fbpx
ಆರೋಗ್ಯ

ಬೆನ್ನು ನೋವು, ಸೊಂಟ ನೋವು ಅಂತ ಜಾಸ್ತಿ ದುಡ್ಡು ಕೊಟ್ಟು ಡಾಕ್ಟರ್ ಹತ್ರ ಹೋಗೋ ಬದ್ಲು ಹೀಗೆ ಮಾಡ್ಕೊಳ್ಳಿ ನೋವು ಬೇಗ ದೂರ ಹೋಗುತ್ತೆ..

ಬೆನ್ನು ನೋವಿಗೆ ಸುಲಭವಾದ ಮನೆಮದ್ದು ಹಾಗು ಪರಿಹಾರಗಳು:

ಒಮ್ಮೆ ಬೆನ್ನುನೋವು ಕಾಣಿಸಿಕೊಂಡರೆ ಅದರಿಂದ ಆಗುವಂತಹ ನೋವು ಅಸಹನೀಯವಾಗಿರುತ್ತದೆ. ಯಾವುದೇ ಕೆಲಸ ಕಾರ್ಯವನ್ನು ಮಾಡಲು ಇದರಿಂದ ಸಾಧ್ಯವಾಗಲ್ಲ. ಆದರೆ, ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಬೆನ್ನು ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಅತೀ ಮೃದುವಾದ ಹಾಸಿಗೆ ಮತ್ತು ತಲೆದಿಂಬನ್ನು ಉಪಯೋಗಿಸಬಾರದು.ಸದಾ ಹಾಸಿಗೆಯ ಮೇಲೆ ಮಲಗುವುದು ಸರಿಯಾದ ಕ್ರಮವಲ್ಲ.

ಈಜುವುದು ಹಾಗೂ ನಿಮ್ಮ ಬೆನ್ನಿನ ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಿಷ್ಟಗೊಳಿಸುವ ನಿರ್ದಿಷ್ಟ ವ್ಯಾಯಾಮಗಳನ್ನು ಮಾಡುವುದರಿಂದ ಬೆನ್ನು ನೋವನ್ನು ನಿಭಾಯಿಸಬಹುದು.

ಹೆಚ್ಚು ಹೊತ್ತು ಕುಳಿತು ಪ್ರಯಾಣ ಮಾಡುವಾಗ ಮಧ್ಯೆ ಮಧ್ಯೆ ವಿಶ್ರಾಂತಿಸಬೇಕು.

ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಅರಿಶಿನ ಮತ್ತು ಕೆಲವು ಹನಿ ಜೇನುತುಪ್ಪವನ್ನು ಹಾಕಿಕೊಂಡು ಪ್ರತೀ ದಿನ ಕುಡಿಯಿರಿ. ಇದು ದೇಹದ ನೋವನ್ನು ನಿವಾರಣೆ ಮಾಡುವುದು ಮಾತ್ರವಲ್ಲದೆ ಕಫ ಹಾಗೂ ಕೆಮ್ಮಿಗೆ ಇದು ಒಳ್ಳೆಯದು.

ಉಳುಕು ಇರುವಾಗ ಬೆಚ್ಚಗಿನ ನೀರು ಯಾ ಐಸ್-ಪ್ಯಾಕ್ ಇಟ್ಟು ನೋವು ನಿವಾರಿಸಿಕೊಳ್ಳುವುದು ಉತ್ತಮ.

೧೫ರಿಂದ 20 ನಿಮಿಷಗಳ ಕಾಲ ಲಘು ವ್ಯಾಯಾಮ ಮಾಡಬೇಕು.

ಬಿಸಿ ನೀರಿನ ಬ್ಯಾಗನ್ನು 20 ನಿಮಿಷಗಳ ಕಾಲ ನೋವಿನ ಭಾಗದಲ್ಲಿ ಇಡುವುದು. ಮಸಾಜ್ ಮಾಡಿಸಿಕೊಳ್ಳುವುದು, ಅಕ್ಯು ಪಂಕ್ಚರ್, ಅಕ್ಯುಪ್ರೆಶರ್, ಫಿಸಿಯೋಥೆರಪಿ, ಆಯಸ್ಕಾಂತ ಚಿಕಿತ್ಸೆ, ಪ್ರೆಶರ್ ಪಾಯಿಂಟ್ ಮಸಾಜ್‌ಗಳು, ಪೌಷ್ಠಿಕ ಆಹಾರ.

ಕೂರುವಾಗ, ನಿಲ್ಲುವಾಗ, ಮಲಗುವಾಗ ದೇಹವನ್ನು ನೇರವಾಗಿ ಸರಿಯಾಗಿ ಇಟ್ಟುಕೊಳ್ಳಬೇಕು.

ಮೂಳೆ ಸವಕಲಾಗದಂತೆ ಕ್ಯಾಲ್ಷಿಯಂ, ವಿಟಮಿನ್ `ಡಿ’ ಮುಂತಾದುವುಗಳ ಪ್ರಮಾಣ ಗಮನದಲ್ಲಿರಲಿ.

ಆದಷ್ಟೂ ಅತಿ ಎತ್ತರದ ಚಪ್ಪಲಿಗಳನ್ನು ಧರಿಸದಿರಿ.

ವಿಟಮಿನ್ ಸಿ ಒಳಗೊಂಡಿರುವ ಹಣ್ಣು, ತರಕಾರಿ ಹೆಚ್ಚು ಸೇವಿಸಿ.

ಲಿಂಬೆರಸಕ್ಕೆ ಉಪ್ಪು ಸೇರಿಸಿ ಜ್ಯೂಸ್ ತಯಾರಿಸಿ ಕುಡಿಯಿರಿ.

ಬಿಸಿ ನೀರು ನೋವಿನಿಂದ ಶಮನ ನೀಡುವುದು ಸ್ನಾನಕ್ಕೆ ಹೋಗುವ ಒಂದು ಗಂಟೆ ಮೊದಲು ಸಾಸಿವೆ ಎಣ್ಣೆಯಿಂದ ಬೆನ್ನಿಗೆ ಮಸಾಜ್ ಮಾಡಿ. ಬಳಿಕ ಬಿಸಿ ನೀರಿನಿಂದ ಸ್ನಾನ ಮಾಡಿ.

ಪ್ರತಿನಿತ್ಯ ಶುಂಠಿ ಸೇವಿಸಿ.
ಚಹಾ ಸೇವಿಸುವಾಗ ಅದಕ್ಕೆ ಶುಂಠಿ ಹಾಕಿಕೊಂಡು ಸೇವಿಸಿ. ಇದರಿಂದ ಬೆನ್ನು ನೋವು ಕಡಿಮೆಯಾಗುವುದು. ಶುಂಠಿ-ಚಹಾ ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ.

ಒಂದು ಟ್ಯೂಬ್ ಕಾಲ್ಬೀಲದಲ್ಲಿ ಅಕ್ಕಿಯನ್ನು ತುಂಬಿಕೊಳ್ಳಿ. ಅದರ ಎರಡು ಬದಿಯನ್ನು ಗಟ್ಟಿಯಾಗಿ ಕಟ್ಟಿಕೊಳ್ಳಿ. ಇದನ್ನು ಮೈಕ್ರೋ ಓವೆನ್ನಲ್ಲಿಡಿ. ನೋವು ಇರುವ ಕಡೆ ಇದರಿಂದ ಮಸಾಜ್ ಮಾಡಿದರೆ ನೋವು ಶಮನವಾಗುವುದು.

ಬೆನ್ನು ನೋವು ನಿವಾರಣೆಗೆ ಸಹಾಯಕ ವ್ಯಾಯಾಮಗಳು
* ಅಂಗಾತ ಮಲಗಿ ಒಂದೊಂದಾಗಿ ಕಾಲನ್ನು ನೇರವಾಗಿ (ಮಂಡಿ ಮಡಚದೆ) ಒಂದು ಅಡಿಯಷ್ಟು ಎತ್ತಿ ಹತ್ತು ಸಲ ಎಣಿಸಿ ಕೆಳಗಿಡಿ.
* ಕಾಲೆರಡನ್ನೂ ಮಡಚಿ ಬೆನ್ನು ಮತ್ತು ನಿತಂಬವನ್ನು ಎತ್ತಿ ಹಿಡಿದು ಹತ್ತು ಎಣಿಸುವುದು.
* ಎರಡೂ ಕಾಲನ್ನು ಮಡಚಿ ಕೈಯ್ಯಲ್ಲಿ ಹಿಡಿದು ಮಂಡಿಗೆ ಮೂಗು ತಾಗಿಸಲು ಯತ್ನಿಸುವುದು.
* ಬೋರಲು ಮಲಗಿ ಮೊದಲನೆಯಂತೆ ಕಾಲನ್ನು ನೇರವಾಗಿ ಒಂದು ಅಡಿ ಮೇಲೆತ್ತಿ ಹಿಡಿದು ಬಿಡುವುದು.
* ನಿರಂತರ ವ್ಯಾಯಾಮ ಮಾಡಿದಲ್ಲಿ ಕೆಳಬೆನ್ನು ನೋವನ್ನು ಅತ್ಯಂತ ಸುಲಭ ರೀತಿಯಲ್ಲಿ ಹತೋಟಿಯಲ್ಲಿಡಬಹುದು.
ಬೆನ್ನು ನೋವಿಗೆ ಬೆಳ್ಳುಳ್ಳಿ ಉತ್ತಮ ಮನೆ ಔಷಧಿ. ಎರಡು ಅಥವಾ ಮೂರು ಕಾಳು ಲವಂಗವನ್ನು ಬೆಳಗ್ಗೆ ಸೇವಿಸಿದರೆ ಉತ್ತಮ. ಬೆಳ್ಳುಳ್ಳಿ ಎಣ್ಣೆಯನ್ನು ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು.

ಬೆನ್ನು ನೋವಿದ್ದಾಗ ಬಿಸಿಬಿಸಿಯಾಗಿ ತಿನ್ನಿ. ತಿನ್ನುವ ಪದಾರ್ಥದಲ್ಲಿ ಶುಂಠಿ ಇದ್ದರೆ ಒಳ್ಳೆಯದು.

ನೋವಿರುವ ಭಾಗಕ್ಕೆ ಬೆಚ್ಚಗಿನ ನೀರಿನ ಶಾಖ ನೀಡಿ,
ಟಿವಿ ನೋಡುತ್ತಾ ಇರುವಾಗ ಬಿಸಿಯಾಗಿರುವ ನೀರಿನ ಬ್ಯಾಗ್ ಅನ್ನು ಬೆನ್ನ ಹಿಂದೆ ಇಟ್ಟುಕೊಂಡರೆ ನೋವು ತಗ್ಗುವುದು.

ಪುದಿನಾ ಎಣ್ಣೆಗಳಂಥ ನೈಸರ್ಗಿಕ ಎಣ್ಣೆಗಳಿಂದ ಮಸಾಜ್ ಮಾಡಿ.

ಶಲಭಾಸನವು ಇಡೀ ಬೆನ್ನು ಮೂಳೆಗೆ ಶಕ್ತಿಯನ್ನು ಮತ್ತು ನಮ್ಯತೆಯನ್ನು ನೀಡುವ ಆಸನವಾಗಿದೆ. ಬೆನ್ನಿಗೆ ಸಂಬಂಧಪಟ್ಟ ನೋವುಗಳಿಂದ ಬಳಲುತ್ತಿರುವವರಿಗೆ ಈ ಆಸನವು ಬಹು ಉಪಯೋಗಕಾರಿ.


ಇದು ಬೆನ್ನಿಗೆ ಬಲವನ್ನು ನೀಡುತ್ತದೆ ಮತ್ತು ಕೆಳ ಬೆನ್ನಿಗೆ ಉತ್ತಮ ನಮ್ಯತೆಯನ್ನು ಒದಗಿಸುತ್ತದೆ.
ಇದು ಕೆಳ ಬೆನ್ನು ಭಾಗದ ಸ್ನಾಯುಗಳಿಗೆ ಉತ್ತಮ ಬಲವನ್ನು ನೀಡುತ್ತದೆ. ಹಾಗಾಗಿ ತುಂಬಾ ಹೊತ್ತು ಕುಳಿತು ಕೆಲಸ ಮಾಡುವವರಿಗೆ (ಐಟಿ
ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳು ಇತ್ಯಾದಿ ಜನಗಳಿಗೆ) ಈ ಆಸನವು ಉತ್ತಮವಾಗಿ ಸಹಾಯ ಮಾಡುತ್ತದೆ.
ಇದು ಹೊಟ್ಟೆಯ, ಸೊಂಟ, ತೊಡೆ ಮತ್ತು ಪೃಷ್ಠದ ಭಾಗದಲ್ಲಿನ ಕೊಬ್ಬನ್ನು ಕರಗಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top