fbpx
ಸಮಾಚಾರ

ನಾನು ಪ್ರಶಸ್ತಿ ವಾಪಸ್ ಕೊಡುತ್ತೇನೆ ಎಂದು ಹೇಳಿಲ್ಲ -ಪ್ರಕಾಶ್ ರೈ

ಖ್ಯಾತ ಪತ್ರಕರ್ತ ಲಂಕೇಶ್ ರವರ ಪರಮ ಶಿಷ್ಯ , ನಟ ನಿರ್ದೇಶಕ ಪ್ರಕಾಶ್ ರೈ ರವರು ಇತ್ತೀಚೆಗೆ ನಡೆದ ಪತ್ರಕರ್ತೆ ಗೌರಿ ಲಂಕೇಶ್ರ ಕೊಲೆಯನ್ನು ತೀವ್ರವಾಗಿ ಖಂಡಿಸಿದರು ,
ಕೊಲೆ ನಡೆದು ಇಷ್ಟು ದಿನವಾದರೂ ಕೊಲೆಗಾರರನ್ನು ಕಂಡು ಹಿಡಿದಿಲ್ಲ , ಮೋದಿ ಈ ವಿಚಾರವಾಗಿ ಕಣ್ಣುಮುಚ್ಚಿ ಕುಳಿತಿದ್ದಾರೆ .

ನನಗೆ ಈ ವರೆಗೆ 5 ರಾಷ್ಟ್ರ ಪ್ರಶಸ್ತಿಗಳು ದೊರೆತಿವೆ ಅವೆಲ್ಲವನ್ನು ಇಟ್ಟುಕೊಳ್ಳುವ ಆಸೆ ಇಲ್ಲ , ಮನಸು ಇಲ್ಲ .

 

 

 

ನನಗೆ ಈ ಪ್ರಶಸ್ತಿ ಬೇಡ , ಮತ್ತೆ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಬೇಡಿ , ನಾನೊಬ್ಬ ನಟ ನನಗೆ ನಟನೆ ಮಾಡುವವರು ಯಾರು ಎಂದು ಕಂಡು ಹಿಡಿಯಲು ಸಹ ಬರುತ್ತದೆ ,
ಗೌರಿ ಲಂಕೇಶ್ರ ಕೊಲೆಯನ್ನು ಯಾರು ಮಾಡಿದ್ದಾರೆ ? ಅವರನ್ನು ಇದುವರೆಗೂ ಏಕೆ ಬಂಧಿಸಿಲ್ಲ , ಸಾಮಾಜಿಕ ಜಾಲತಾಣಗಳಲ್ಲಿ ಹತ್ಯೆಯನ್ನು ಸಂಭ್ರಮಿಸಿದವರಲ್ಲಿ ಬಹುಪಾಲು ಮಂದಿ ಪ್ರಧಾನಿ ಮೋದಿಯವರನ್ನು ಅನುಸರಿಸುತ್ತಾರೆ , ಆದರೆ ನಾವು ಕಣ್ಣು ಮುಚ್ಚಿ ಕುಳಿತಿರುವ ಪ್ರಧಾನಿಯನ್ನು ನೋಡುತ್ತಿದ್ದೇವೆ ಎಂದು ವಿಷಾದ ವ್ಯಕಪಡಿಸಿದರು .

ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆ ಇಂಡಿಯಾದ 11 ನೇ ರಾಜ್ಯ ಸಭೆಯಲ್ಲಿ ಪ್ರಕಾಶ್ ರೈ ಈ ಮಾತುಗಳನ್ನು ಆಡಿದರು .

 

ಆದರೆ ಅವರ ಇತ್ತೀಚಿನ ಟ್ವಿಟ್ಟರ್ ವಿಡಿಯೋ ದಲ್ಲಿ ಇವೆಲ್ಲವೂ ಸುಳ್ಳು ,ನಾನು ನನ್ನ ಪ್ರತಿಭೆಗೆ ಮೆಚ್ಚಿ ನೀಡಿದ ರಾಷ್ಟ್ರ ಪ್ರಶಸ್ತಿಗಳನ್ನು ಹಿಂದಕ್ಕೆ ಕೊಡುವಷ್ಟು ಮೂರ್ಖನಲ್ಲ ಆ ಪ್ರಶಸ್ತಿಗಳ ಬಗ್ಗೆ ನನಗೆ ಹೆಮ್ಮೆ ಇದೆ ಈವರೆಗೂ ನಡೆದ ಗೌರಿ ಲಂಕೇಶ್ ಹಾಗು ಕಲ್ಬುರ್ಗಿಯವರ ಹತ್ಯೆಯ ಬಗ್ಗೆ ಡೆಮಾಕ್ರಟಿಕ್ ಯೂಥ್ ಫೆಡರೇಷನ್ ನಲ್ಲಿ ಭಾಷಣಮಾಡುವಾಗ ಪ್ರಸ್ತಾಪ ಮಾಡಿದ್ದೇನೆ .
ನಮಗೆ ಯಾರು ಈ ಹತ್ಯೆ ಯಾರು ಮಾಡಿದ್ದಾರೆ ಎಂದು ತಿಳಿದಿಲ್ಲ , ಪೊಲೀಸ್ ತನಿಖೆ ನಡೆಯುತ್ತಿದೆ ಅಷ್ಟೇ ಅಲ್ಲದೆ ಎಸ್.ಐ.ಟಿ ತಂಡ ಇದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ,
ಆದರೆ ನಮಗೆ ಯಾರು ಈ ಹತ್ಯೆಯನ್ನು ಸಂಭ್ರಮಿಸುತ್ತಿದ್ದಾರೆ ಎಂಬುದು ತಿಳಿದಿದೆ .
ಈ ರೀತಿಯ ಅಮಾನವೀಯ ಹತ್ಯೆಗಳನ್ನು ನಾನು ಖಂಡಿಸುತ್ತೇನೆ ಅದಕ್ಕೆ , ಟ್ರೊಲ್ ಮಾಡುವುದು , ಕೆಟ್ಟ ಪದ ಬಳಸಿ ನನ್ನ ವೈಯಕ್ತಿಕ ನಿಂದನೆ ಮಾಡುವುದು ನಡೆಯುತ್ತಿದೆ ಆದರೆ ಪ್ರಧಾನಿ ಮೋದಿಯವರ ಮೌನವನ್ನು ನಾನು ಖಂಡಿಸುತ್ತೇನೆ , ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ , ನಾನು ಈ ದೇಹದ ಪ್ರಜೆ , ನಾನು ಈ ದೇಶದ ಪ್ರಧಾನಿಯವರನ್ನು ಕೇಳುತ್ತಿದ್ದೇನೆ, ಅದು ಈ ದೇಹದ ಪ್ರಜೆಯಾಗಿ ನನ್ನ ಹಕ್ಕು ಕೂಡ , ಅದು ಬಿಟ್ಟು ರಾಷ್ಟ್ರ ಪ್ರಶಸ್ತಿಗಳನ್ನು ಹಿಂದಕ್ಕೆ ಕೊಡುತ್ತೇನೆ ಎಂದು ಹೇಳಿಲ್ಲ”

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top