fbpx
ಸಮಾಚಾರ

ಝೀ ಕನ್ನಡ ಮತ್ತು ರಾಘವೇಂದ್ರ ಹುಣಸೂರು ವಿರುದ್ಧ ಕಾನೂನು ಸಮರಕ್ಕೆ ಸಿದ್ದವಾದ ಸಾಮಾನ್ಯ ಕನ್ನಡಿಗ ಮತ್ತು BMS ಜೈನ ಸಮಾಜ.

ರಾಘವೇಂದ್ರ ಹುಣಸೂರು ಮತ್ತು ಝೀ ಕನ್ನಡ ವಾಹಿನಿ ವಿರುದ್ಧ ಕಾನೂನು ಸಮರಕ್ಕೆ ಸಿದ್ದವಾದ ಸಾಮಾನ್ಯ ಕನ್ನಡಿಗ ಮತ್ತು BMS ಜೈನ ಸಮಾಜ .

 

 

ಝೀ ಕನ್ನಡ ಚಾನೆಲ್ ನವರು ಶ್ರಾವಣ ಬೆಳಗೊಳದ ಗೊಮ್ಮಟೇಶ್ವರ ಸ್ವಾಮಿಯ ಅವಹೇಳನಕಾರಿ ಪ್ರಹಸನದ ಬಗ್ಗೆ ವಿಡಿಯೋವನ್ನು ಅಂತರ್ಜಾಲದಲ್ಲಿ ಪ್ರಕಟಣೆ ಮಾಡಿದ ವಿರುದ್ಧ ಕಾನೂನು ಸಮರ ಕೈಗೊಳ್ಳಲು ಸಾಮಾನ್ಯ ಕನ್ನಡಿಗ ಮತ್ತು BMS ಜೈನ ಸಮಾಜ ನಿರ್ಧರಿಸಿದೆ. ಈ ಕುರಿತು ಈ ಎರಡು ಸಂಘಟನೆಗಳು ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸ್ದದು ಝೀ ಕನ್ನಡ ಚಾನೆಲ್ ನವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿವೆ.

 

 

  ಇದನ್ನೂ ಓದಿ..         ಕರ್ನಾಟಕದ ಹೆಮ್ಮೆಯ ಕೀರ್ತಿ ಕಿರೀಟವಾದ ಗೊಮ್ಮಟೇಶ್ವರನಿಗೆ ಅವಮಾನ ಮಾಡಿದ ಝೀ ಕನ್ನಡ!

ಪತ್ರಿಕಾ ಪ್ರಕಟಣೆಯಾ ಸಾರಾಂಶ ಈ ರೀತಿಯಿದೆ:

ನಮ್ಮ ಘನ ಸರ್ಕಾರದವರು 2018ರ ಫೆಬ್ರವರಿಯಲ್ಲಿ ಶ್ರವಣಬೆಳಗೋಳದಲ್ಲಿ ನಡೆಯುವ ಗೊಮ್ಮಟೇಶ್ವರ ಸ್ವಾಮಿಯ ಮಹಾಮಸ್ತಕಾಭಿಷೇಕವನ್ನು ಅದ್ಧೂರಿಯಾಗಿ ನಡೆಸಲು ಕಾರ್ಯಕ್ರಮಗಳನ್ನು ಏರ್ಪಾಡು ಮಾಡುತ್ತಿರುತ್ತಾರೆ. ಹೀಗಿರುವಾಗ ಝೀ ಕನ್ನಡ ಚಾನೆಲ್’ನಲ್ಲಿ ಪ್ರಸಾರವಾಗುವ ‘ಕಿಲಾಡಿ ಕುಟುಂಬ’ ಎಂಬ ಕಾರ್ಯಕ್ರಮದ ಪ್ರಚಾರಕ್ಕೆಂದು ಸಿದ್ದಪಡಿಸಿದ್ದ 19 ಸೆಕೆಂಡುಗಳ ವಿಡಿಯೋ ತುಣಿಕಿನಲ್ಲಿ ಕರ್ನಾಟದ ಐತಿಹಾಸಿಕ ಹೆಮ್ಮೆಯಾಗಿರುವ ಶ್ರೀ ಶ್ರಾವಣಬೆಳಗೊಳದ ಗೊಮ್ಮಟೇಶ್ವರ ಸ್ವಾಮಿಗೆ ಹೀನಾಯವಾಗಿ ಅವಮಾನ ಮಾಡಲಾಗಿದೆ. ಈ ವಿಡಿಯೋವನ್ನು ಝೀ ಕನ್ನಡ ಚಾನೆಲ್’ನ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿರುತ್ತಾರೆ. ಈ ವಿಡಿಯೋಯಿಂದ ಕನ್ನಡಿಗರ ಭಾವನೆಗೆ ಧಕ್ಕೆಯುಂಟಾಗಿರುತ್ತದೆ.

 

 

 

  ಇದನ್ನೂ ಓದಿ..        

ಶಿವರಾಜ್ ಕೆ ಆರ್ ಪೇಟೆ ಮತ್ತು ಸಂಜು ಬಸಯ್ಯ ವಿರುದ್ಧ ‘ಸಾಮಾನ್ಯಕನ್ನಡಿಗ’ FIR ದಾಖಲಿಸಲು ನಿರ್ಧರಿಸಿದ್ದಕ್ಕೆ ಕೊಟ್ಟ ಕಾರಣಗಳು!

 

 

ತಪ್ಪು ಮಾಡುವುದು ಮನುಷ್ಯನ ಸಹಜ ಗುಣ ಆದರೆ ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮಾಪಣೆ ಕೇಳುವುದು ದೊಡ್ಡತನ, ಆದರೆ ಝೀ ಕನ್ನಡ ವಾಹಿನಿಯು ಸಾಮಾನ್ಯ ಕನ್ನಡಿಗರು ಮಾಡಿದ ಮನವಿಗೆ ಕಿವಿಕೊಡದೆ ಉಡಾಫೆಯಿಂದ ವರ್ತಿಸುತ್ತಿದೆ. ಹಾಗಾಗಿ ಝೀ ಕನ್ನಡ ವಿರುದ್ಧ ಬಿ.ಎಂ.ಎಸ್. ಜೈನ ಸಂಘ ಕೈಗೊಳ್ಳಲಿರುವ ಕಾನೂನು ಸಮರಕ್ಕೆ ಸಾಮಾನ್ಯಕನ್ನಡಿಗ ಪ್ರತಿಷ್ಠಾನ ಟ್ರಸ್ಟ್ ತನ್ನ ಸಂಪೂರ್ಣ ಬೆಂಬಲವನ್ನು ನೀಡಲಿದೆ.

 

 

 

  ಇದನ್ನೂ ಓದಿ..        

ಗೊಮ್ಮಟೇಶ್ವರನಿಗೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳೋದಿಲ್ಲ ಎಂದು ಅಧಿಕೃತವಾಗಿ ಹೇಳಿದ ದುರಹಂಕಾರಿ ಜೀ ಕನ್ನಡ.

 

 

ಝೀ ಕನ್ನಡ ವಾಹಿನಿಯವರು ಗೊಮ್ಮಟೇಶ್ವರನಿಗೆ ಅವಮಾನಿಸಿದ್ದ ವಿಡಿಯೋವನ್ನು ಇಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top