fbpx
ಸಮಾಚಾರ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 2 ರೂ ಕಡಿಮೆ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 2 ರೂ ಕಡಿಮೆ

ಕಳೆದ ಕೆಲವು ವಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ಗಳ ಅಂತಾರಾಷ್ಟ್ರೀಯ ಬೆಲೆಯ ಹೆಚ್ಚಳದ ಕಾರಣದಿಂದಾಗಿ, ಪೆಟ್ರೋಲ್ ಮತ್ತು ಡೀಸೆಲ್ಗಳ ಮಾರಾಟದ ಬೆಲೆ ಲೀಟರ್ ಗೆ ರೂ. 70.83 ಲೀಟರ್ ಮತ್ತು ರೂ. 59.07 / ಲೀಟರ್, ಕ್ರಮವಾಗಿ ಇದ್ದವು .

 

 

ಅಂತಾರಾಷ್ಟ್ರೀಯ ಅಂಶಗಳ ಕಾರಣದಿಂದಾಗಿ ಸರಕುಗಳ ಬೆಲೆ ಏರಿಕೆಯಾಗಿ ಜನ ಸಾಮಾನ್ಯರ ಮೇಲೆ ಹೇರಿಕೆಯಾಗಿತ್ತು , ಸರಕಾರ ಇಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಎಕ್ಸೈಸ್ ತೆರಿಗೆಯನ್ನು 2 ರೂಪಾಯಿ ಕಡಿತಗೊಳಿಸಿದೆ.
4 ನೇ ಅಕ್ಟೋಬರ್, 2017 ರಿಂದ ಈ ನಿಯಮ ಜಾರಿಗೆ ಬರಲಿದ್ದು , ಕಚ್ಚಾ ಪೆಟ್ರೋಲಿಯಂ ತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಾಗಿದ್ದ ಕಾರಣ ಪೆಟ್ರೋಲ್ ಮತ್ತು ಡೀಸೆಲ್ಗಳ ಚಿಲ್ಲರೆ ಮಾರಾಟದ ಬೆಲೆಗಳ ಮೇಲೆ ಭಾರಿ ಏರಿಕೆಯಾಗಿ ಜನ ಸಾಮಾನ್ಯರಿಗೆ ಭಾರಿ ತೊಂದರೆ ನೀಡಿತ್ತು , ಪ್ರತಿ ಲೀಟರ್ಗೆ 2 ರೂ. ಇಳಿಕೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.

ಈ ಕಡಿತದ ನಿರ್ಧಾರ ಸುಮಾರು ರೂ. 26000 ಕೋಟಿ ಪೂರ್ಣ ವರ್ಷದ ನಷ್ಟ ಹಾಗು ಪ್ರಸಕ್ತ ಹಣಕಾಸು ವರ್ಷದ ಉಳಿದ ಭಾಗದಲ್ಲಿ 13000 ಕೋಟಿ ರೂ ನಷ್ಟವನ್ನು ಉಂಟುಮಾಡಲಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top