fbpx
ದೇವರು

ಲಕ್ಷ್ಮೀ ದೇವಿ ಎಂತವ್ರ ಮನೇಲಿ ಇರೋಕೆ ಇಷ್ಟ ಪಡ್ತಾಳೆ ಹಾಗೆ ಲಕ್ಷ್ಮಿ ಇಂದ್ರನಿಗೆ ಹೇಳಿದ ಈ ವಿಷಯಗಳು ತಿಳ್ಕೊಂಡ್ರೆ ಹಣ-ಸಂಪತ್ತು ಅವಳ ಭಕ್ತರದ್ದಾಗುತ್ತೆ..

ಲಕ್ಷ್ಮೀ ದೇವಿಯು ಯಾರ ಮನೆಯಲ್ಲಿ ವಾಸಿಸುತ್ತಾಳೆಂದರೆ, ಯಾರು ಅವರ ಸಂಪತ್ತನ್ನು  ದಾನ ಮಾಡುವರೋ ಅಲ್ಲಿ ಮತ್ತು ಇದರ ಜೊತೆಗೆ   ಲಕ್ಷ್ಮೀ ದೇವಿಯು  ಇನ್ನೂ ಐದು ರಹಸ್ಯಗಳನ್ನು ಇಂದ್ರನಿಗೆ ಹೇಳಿದ್ದಾಳೆ…

ಪೌರಾಣಿಕ ಕಥೆಯಾದ ಮಹಾಭಾರತದ ಶಾಂತಿ ಪರ್ವದ ಬಗ್ಗೆ ನಾವು  ಅತಿ  ಕಡಿಮೆಯನ್ನು  ತಿಳಿದುಕೊಂಡಿದ್ದೇವೆ. ಈ ಶಾಂತಿ ಪರ್ವದಲ್ಲಿ ಲಕ್ಷ್ಮೀ ಮತ್ತು ಇಂದ್ರನ ನಡುವೆ ನಡೆದ ಸಂಭಾಷಣೆಯನ್ನು ವಿವರಿಸುತ್ತದೆ.ದೇವಿ ಲಕ್ಷ್ಮೀಯ ಇಂದ್ರನಿಗೆ ದೇವರ  ಶಕ್ತಿಯು ಹೆಚ್ಚಾಗುವುದಕ್ಕೆ ಮತ್ತು ಕಡಿಮೆ ಆಗುವುದು ಹೇಗೆಂದು ವಿವರಿಸುತ್ತಾರೆ.

 

 

ಮಹಾಭಾರತದ ಈ  ಭಾಗವು  ತುಂಬಾ ಒಳ್ಳೆಯ ಪಾಠವನ್ನು ಮತ್ತು ಮುಖ್ಯವಾಗಿ ಲಕ್ಷ್ಮೀಯು ಎಲ್ಲಿ ನೆಲೆಸುವುದಕ್ಕೆ ಇಷ್ಟ ಪಡುತ್ತಾಳೆಂದು ತಿಳಿಸುತ್ತದೆ.ಲಕ್ಷ್ಮೀ  ದೇವಿಯು ಎಂತಹ ವ್ಯಕ್ತಿಗಳನ್ನು ಇಷ್ಟ ಪಡುತ್ತಾಳೆಂದರೆ ಯಾರು ತಾವು ಗಳಿಸಿದ ಹಣ,ಆಸ್ತಿ,ಸಂಪತ್ತನ್ನು  ಬಡವರಿಗೆ ನಿರ್ಗತಿಕರಿಗೆ ದಾನ ಮಾಡುತ್ತಾರೋ ಅವರ ಮೇಲೆ ಲಕ್ಷ್ಮೀ ದೇವಿಯ  ಆಶೀರ್ವಾದವು  ಸದಾ ಇರುವುದೆಂದು ಸಹ ಹೇಳಲಾಗಿದೆ.ಅಂತವರ ಮನೆಯಲ್ಲಿ ಲಕ್ಷ್ಮೀಯು ಅಲ್ಲಿಯೇ ಉಳಿದು ನಿಮಗೆ ಇನ್ನೂ ಹೆಚ್ಚಿನ ಸಿರಿ ,ಸಂಪತ್ತನ್ನು ಕರುಣಿಸುವಳು.

ಒಂದು ವೇಳೆ ನೀವು ಹಣ,ಆಸ್ತಿ,ಸಿರಿ,ಸಂಪತ್ತನ್ನು ನಿಮ್ಮ ಸ್ವಾರ್ಥ ಸಾಧನೆಗಾಗಿ ,ಆಸೆಯನ್ನು ಪೂರೈಸಿಕೊಳ್ಳುವುದಕ್ಕಾಗಿ   ಗಳಿಸಿದ್ದರೆ .ಆಗ ಲಕ್ಷ್ಮೀ ದೇವಿಯು ನಿಮ್ಮನ್ನು ಬಿಟ್ಟು ಬೇಗನೆ ಹೊರಟು ಹೋಗುತ್ತಾಳೆ.

 

 

ಲಕ್ಷ್ಮೀ ದೇವಿಯು ಇಂದ್ರನ ಬಳಿ ಬಂದು ಹೀಗೆ ಮಾತನಾಡುತ್ತಾಳೆ ಮತ್ತು ನಾರದರು ಸಹ ಲಕ್ಷ್ಮೀ ದೇವಿಯನ್ನು ಹಾಡನ್ನು ಹೇಳುತ್ತಾ ಹೊಗಳುತ್ತಾರೆ ಆದ್ದರಿಂದ ಲಕ್ಷ್ಮೀ ದೇವಿಯ ಪೂರ್ಣ ರೂಪದ ಮಹಿಮೆಯನ್ನು ಆ ಹಾಡಿನಲ್ಲಿ ನಾರದರು ಕೊಂಡಾಡಿದ್ದಾರೆ.ಕಮಲದ ಹೂವಿನ ಮೇಲೆ ಲಕ್ಷ್ಮೀ ದೇವಿಯು ವಿರಾಜಮಾನಳಾಗಿದ್ದ ಕಾರಣ ಅವಳನ್ನು ಪದ್ಮಿನಿ ಎಂದು ಸಹ ಕರೆಯುತ್ತಾರೆ.

ಲಕ್ಷ್ಮೀ ದೇವಿ ತನ್ನ  ಐದು ರಹಸ್ಯಗಳನ್ನು  ಇಂದ್ರನಿಗೆ  ಹೇಳಿದ್ದಾರೆ.

1.ಲಕ್ಷ್ಮೀ  ದೇವಿಯು ಯಾರ ಮನೆಯಲ್ಲಿ ನೆಲೆಸುತ್ತಾಳೆ.

 

 

ಯಾರ ಮನೆಯಲ್ಲಿ ಜನರು ಧರ್ಮದ ಆಚರಣೆಗಳನ್ನು ಪಾಲಿಸುತ್ತಾ ಧರ್ಮದ ಮಾರ್ಗದಲ್ಲಿ ನಡೆಯುತ್ತಾರೋ ,ಯುದ್ಧ ಮಾಡುವ ವೀರ ಯೋಧರು ಯುದ್ಧ ಭೂಮಿಯಲ್ಲಿ ನಿಂತು ಶತ್ರುಗಳಿಗೆ ಹೆದರದೆ ಧೈರ್ಯದಿಂದ ಶತ್ರುಗಳ ಜೊತೆ  ರಣರಂಗದಲ್ಲಿ ಹೋರಾಡಿ ಶತ್ರುಗಳನ್ನು ನಾಶ ಮಾಡಿ  ಜಯ ಸಾಧಿಸುತ್ತಾರೋ, ಯಾರ ಮನಸ್ಸಿನಲ್ಲಿ ದ್ವೇಷ,ಹಗೆತನ, ಇಲ್ಲದೆ,  ಹೃದಯದಲ್ಲಿ  ನಿಷ್ಕಲ್ಮಶ  ಭಾವನೆಯ  ಮನಸ್ಸುಳ್ಳವರ ಮನೆಯಲ್ಲಿ ಲಕ್ಷ್ಮೀ ದೇವಿಯು ನೆಲೆಸುವಳು.

2.ಲಕ್ಷ್ಮೀ ದೇವಿಯು ವಿಷ್ಣುವನ್ನು ಮದುವೆಯಾಗಲು ಇಚ್ಛಿಸಿದ್ದಳು.

 

 

ಲಕ್ಷ್ಮೀ ದೇವಿಯು  ಇಂದ್ರನಿಗೆ ಹೇಳಿದಳು ತಾನು ಯಾವ ಮನೆಯಲ್ಲಿ ವಾಸಿಸಲು ಇಷ್ಟ ಪಡುತ್ತೇನೆಂದರೆ ಯಾವ ಜನರು ಉದಾರವಾದ,ದೊಡ್ಡ ಮನಸ್ಸನ್ನು ಹೊಂದಿರುವರೋ,ಬುದ್ಧಿವಂತರು,ಭಕ್ತಿ ಮತ್ತು ಶ್ರದ್ಧೆಯಿಂದ ಕೂಡಿದ ಮತ್ತು ನ್ಯಾಯಯುತವಾಗಿ  ವ್ಯವಹಾರಿಸುತ್ತಾರೋ ಅಂತವರ ಮನೆಯಲ್ಲಿ ವಾಸಿಸಲು ಇಷ್ಟ ಪಡುತ್ತೇನೆಂದು ಹೇಳಿದಳು. ಹಾಗೆಯೇ ಲಕ್ಷ್ಮೀ ದೇವಿಯು ಅಸುರರು ಅಧರ್ಮದ ಮಾರ್ಗದಲ್ಲಿ ನಡೆಯಲು ಪ್ರಾರಂಭಿಸಿದ್ದರಿಂದ  ಅವರನ್ನು ಬಿಟ್ಟು ದೇವತೆಗಳ ಜೊತೆ ವಾಸಿಸಲು ನಿರ್ಧರಿಸಿ ಶ್ರೀ ವಿಷ್ಣುವನ್ನು ಮದುವೆಯಾಗಲು ಇಚ್ಛಿಸಿದಳು.

3.ಅಸುರರು ಮತ್ತು ದೇವತೆಗಳು.

 

 

ದೇವರಾಜ ಇಂದ್ರನು ಲಕ್ಷ್ಮೀ ದೇವಿಯನ್ನು ಕೇಳುತ್ತಾನೆ ಅಸುರರು  ಮನೆಯನ್ನು ಬಿಟ್ಟು ದೇವತೆಗಳ ಜೊತೆ ಏಕೆ ವಾಸಿಸುತ್ತಿಯ ಎಂದು ಕೇಳಿದಾಗ  ಲಕ್ಷ್ಮೀ ದೇವಿ ಹೀಗೆ ಹೇಳುತ್ತಾರೆ “ಯಾರು ಕೊಟ್ಟ ಮಾತನ್ನು ಮುರಿಯುತ್ತಾರೋ ,ಯಾರು ಹಿರಿಯರಿಗೆ ಗೌರವ ಕೊಡುವುದಿಲ್ಲವೋ,ಅಂತವರ ಬಳಿ ನಾನು ನೆಲೆಸುವುದಿಲ್ಲ.ರಾಕ್ಷಸರ ಮನೆಯನ್ನು ಬಿಟ್ಟು ಬಂದಿದ್ದು ಏಕೆಂದರೆ ಅಸುರರು ಅಧರ್ಮದ ಹಾದಿಯಲ್ಲಿ ನಡೆಯಲು ಪ್ರಾರಂಭಿಸಿದ್ದಾರೆ ಅದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಆದ್ದರಿಂದ ಅಲ್ಲಿ ಉಳಿಯಲಿಲ್ಲ.ಇನ್ನೊಂದು ಕಡೆ ದೇವರು ಸದ್ಗುಣ ಶೀಲರು,ಗುಣವಂತರು ಆದ್ದರಿಂದ ದೇವರುಗಳ ಕಡೆಗೆ ಬಂದೆ”ಎಂದು ಲಕ್ಷ್ಮೀ  ದೇವಿ ಹೇಳಿದಳು.

4ಸಮುದ್ರ ಮಂಥನ ನಡೆಯುವ ಸಮಯದಲ್ಲಿ ಲಕ್ಷ್ಮೀಯು ಮೊದಲ ಬಾರಿಗೆ ಈ ಭೂಮಿ ಮೇಲೆ ಬಂದಳು.

 

 

ಲಕ್ಷ್ಮೀ ದೇವಿಯು ಸಮುದ್ರದಿಂದ ಜನಿಸಿದಳು ಆದ್ದರಿಂದ ಸಮುದ್ರ ರಾಜನೇ ಇವಳ ತಂದೆ. ಲಕ್ಷ್ಮೀ ದೇವಿಯು ಎಲ್ಲಿ ಪುರುಷರು ಮತ್ತು ಸ್ತ್ರೀಯರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾರೋ  ಮತ್ತು ಎಲ್ಲಿ  ಮೂರ್ಖರನ್ನು ಗೌರವಿಸುತ್ತಾರೋ ಅಂತಹ ಸ್ಥಳದಲ್ಲಿ ಅವಳು ವಾಸಿಸುವುದಿಲ್ಲ.

5.ಲಕ್ಷ್ಮೀ ದೇವಿಯ ವಿವಿಧ ಹೆಸರುಗಳು.

 

 

ಲಕ್ಷ್ಮೀ ದೇವಿಯು ಇಂದ್ರನ ಜೊತೆ ಅವಳ ಬಗ್ಗೆ ಇರುವ ರಹಸ್ಯವನ್ನು ಹೇಳಿಕೊಳ್ಳುವಾಗ ಲಕ್ಷ್ಮೀ ದೇವಿಯ ವಿವಿಧ ಹೆಸರುಗಳನ್ನು ಹೇಳಿದ್ದಾಳೆ ಅವುಗಳಾದ ಭೂತಿ, ಶ್ರೀ, ಶ್ರದ್ದಾ, ಮೇಧ, ಸನತಿ, ವಿಜಿತಿ, ಸ್ಥಿತಿ, ದೃತಿ, ಸಿದ್ಧಿ, ಸಮೃದ್ಧಿ, ಸ್ವಾಹ, ಸ್ವಧಾ, ನಿಯತಿ, ಸ್ಮೃತಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top