fbpx
ಭವಿಷ್ಯ

ಎಲ್ಲರಿಗೂ ಅವರ ರಾಶಿ ಪ್ರಕಾರ ಒಂದೊಂದು ದೌರ್ಬಲ್ಯ (ವೀಕ್ನೆಸ್ಸ್ ) ಇರುತ್ತೆ ಅದನ್ನ ಅರ್ಥ ಮಾಡ್ಕೊಂಡು ಹೇಗೆ ಸರಿ ಮಾಡ್ಕೋಬೇಕು ಅಂತ ತಿಳ್ಕೊಳ್ಳಿ..

ಯಾವ ರಾಶಿಯವರಿಗೆ ಯಾವ ರೀತಿಯ ದೌರ್ಬಲ್ಯವಿರುತ್ತದೆ.

ಎಷ್ಟೇ ಮಹಾನ್ ವ್ಯಕ್ತಿಯಾದರೂ ಸಹಿತ ಆತನಲ್ಲಿ ಏನಾದರೊಂದು ದೌರ್ಬಲ್ಯ ಇದ್ದೇ ಇರುತ್ತದೆ.ಆದರೆ ಅದನ್ನು ಅವರು ತೋರಿಸಿ ಕೊಳ್ಳುವುದಿಲ್ಲ.ಕೆಲವು ಮಂದಿ ತಮ್ಮ ದೌರ್ಬಲ್ಯಗಳಿಂದಾಗಿಯೇ ಸಮಾಜದ ಮುಂದೆ ಪ್ರತಿಷ್ಠೆ ಕಳೆದುಕೊಳ್ಳುವರು.ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.ಆದರೆ ಪ್ರತಿಯೊಬ್ಬರಲ್ಲಿ ಇರುವಂತಹ ದೌರ್ಬಲ್ಯಕ್ಕೂ ಜನ್ಮರಾಶಿಗೂ ಸಂಬಂಧವಿದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

ಹೌದು ಜನ್ಮ ರಾಶಿಯಿಂದಲೇ ನಿಮ್ಮಲ್ಲಿ ಆ ರೀತಿಯ ದೌರ್ಬಲ್ಯಗಳು ಬಂದಿರುವುದು.ಯಾವ ರಾಶಿಯವರಲ್ಲಿ ಯಾವ ರೀತಿಯ ದೌರ್ಬಲ್ಯಗಳು ಇರುವುದು ಎಂದು ನೀವು ತಿಳಿಯಿರಿ ಇದನ್ನು ತಿಳಿದರೆ ಬೇರೆಯವರನ್ನು ಬೇಗನೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು.

ಮೇಷ (Mesha)

 

ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ತುಂಬಾ ಧೈರ್ಯಶಾಲಿಗಳು ಆಗಿರುವವರು.ಅವರು ತಮ್ಮ ಕೆಲಸಗಳನ್ನು ತುಂಬಾ ಕ್ಷಿಪ್ರಗತಿಯಲ್ಲಿ ಮಾಡಲು ಬಯಸುವವವರು.ಇದು ಅವರಿಗೆ ಜನ್ಮ ದಿಂದಲೇ ಬಂದಿರುವುದು ಸೂಕ್ಷ್ಮತೆಯ ಅರ್ಥ ಮಾಡಿಕೊಳ್ಳುವುದು ಮತ್ತು ತಮ್ಮ ಸುತ್ತಲಿನ ವಿಚಾರಗಳ ಬಗ್ಗೆ ಪ್ರಾಯೋಗಿಕತೆ  ಕಾಪಾಡಿಕೊಂಡು ಹೋಗಬೇಕಾಗಿರುವುದು ಇವರು ಸರಿಪಡಿಸಬೇಕಾದ ದುರ್ಬಲತೆ.

 

ವೃಷಭ (Vrushabh)

ಈ ಜನ್ಮ ರಾಶಿಯಲ್ಲಿ ಹುಟ್ಟಿದವರು ತುಂಬಾ ಸ್ಥಿರ ಹಾಗೂ ಸಂವೇದನಾಶೀಲರೆಂದು ಅರ್ಥ ಮಾಡಿಕೊಂಡಿರುವರು .ಇವರು ಬಂಡೆಕಲ್ಲಿನಷ್ಟು ಗಟ್ಟಿಗರುಆದರೆ ಗಟ್ಟಿತನವಿದ್ದರೂ ಅವರು ಸಂವೇದನಾಶೀಲತೆಯು ಮುರಿದು ಹೋಗಬಹುದು.ಈ ರಾಶಿಯಲ್ಲಿನ ಜನರು ಪರಿಸ್ಥಿತಿಗೆ ತಕ್ಕಂತೆ ತಮ್ಮನ್ನು ತಾವು  ಬದಲಾಯಿಸಿಕೊಳ್ಳಬೇಕು. ತಮ್ಮ ಹೃದಯದ ಮಾತು ಕೇಳಿದರೆ ಅವರ ಶಕ್ತಿಯು ತುಂಬಾ ಪರಿಣಾಮಕಾರಿಯಾಗಲಿದೆ.

ಮಿಥುನ (Mithuna)

ಮಿಥುನ ರಾಶಿಯಲ್ಲಿ ಹುಟ್ಟಿದವರು ತುಂಬಾ ಆಲೋಚನೆ ಮಾಡುವವರು ಮಾತುಗಾರರು ಮತ್ತು ಮುನ್ನಡೆಯಿಡುವವರು , ಇವರು ಬದಲಾವಣೆಗೆ ಪ್ರಯತ್ನಿಸಿ, ಅದನ್ನು ಸಾಧಿಸಲು ಪ್ರಯತ್ನಿಸುವರು, ಅವರಿಗೂ ವಿರಾಮಬೇಕೆಂದು ಅರ್ಥ ಮಾಡಿಕೊಳ್ಳಬೇಕು ಇಲ್ಲವಾದರೆ ಮುಂದೆ ಸಾಗಲು ಸಾಧ್ಯವಿಲ್ಲ

 

ಕರ್ಕ (Karka)

ಇವರು ತುಂಬಾ ಸೂಕ್ಷ್ಮ ಕ್ರಿಯಾತ್ಮಕ ಹಾಗೂ ಚಟುವಟಿಕೆಯಿಂದ ಇರುವರು.ಈ ರಾಶಿಯವರು ತಮ್ಮ ಭಾವನೆಗಳ ಗಂಟುಕಟ್ಟಿ ಹೃದಯದ ಬದಲು ಬುದ್ಧಿಯ ಮಾತು ಕೇಳುವರು.ನಿರ್ದಯತೆ ಇವರಿಗೆ ಗೊಂದಲ ಉಂಟು ಮಾಡಬಹುದು.ಇವರು ಹೆಚ್ಚು ಚೇತರಿಸಿಕೊಳ್ಳಲು ಮತ್ತು ಸಾಮರ್ಥ್ಯ ಸುರಕ್ಷಿತವಾಗಿಡಲು ಕಲಿತುಕೊಂಡರೆ ಬಯಸಿದ್ದಕ್ಕಿಂತ ಹೆಚ್ಚಿನ ಶಕ್ತಿಯು ಅವರದ್ದಾಗಲಿದೆ.

ಸಿಂಹ (Simha)

ಈ ರಾಶಿಯ ವ್ಯಕ್ತಿಗಳು ತುಂಬಾ ತಿರುಗಾಡುವ ಹಾಗೂ ಆಶಾವಾದಿಯಾಗಿರುವರು.ಅವರು ಅಂತರ್ಮುಖಿಯಲ್ಲಿ ಯಾವುದೇ ಕಾರ್ಯ ಮಾಡುವ ಮೊದಲು ಅವರು ಯೋಚಿಸಬೇಕು.ತಮಗಾಗಿ ಒಳ್ಳೆಯ ಸಮಯ ತೆಗೆದುಕೊಂಡು ಅದನ್ನು ಆನಂದಿಸಬೇಕು. ಸುತ್ತಲಿರುವವರು ಅವರನ್ನು ಅದ್ಭುತವೆಂದು ತಿಳಿದಿದ್ದಾರೆ ಆದರೆ ಇದನ್ನು ಮನವರಿಕೆ ಮಾಡಿಕೊಳ್ಳಬೇಕು.

 

ಕನ್ಯಾರಾಶಿ (Kanya)

ಕನ್ಯಾ ರಾಶಿಯವರು ತುಂಬಾ ಪ್ರಾಯೋಗಿಕ ಮತ್ತು ಸಹಾಯ ಹಸ್ತ ಚಾಚುವವರು.ಇವರು ತಮ್ಮ ಕರ್ತವ್ಯ ನಿರ್ವಹಿಸಿತ್ತಾ ಕೂರುವ ಬದಲು ತಮ್ಮೊಳಗೆ ಅಡಗಿರುವ ಸಾಮರ್ಥ್ಯ ಹೊರತೆಗೆದು ಅಪಾಯ ಎದುರಿಸಿ,ಅವಕಾಶ ಪಡೆದು ಕನಸನ್ನು ನನಸು ಮಾಡಬೇಕು.ಹೆಚ್ಚು  ಪೂರ್ವ ಭಾವಿಯಾಗಿರುವುದು ಇವರ ದೌರ್ಬಲ್ಯವಾಗಿದೆ.

 

ತುಲಾ (Tula)

ಇವರು ನೈಸರ್ಗಿಕವಾಗಿ ಯಾವುದೇ ಸಮಸ್ಯೆ ಬಗೆಹರಿಸುವುದು ಮಾತ್ರವಲ್ಲ,ಬೇರೆಯವರ ಜೊತೆ ಬೆರೆಯುವರು  ಮತ್ತು ಆಕರ್ಷಕ ಮಾತುಗಾರರು ಆದರೆ ಇವರು ತಮ್ಮತ್ತ ಸ್ವಲ್ಪ ಗಮನಹರಿಸಬೇಕಾಗಿದೆ.ಅನುಮೋದನೆ ಪಡೆಯುವುದು ಮತ್ತು ಗೌರವಾನ್ವಿತವಾಗಿರುವದನ್ನು ಮರೆತು ಬಿಡಬೇಕು .ಇದರ ಬದಲು ಕೆಳಗಿಳಿಯಬೇಕು ತೊಂದರೆ ಕೊಡುವವರಿಗೆ ಸ್ವಲ್ಪ ತೊಂದರೆ ಕೊಡಬೇಕು

 

ವೃಶ್ಚಿಕ (Vrushchika)

ಇವರು ಉತ್ಸಾಹ ಮತ್ತು ತೀವ್ರತೆಯಿಂದ ಬದುಕುವರು ಇದರಂತೆ ಅವರಿಗೆ ಭಾವನೆಗಳ ಆಳವು ಬೇಕಾಗುತ್ತದೆ . ಅವರು ತಮ್ಮ ಪ್ರಯತ್ನದ ಬಗ್ಗೆ ಯೋಚಿಸುತ್ತಾರೆ .ಯಾವುದೇ ನೋವು ಇಲ್ಲದೆ ವಿಷಯಗಳನ್ನು ಮುಂದೆ ಹೋಗಲು ಬಿಡುವುದನ್ನು ಕಲಿತುಕೊಳ್ಳಬೇಕು.ಅವರು ಯಾವತ್ತೂ ಬಾಹ್ಯವಲ್ಲ ಭೂಮಿ ಮೇಲೆ ವಾಸಿಸುವುದು ಅವರ ಅಸ್ತಿತ್ವ ಕಾಣೆಯಾದ ಭಾವನೆ ಹೊಂದಿರುವರು.

 

ಧನು ರಾಶಿ (Dhanu)

ಭರವಸೆಯ ,ಪ್ರಕ್ಷುಬ್ಧ ಮತ್ತು ಯಾವಾಗಲೂ ತಮ್ಮ ಸಾಮರ್ಥ್ಯ ವಿಸ್ತರಿಸಲು ಪ್ರಯತ್ನಿಸುವರು.ಪ್ರಾಯೋಗಿಕವಾಗಿರುವುದು ತಮ್ಮ ಕನಸಿನಿಂದ ದೂರ ಹೋಗುತ್ತಿರುವುದಾಗಿ ಅವರು ಭಾವಿಸುವರು.ಇವರು ಮಾಡಬೇಕಾದ ಕೆಲಸವೆಂದರೆ ಹೆಚ್ಚು ಚಿಂತಿಸುವ ಬದಲು ಕಡಿಮೆ ಯೋಚಿಸಬೇಕು.

 

ಮಕರ (Makara)

ಇವರು ತುಂಬಾ ಸರಳ,ಸೂಕ್ಷ್ಮ ಹಾಗೂ ಮಹಾತ್ವಾಕಾಂಕ್ಷಿಯಾಗಿರುವರು. ತಮ್ಮ ದೃಷ್ಟಿಕೋನದ ಸೂಕ್ಷ್ಮತೆ ಬದಲಿಸಬೇಕು.ಕನಸನ್ನು ಪೋಷಿಸಬೇಕು ಮತ್ತು  ಧ್ಯೇಯ ಬೆಳಗಿಸಬೇಕು. ಇವರು ಆಶಾವಾದಿಗಳು ಕಠಿಣ ಪ್ರಯತ್ನ ಮಾಡಬೇಕು.ಇದನ್ನು ಹೊರತುಪಡಿಸಿ ತಮ್ಮ ಜೀವನದಲ್ಲಿ ಇವರು ಹೆಚ್ಚಿನ ಉಲ್ಲಾಸ ತುಂಬಬೇಕು ಮತ್ತು ಹಿಂತಿರುಗಿ ನೋಡಬಾರದು.

 

ಕುಂಭರಾಶಿ (Kumbha)

ಈ ಜನ್ಮ ರಾಶಿಯವರು ತುಂಬಾ ತಾಳ್ಮೆ ,ದೃಢ ಮತ್ತು ಸ್ವತಂತ್ರರಾಗಿರುವರು.ಇವರು ತಮ್ಮ ಆಲೋಚನೆಗಳನ್ನು ವಾಸ್ತವವಾಗಿ ಪರಿವರ್ತಿಸಲು ಬಯಸುವರು  ಅದಕ್ಕೆ ಮೊದಲು ಸ್ಥಾನ ನೀಡಲು ಬಯಸುವವರು.ಇವರು ತಮ್ಮ ಭಾವನೆಗಳನ್ನು ಹೆದರಿಸಬಲ್ಲ  ಮತ್ತು ತುಂಬಾ ಪರಿಣಾಮಕಾರಿಯಾಗಿ ಬದುಕಬಹುದು.

 

ಮೀನರಾಶಿ (Meena)

ಇವರು ಬ್ರಹ್ಮಾಂಡ ಮತ್ತು ಸಾಗರದ ಜೀವಿಗಳಂತೆ. ಜೀವನದಲ್ಲಿ ಬರುವ ಸಂಕಷ್ಟಗಳನ್ನು ಎದುರಿಸಿ ಅದರ ವಿರುದ್ಧ ಈಜಲು ಇವರಿಗೆ ತಿಳಿದಿದೆ ಆದರೆ ಬರಡು ಭೂಮಿಯಲ್ಲೂ ವಾಸಿಸಲು ಕಲಿಯಬೇಕು.ಇವರು ವಾಸ್ತವಿಕತೆ ಏನು ಎಂಬುದು ತಿಳಿದುಕೊಳ್ಳಲು ಪ್ರಯತ್ನಿಸುವುದು ಅತೀ ಅಗತ್ಯ.ಇವರು ತಮ್ಮ  ಧ್ಯೇಯ ಮತ್ತು ಕನಸನ್ನು ಸರಳವಾಗಿಡಬೇಕು.ಇವರು ಪರಿಪೂರ್ಣರಲ್ಲದಿದ್ದರೂ ಅದು ಆಗಲು ಸಾದ್ಯವಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top