ಮೋದಿಯ ’58 ‘ಇಂಚಿನ ದೇಹಕ್ಕೆ ಸೂಟ್ ಹೊಲೆದವನ ಕಥೆ ಕೇಳಿ ..
ಸತತ 10 ವರ್ಷಗಳ ಪ್ರಯತ್ನ , ಕಳೆದು ಹೋದ ಕ್ಷಣಗಳು ಇಷ್ಟೇ ಯಶಸ್ಸಿನ ಮಂತ್ರ ಇದು ರಾತ್ರೋ ರಾತ್ರಿ ಹೀರೋ ಆದವನ ಕಥೆಯಲ್ಲ ಬನ್ನಿ ಒಬ್ಬರನ್ನು ನಿಮಗೆ ಪರಿಚಯ ಮಾಡಿಕೊಡುತ್ತೀವಿ .
ಹೆಸರು ಜಿತೇಂದ್ರ ಚೌಹಾನ್, ಪುರುಷರ ಉಡುಪುಗಳ ವಿಶೇಷತೆಗೆ ಇವರ ಜವಳಿ ಉದ್ಯಮ ಹೆಸರುವಾಸಿ ಆ ಸಂಸ್ಥೆಯ ಹೆಸರು ‘ಜೇಡ್ ಬ್ಲೂ’ ಅಂತ
ಜಿತೇಂದ್ರ ಚೌಹಾನ್ ಹಾಗು ಅವರ ಸಹೋದರ ಬಿಪಿನ್ ಚೌಹಾನ್ ಕಟ್ಟಿ ಬೆಳೆಸಿದ ಸಂಸ್ಥೆಯದು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಕಿದ್ದ ಆ ಸೂಟ್ ಮೇಲೆ ಸಣ್ಣ ಅಕ್ಷರಗಳೊಂದಿಗೆ ‘ಜೇಡ್ ಬ್ಲೂ’ ಸಂಸ್ಥೆಯ ಟ್ಯಾಗ್ ಹೊಂದಿತ್ತು ,ಆ ಸೂಟ್ ಅನ್ನು 4.31 ಕೋಟಿ ರೂಪಾಯಿಗಳಿಗೆ ಹರಾಜು ಮಾಡಲಾಗಿದೆ ಅಂದು ‘ಜೇಡ್ ಬ್ಲೂ’ ಜಗತ್ತಿನಾದ್ಯಂತ ತನ್ನ ಮಾನ್ಯತೆ ಪಡೆದುಕೊಂಡಿತು .
ಆದರೆ ಈ ಯಶಸ್ಸು ಒಂದು ದಿನದ್ದಲ್ಲ ಸತತ ಹಲವಾರು ವರ್ಷಗಳ ತಪಸ್ಸು .
ತಮ್ಮ ತಂದೆ ಇದ್ದಕ್ಕಿದ್ದ ಹಾಗೆ ಸನ್ಯಾಸ ತೆಗೆದುಕೊಳ್ಳಲು ಬಯಸಿದಾಗ ಜಿತೇಂದ್ರರಿಗೆ ಕೇವಲ ಐದು ವರ್ಷ. ಜಿತೇಂದ್ರ ಅವರ ತಾಯಿ ಐದು ಚಿಕ್ಕ ಮಕ್ಕಳೊಂದಿಗೆ ಮನೆ ನಿಭಾಯಿಸಿ
ಮಕ್ಕಳನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ , ಇದಕ್ಕೂ ಮುಂಚೆ 1966 ರಲ್ಲಿ ಜಿತೇಂದ್ರ ಅವರ ತಂದೆ ಸನ್ಯಾಸ ತೆಗೆದುಕೊಂಡು ಹೊರಡುವ ಮುನ್ನ ಸಬರಮತಿ ಆಶ್ರಮದ ಬಳಿ ಟೈಲರಿಂಗ್ ಅಂಗಡಿ ಹೊಂದಿದ್ದರು.
ನಂತರ ಕುಟುಂಬವು ಜಿತೇಂದ್ರ ಅವರ ಅಜ್ಜಿಯ ಮನೆಗೆ ಸ್ಥಳಾಂತರಗೊಂಡಿತು ಜಿತೇಂದ್ರ 13 ವರ್ಷದವನಿದ್ದಾಗ ಅವರ ಸೋದರ ಮಾವನಿಂದ ಹೊಲಿಗೆ ಮಾಡುವ ಟೈಲರಿಂಗ್ ಯಂತ್ರವನ್ನು ಬಳಸುವ ಬಗ್ಗೆ ಸ್ವಲ್ಪ ಕೌಶಲ್ಯಗಳನ್ನು ಕಲಿತುಕೊಂಡರು , ‘ಬಟನ್ ಹೋಲ್’ ಯಂತ್ರವನ್ನು ಸಹ ನಿರ್ವಹಿಸುವುದನ್ನು ಕಲಿತುಕೊಂಡರು .
ನಂತರ 1975 ರಲ್ಲಿ ಜಿತೇಂದ್ರ ಅವರ ಹಿರಿಯ ಸಹೋದರ ದಿನೇಶ್ ತಮ್ಮದೇ ಆದ ಟೈಲರಿಂಗ್ ಅಂಗಡಿಯನ್ನು ಆರಂಭಿಸಿದರು . ಜಿತೇಂದ್ರ ಅವರು ಕಾಲೇಜಿನಲ್ಲಿದ್ದರು ಸೈಕಾಲಜಿ ಪದವಿ ಓದುತ್ತಿದ್ದರು ಆದರೂ ಸಹ ಅಂಗಡಿಗೆ ಹೋಗಿ 0-12 ಶರ್ಟ್ಗಳನ್ನು ಒಂದು ದಿನದಲ್ಲಿ ಹೊಲೆದು ಬರುತ್ತಿದ್ದರು.
1981 ರಲ್ಲಿ, ಜಿತೇಂದ್ರ ತನ್ನ 250 ಚದರ ಅಡಿ ವಿಸ್ತಾರದಲ್ಲಿ ‘ಸುಪ್ರೀಮೋ ಕ್ಲಾಥಿಂಗ್ ‘ ಎಂಬ ಹೆಸರಿನ ಅಂಗಡಿಯನ್ನು ತೆರೆದರು, ಬಟ್ಟೆ ಕಟ್ ಮಾಡೋದು , ಬಟ್ಟೆ ಹೊಲೆಯೋದು , ಮಾರಾಟ ಮಾಡೋದು ಎಲ್ಲ ಕೆಲಸವನ್ನು ಮಾಡುತ್ತಿದ್ದರು , 1986 ರಲ್ಲಿ ಅವರು ಮೊದಲ ಭಾರಿಗೆ ಚಿಲ್ಲರೆ ಮಾರಾಟಕ್ಕೆ ಬಂದರು ಆದರೆ ಸಿದ್ಧ ಉಡುಪುಗಳು ಲಗ್ಗೆ ಇಟ್ಟ ಕಾರಣ
ಆ ವ್ಯವಹಾರ ಸಫಲವಾಗಲಿಲ್ಲ .
ನಂತರ ರೆಡಿ ಮೇಡ್ ಪ್ಯಾಂಟ್ ತಯಾರಿ ಮಾಡಲು ಶುರು ಮಾಡಿದರು , 1995 ರಲ್ಲಿ 2,800 ಚದುರ ಅಡಿ ಪ್ರದೇಶದಲ್ಲಿ ವಿಸ್ತರಿಸಿ , 1999 ರಲ್ಲಿ ಅವರು 5,500 ಚದುರ ಅಡಿಗೆ ವಿಸ್ತರಿಸಿ
12 ಪ್ರೀಮಿಯಂ ರಾಷ್ಟ್ರೀಯ ಪುರುಷರವಸ್ತ್ರ ಬ್ರಾಂಡ್ಗಳನ್ನು ತಯಾರಿಸಿದರು , 18 ನಗರಗಳಲ್ಲಿ 22 ಅಂಗಡಿಗಳನ್ನು ಪ್ರಸ್ತುತ ಹೊಂದಿದ್ದಾರೆ , ‘ಜೇಡ್ ಬ್ಲೂ’ ಇಡೀ ದೇಶದಲ್ಲಿ ಸುಮಾರು 1,200 ನೌಕರರನ್ನು ಹೊಂದಿದ್ದು 225 ಕೋಟಿ ರೂ ವ್ಯವಹಾರ ನಡೆಸುತ್ತಿದ್ದಾರೆ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
