ವಾರ ಭವಿಷ್ಯ ಅಕ್ಟೋಬರ್ 1 ರಿಂದ 7 ರವರೆಗೆ.
ಮೇಷ (Mesha)
ದೈವಾನುಗ್ರಹ ಉತ್ತಮವಿದ್ದು ಶುಭಕಾಲ ಆರಂಭವಾಗಲಿದೆ.ತುಂಬ ಉತ್ಸಾಹ ಹಾಗೂ ಚಟುವಟಿಕೆಯ ಕಾಲ.ವ್ಯವಹಾರ ಕ್ಷೇತ್ರ ಉದ್ಯೋಗ,ವ್ಯಾಪಾರ ರಂಗದಲ್ಲಿ ಅದೃಷ್ಟದ ಆಸರೆ ಸದಾ ಇರಲಿದೆ. ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಪರಿಹರಿಸಿಕೊಳ್ಳುವ ಆತ್ಮವಿಶ್ವಾಸ ಪ್ರಯತ್ನಶೀಲತೆಯ ಶಕ್ತಿ ಪಡೆಯಲಿದ್ದೀರಿ ಹಾಗೂ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳ ನಿವಾರಣೆ,ಅನ್ಯೂನ್ಯತೆ ,ಸಹಕಾರ,ಸುಖ,ಸಂತೋಷ ಸಮಾಧಾನಗಳು ಬೆಳೆಯಲಿವೆ.ಕೆಲವೊಮ್ಮೆ ಕಠಿಣ ಸನ್ನಿವೇಶಗಳು ಎದುರಾಗುವ ಸಾಧ್ಯತೆ ಇರುತ್ತದೆ.
ವೃಷಭ (Vrushabh)
ಕಾರ್ಯರಂಗದಲ್ಲಿ ಹಾಗೂ ಜೀವನ ಕ್ಷೇತ್ರದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳವುದು ಅಗತ್ಯವಿದೆ.ಹಾಗೆ ಯಾವುದರಲ್ಲೂ ಆತುರತೆ ತೋರಿ ಖಚಿತ ನಿರ್ಧಾರ ಕೈಗೊಳ್ಳದಿರಿ.ಹಿತಶತ್ರುಗಳು ನಿಮ್ಮ ನಡವಳಿಕೆಯನ್ನು ಗಮನಿಸಲಿದ್ದಾರೆ.ಕಾಳಜಿ ಇರಲಿ.ವ್ಯಾಪಾರ ವ್ಯವಹಾರಗಳು ಕೊಂಚ ಹಿನ್ನಡೆ ಸ್ಥಿತಿಯಲ್ಲಿದ್ದು ಆಗಾಗ ಆರ್ಥಿಕ ಸಮಸ್ಯೆಗಳು ತೋರಿ ಬಂದರೂ ಅನಿರೀಕ್ಷಿತ ಧನಾಗಮನದಿಂದ ಪರಿಸ್ಥಿತಿಯು ಸುಧಾರಿಸುವುದು.ಮಿಶ್ರ ಫಲಗಳು ಅನುಭವವಾಗಲಿವೆ. ಆದರೆ ಸಂಚಾರದಲ್ಲಿ ಗಮನ ಇರಲಿ.
ಮಿಥುನ (Mithuna)
ಕಾರ್ಯಕ್ಷೇತ್ರದಲ್ಲಿ ನಿಮ್ಮದು ಅತ್ಯಂತ ಮಹತ್ವಪೂರ್ಣ ಹಾಗೂ ಸಂತೋಷದ ಕಾಲವೆನ್ನಬಹುದು.ವ್ಯಾಪಾರ ವ್ಯವಹಾರಗಳು ವಾಸ್ತವಿಕ ರೂಪ ತಳೆದು ಅನಿರೀಕ್ಷಿತವಾಗಿ ಸಂತೋಷದ ಸುದ್ದಿ ಬಂದರು ಇದಕ್ಕೆ ನಿಮ್ಮ ಪ್ರಯತ್ನ ಬಲ, ಆತ್ಮವಿಶ್ವಾಸ ಕಾರಣವಾಗಲಿದೆ.ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ ನಿಶ್ಚಿತ ಫಲ ಅನುಭವಕ್ಕೆ ಬರುವುದು ಆರ್ಥಿಕವಾಗಿ ಹಿನ್ನೆಡೆ ತೋರಿಬಂದರು ಉದ್ಯೋಗ ರಂಗದಲ್ಲಿ ಮುನ್ನಡೆ ಸಾಧಿಸಲಿದ್ದೀರಿ.ಹಾಗೇ ಮನೆಯಲ್ಲಿ ಹಂತ ಹಂತವಾಗಿ ವಾತಾವರಣ ತಿಳಿಯಾಗಲಿದೆ.ಹಿರಿಯರಿಗೆ ಅನಾರೋಗ್ಯ ಕಾಡಲಿದೆ.
ಕರ್ಕ (Karka)
ಕಾರ್ಯ ಕ್ಷೇತ್ರದಲ್ಲಿ ಸಮಾಧಾನದಿಂದ ಮುಂದುವರಿಯಿರಿ.ಅನಾವಶ್ಯಕ ಅಪವಾದ,ಅವಮಾನ,ಕಿರಿಕಿರಿಯನ್ನು ಅನುಭವಿಸಬೇಕಾಗಬಹುದು. ವ್ಯವಹಾರ ಉದ್ಯೋಗ ವ್ಯಾಪಾರಗಳಲ್ಲಿ ಸರಿಯಾದ ನಿರ್ಧಾರಕ್ಕೆ ಬಂದು ಲಾಭದಾಯಕವಾಗಲಿದೆ. ಆದಾಯ,ಗೌರವ ಎರಡನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ.ಅನಿರೀಕ್ಷಿತ ಘಟನೆಗಳು ಸಂಭವಿಸಿ ಗೊಂದಲಗಳು ತೋರಿಬಂದರೂ ತಾಳ್ಮೆ ಸಮಾಧಾನಗಳು ನಿಮ್ಮನ್ನು ಕಾಪಾಡಲಿದೆ. ಅನಿರೀಕ್ಷಿತ ಮಂಗಳಕಾರ್ಯಗಳು ಉದ್ಯೋಗಲಾಭ,ವಿದ್ಯಾರ್ಥಿಗಳಿಗೆ ಯಶಸ್ಸು ತರುವುದು.
ಸಿಂಹ (Simha)
ಕಾರ್ಯ ಕ್ಷೇತ್ರದಲ್ಲಿ ಒಂದಿಲ್ಲೊಂದು ರೀತಿಯ ಬೇಡಿಕೆಯನ್ನು ಈಡೇರಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ.ಇಲ್ಲಿ ಕೌಶಲ್ಯಕ್ಕಿಂತ ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆ ದೊರೆಯುತ್ತದೆ.ಒಟ್ಟಿನಲ್ಲಿ ಜೀವನದಲ್ಲಿ ಬದಲಾವಣೆ ತೋರಿ ಬಂದು ಅನಿರೀಕ್ಷಿತ ಘಟನೆಗಳು ಅನುಭವಕ್ಕೆ ಬರುತ್ತವೆ. ಪರಿವಾರದಲ್ಲಿ ಚೇತರಿಕೆ ಕಂಡು ಬಂದರೂ ನೆಮ್ಮದಿ ಇರುವುದಿಲ್ಲ.ಅನಾವಶ್ಯಕ ವಿವಾದಗಳಿಗೆ ಆಸ್ಪದ ನೀಡದಿರಿ.ಹಾಗೇ ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇರಲಿ.ವಿದ್ಯಾರ್ಥಿ ವರ್ಗಕ್ಕೆ ಯಶಸ್ಸು ದೊರೆಯಲಿದೆ.
ಕನ್ಯಾರಾಶಿ (Kanya)
ಗುರುಬಲದ ಜೊತೆಗೆ ದೈವಾನುಗ್ರಹ ಇರುವುದರಿಂದ ಕಾರ್ಯಕ್ಷೇತ್ರದಲ್ಲಿ ದೃಢನಿರ್ಧಾರದಿಂದ ಮುಂದುವರಿಯಿರಿ.ಪ್ರಯತ್ನ ಬಲಕ್ಕೆ ತಕ್ಕುದಾದ ಪ್ರತಿಫಲ ದೊರಕಲಿದೆ.ಸಾಮಾಜಿಕವಾಗಿ ಮುಂದಾಳತ್ವ, ಸ್ಥಾನಮಾನ,ಗೌರವವನ್ನು ಸಂಪಾದಿಸಲಿದ್ದೀರಿ.ಕೆಲವೊಮ್ಮೆ ಕುಟುಂಬದಲ್ಲಿ ಅನಾರೋಗ್ಯದ ಸಂಭವ ಹೆಚ್ಚು ಇರುವುದರಿಂದ ಆದಷ್ಟು ಕಾಳಜಿಯ ಅಗತ್ಯವಿದೆ.ದೂರ ಪ್ರಯಾಣ ಸಾಧ್ಯತೆ ಇದ್ದು ಕಾರ್ಯದಲ್ಲಿ ಅನುಕೂಲ,ವೃತ್ತಿ ರಂಗದಲ್ಲಿ ಆತುರ ಒಳ್ಳೆಯದಲ್ಲ.
ತುಲಾ (Tula)
ವೃತ್ತಿಯಲ್ಲಿ ಕೆಲವೊಂದು ಕೊರತೆಗಳನ್ನು ಸರಿಪಡಿಸಿಕೊಂಡು ಮುಂದುವರಿಯಬೇಕು.ಇದು ನಿಮಗೆ ಸಾಧ್ಯವಾಗಲಿದೆ. ನಿಮ್ಮ ವ್ಯವಹಾರ ಕುಶಲತೆಗೆ ತುಂಬಾ ಬೆಲೆ ಇದೆ.ಹಾಗೇ ಸಾಮಾಜಿಕವಾಗಿ ಗೌರವ ಸಂಪಾದಿಸಲಿದ್ದೀರಿ. ಪರಿವಾರದಲ್ಲಿ ಹಿಂದಿನದನ್ನು ಮರೆತು ರಾಜಿ ಮಾಡಿಕೊಳ್ಳಬೇಕಾದೀತು.ವ್ಯಾಪಾರದಲ್ಲಿ ಧಾರಾಳ ಅವಕಾಶದಿಂದ ಆರ್ಥಿಕವಾಗಿ ಉನ್ನತಿ ಕಂಡುಬರುತ್ತದೆ.ದೂರ ಪ್ರಯಾಣದ ಅವಕಾಶಗಳು ಎದುರಾದಾಗ ಅವುಗಳ ಸದುಪಯೋಗ ಮಾಡಿಕೊಳ್ಳುವುದು ಉತ್ತಮ.
ವೃಶ್ಚಿಕ (Vrushchika)
ನೀವು ಕೈಗೊಳ್ಳುವ ನಿರ್ಧಾರದ ಪ್ರಭಾವದಿಂದ ಇಡೀ ವಾರದ ಮೇಲೆ ಪರಿಣಾಮ ಬೀರುವುದು.ಸಾಮಾಜಿಕವಾಗಿ ಸ್ಥಾನ ಮಾನ ಗೌರವ ಹೆಚ್ಚುವುದು.ಆರ್ಥಿಕ ವಿಚಾರದಲ್ಲಿ ಆಗಾಗ ಧನವ್ಯಯ ತೋರಿಬಂದರೂ ವಿವಿಧ ಮೂಲಗಳಿಂದ ಧನಾಗಮನವಿರುತ್ತದೆ .ಬದಲಾವಣೆಯನ್ನು ನೀವು ಅಪೇಕ್ಷಿಸುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ.ದೈವಾನುಗ್ರಹದಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿವೆ.ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿಕೊಳ್ಳಲು ಯಶಸ್ಸು ನಿಮ್ಮದಾಗಲಿದೆ.
ಧನು ರಾಶಿ (Dhanu)
ನಿಮ್ಮ ಜೀವನದಲ್ಲಿ ಇದು ಉದ್ಯೋಗದ ಕಾಲ,ಸಮಾಧಾನ ಚಿತ್ತದಿಂದ ಮುಂದುವರಿಯಬೇಕಾದೀತು.ಹಾಗೇ ವೃತ್ತಿರಂಗದಲ್ಲಿ ತುಂಬಾ ವೆಚ್ಚ ಹಾಗೂ ಅನಗತ್ಯ ಕೆಲಸಗಳು ನಡೆದು ನಿಮ್ಮ ಸಮಯ ಮಿತಿಮೀರಿ ವ್ಯಯವಾಗುವುದು.ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗದ ಯೋಗವಿದೆ.ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆಯ ಅಗತ್ಯವಿದೆ. ಸಾಮಾಜಿಕ ರಂಗದಲ್ಲಿ ಹೊಸಬರೊಂದಿಗೆ ಸಂಪರ್ಕಕ್ಕೆ ಬಂದು ಸಹಾಯ ದೊರೆಯುವುದು.ಖರೀದಿ ಮಾರಾಟದಲ್ಲಿ ಹೆಚ್ಚಿನ ಕಾಳಜಿ ಉತ್ತಮ.
ಮಕರ (Makara)
ಜೀವನದಲ್ಲಿ ಹಲವಾರು ವಾಸ್ತವಿಕ ಅವಕಾಶಗಳು ಪ್ರಾಪ್ತಿಯಾಗಲಿದೆ. ಹಣಕಾಸಿನ ವಿಚಾರದಲ್ಲಿ ಹಂತಹಂತವಾಗಿ ಅಂದರೆ ಸ್ಥಿರ ರೂಪದಲ್ಲಿ ಪ್ರಗತಿಗೊಂಡು ಉನ್ನತ ಸ್ಥಿತಿಗೆ ಏರುವುದು.ಇತರರು ನಿಮ್ಮ ವಿಶ್ವಾಸವನ್ನು ದುರುಪಯೋಗ ಪಡಿಸಿಕೊಳ್ಳದಂತೆ ಗಮನ ಹರಿಸಿರಿ.ಹಾಗೇ ಸ್ವಯಂಕೃತ ಅಪರಾಧಗಳ ಬಗ್ಗೆ ಕಾಳಜಿ ಇರಲಿ.ಅದು ಅನಿವಾರ್ಯ ಕೂಡ ಮನೆಯಲ್ಲಿ ಸುಖ,ಸಂತೋಷಗಳಿಂದ ನೆಮ್ಮದಿ ಮಕ್ಕಳಿಂದ ಸಂತಸ. ಕ್ರಯ ವಿಕ್ರಯಗಳಲ್ಲಿ ಉತ್ತಮ ಆದಾಯ. ಅನಿರೀಕ್ಷಿತ ಉದ್ಯೋಗ ಲಾಭವಿದೆ.
ಕುಂಭರಾಶಿ (Kumbha)
ದೈವಾನುಗ್ರಹದಿಂದ ಕಾರ್ಯ ಕ್ಷೇತ್ರದಲ್ಲಿ ಹಲವಾರು ತರಹದ ಕೆಲಸ ಕಾರ್ಯಗಳು ನಿಮ್ಮ ಪಾಲಿಗೆ ಬಂದು ನೀವು ಅವುಗಳಿಂದ ಉಲ್ಲಾಸಿತರಾಗುತ್ತೀರಿ.ಹಾಗೆ ಆರ್ಥಿಕವಾಗಿ ಅದೃಷ್ಟವು ನಿಮ್ಮ ಪಾಲಿಗಿದ್ದು ಸದ್ಯದಲ್ಲೇ ಇದರ ಸದುಪಯೋಗವು ನಿಮ್ಮನ್ನು ಸಂತೃಪ್ತಿಗೊಳಿಸಲಿದೆ.ವ್ಯಾಪಾರ, ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಯಶಸ್ಸು,ಹೊಸ ಉದ್ಯಮಿಗಳಿಗೆ ಅವಕಾಶಗಳು ತೋರಿಬರುತ್ತವೆ. ತಿಂಗಳ ಮಧ್ಯ ಭಾಗದಲ್ಲಿ ಕೌಟುಂಬಿಕ ವಾಗಿ ಹಠಾತ್ ಏರಿಳಿತಗಳಿಂದ ಅಸಮಾಧಾನವಾಗಲಿದೆ.ಮನೆಯಲ್ಲಿ ಮಂಗಳ ಕಾರ್ಯಗಳಿಂದ ಚಟುವಟಿಕೆ ಕಂಡುಬರುತ್ತದೆ.
ಮೀನರಾಶಿ (Meena)
ಕಾರ್ಯ ಕ್ಷೇತ್ರದಲ್ಲಿ ಸಾಧಾರಣ ರೀತಿಯ ಬೆಳವಣಿಗೆಗಳು ಕಂಡು ಬಂದರೂ ಕೊಂಚ ಗೊಂದಲಕ್ಕೆ ಕಾರಣವಾಗುವ ಸಮಸ್ಯೆಗಳಿಂದ ಯಾರನ್ನೂ ನಂಬದಂತಹ ಪರಿಸ್ಥಿತಿ ತೋರಿಬರುವುದು.ನಿಮಗೆ ದ್ರೋಹ ಬಗೆಯುವ ಇಲ್ಲವೇ ನಿಮ್ಮಿಂದ ತುಂಬಾ ಖರ್ಚು ಮಾಡಿಸುವ ಚಂಚಲ ವ್ಯಕ್ತಿಗಳ ಸಂಪರ್ಕಗಳ ಬಗ್ಗೆ ಜಾಗ್ರತೆ ಇರಲಿ .ಅಂತೂ ನಿಮಗೆ ಹೆಚ್ಚಿನ ಬಿಡುವು ದೊರೆಯುವುದಿಲ್ಲ.ಪರಿವಾರದಲ್ಲಿ ಸಮಾಧಾನಕರ ವಾತಾವರಣ,ಪರಿಸ್ಥಿತಿಯಲ್ಲಿ ತುಸು ಚೇತರಿಕೆ,ಇದ್ದರೂ ಸಣ್ಣ ಪುಟ್ಟ ತಪ್ಪು ತಿಳುವಳಿಕೆಗಳು ತಲೆ ದೋರಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
