೈಡ್ ಫೇರ್ ರೌಂಡ್ ಅನ್ನು ಶುರು ಮಾಡಿದರು. ಈ ಭಾರಿ ಯಾವುದೇ ವಿವಾದಗಳಿಗೂ ಸಿಲುಕದೆ ಉತ್ತರ ನೀಡಿದ ರಕ್ಷಿತ್ ರಶ್ಮಿಕಾ ಜೋಡಿ ಪ್ರಶ್ನೆಗಳಿಗೆ ಬಹಳ ನಾಜೂಕಾಗಿಯೇ ಉತ್ತರ ಕೊಡಲು ಸಿದ್ದವಾದರು.

 

 

ನಿರೂಪಕ ಅಕುಲ್ ಬಾಲಾಜಿ “ನಿಮ್ಮ ಫೆವರಿಟ್ ಸ್ಟೈಲಿಶ್ ಐಕಾನ್ ಯಾರು” ಎಂದು ಕೇಳಿದಾಗ ರಶ್ಮಿಕಾ ತಕ್ಷಣ ” ಕಿಚ್ಚ ಸುದೀಪ್ ಸರ್” ಎಂದು ಉತ್ತರಿಸಿದರು. ಕಿಚ್ಚ ಸುದೀಪ್ ಅವರು ಮಾತಾಡೋ ಸ್ಟೈಲ್, ವಾಯ್ಸ್, ನಟನೆ ಮತ್ತು ಅವರ ಆಟಿಟ್ಯೂಡ್ ತುಂಬಾ ಇಷ್ಟ ಎಂದು ರಶ್ಮಿಕಾ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top