fbpx
ದೇವರು

ಈ ಗುಹೆಯಲ್ಲಿರುವ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಹೋದ್ರೆ ಮಕ್ಕಳಿಲ್ಲದವರಿಗೆ , ಮದುವೆಯಾಗದವರಿಗೆ , ಚರ್ಮ ರೋಗದಿಂದ ಬಳಲುತ್ತಿರುವವರಿಗೆ ಪರಿಹಾರ ಸಿಗುತ್ತೆ

ಈ ಗುಹೆಯಲ್ಲಿರುವ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಹೋದ್ರೆ ಮಕ್ಕಳಿಲ್ಲದವರಿಗೆ , ಮದುವೆಯಾಗದವರಿಗೆ , ಚರ್ಮ ರೋಗದಿಂದ ಬಳಲುತ್ತಿರುವವರಿಗೆ ಪರಿಹಾರ ಸಿಗುತ್ತೆ

 

ಬೀದರ್ನಲ್ಲಿರುವ ಒಂದು ಗುಹಾ ದೇವಾಲಯವೇ ಈ ಝರಣಿ ನರಸಿಂಹ ಸ್ವಾಮಿ ಆಲಯ . ಇದು ಹಿಂದೂ ದೇವರು ವಿಷ್ಣುವಿನ ಅವತಾರವಾದ ನರಸಿಂಹ ಸ್ವಾಮಿಯೇ ಇಲ್ಲಿನ ಆರಾಧ್ಯ ದೈವ , ಮಣಿಚುಲ ಬೆಟ್ಟದ ಕೆಳಗೆ 300 ಮೀಟರ್ ಸುರಂಗದಲ್ಲಿ ಈ ದೇವಾಲಯವಿದ್ದು ನಗರದಿಂದ ಸುಮಾರು 1 ಕಿ.ಮೀ ದೂರದಲ್ಲಿ ಇದೆ .

 

 

ನರಸಿಂಹ ಸ್ವಾಮಿಯ ರೂಪ ಸ್ವಯಂಭು ರೂಪ ಎಂದು ನಂಬಲಾಗಿದೆ. ಈ ಸ್ಥಳದಲ್ಲಿ ನೂರಾರು ವರ್ಷಗಳಿಂದ ನೀರು ಹರಿಯುತ್ತಲೇ ಇದೆ .

ದೇವಾಲಯದ ಇತಿಹಾಸ :

ವಿಷ್ಣುವಿನ ನಾಲ್ಕನೇ ಅವತಾರವಾದ ನರಸಿಂಹ ಅರ್ಧ ಮಾನವ ಮತ್ತು ಅರ್ಧ ಸಿಂಹ. ಹಿರಣ್ಯಕಶಿಪುವನ್ನು ಕೊಂದ ನಂತರ ನರಸಿಂಹನು ಭಗವಾನ್ ಶಿವನ ಭಕ್ತನಾಗಿದ್ದ ಜಾರಾಸುರ ಅಥವಾ ಜಲಾಸುರ ಎಂಬ ಮತ್ತೊಂದು ದೈತ್ಯ ರಾಕ್ಷಸನನ್ನು ಕೊಂದನು ಎಂದು ಪುರಾಣವು ಹೇಳುತ್ತದೆ.

 

 

ದೈತ್ಯ ರಾಕ್ಷಸ ಜಾರಾಸುರ ತನ್ನ ಕೊನೆಯ ಉಸಿರು ಎಳೆಯುವಾಗ ತಾನು ವಾಸಿಸುತ್ತಿದ್ದ ಗುಹೆಯಲ್ಲಿ ಇನ್ನು ಮುಂದೆ ವಾಸಿಸಿ ಭಕ್ತರಿಗೆ ಅನುಗ್ರಹ ನೀಡೆಂದು ವಿಷ್ಣುವಿನಲ್ಲಿ ಪ್ರಾರ್ಥಿಸಿದನು ಆದ್ದರಿಂದ ನರಸಿಂಹ ಗುಹೆಯಲ್ಲಿ ವಾಸಿಸಲು ಬಂದನು ಎಂಬ ಐತಿಹ್ಯವಿದೆ.

 

 

ಗುಹೆಯ ಕೊನೆಯಲ್ಲಿ ಒಂದು ಕಲ್ಲಿನ ಗೋಡೆಯ ಮೇಲೆ ನರಸಿಂಹನ ಚಿತ್ರವಿದೆ , ಕೊಲ್ಲಲ್ಪಟ್ಟ ನಂತರ ರಾಕ್ಷಸನು ನೀರಿನಲ್ಲಿ ಬೆರೆತು ನರಸಿಂಹರ ಕಾಲುಗಳ ಕೆಳಗೆ ಹರಿಯಲು ಆರಂಭಿಸಿದನು. ಗುಹೆ ಸುರಂಗದ ನೀರಿನ ಹರಿವು ಅಂದಿನಿಂದ ನಿರಂತರವಾಗಿದೆ.ಬೇಸಿಗೆಯ ಕಾಲದಲ್ಲೂ ಇಲ್ಲಿನ ನೀರು ಬತ್ತುವುದಿಲ್ಲ .
ನರಸಿಂಹನ ಪಾದದಿಂದ ನೀರು ಸತತವಾಗಿ ಸುರಿಯುವುದರಿಂದಲೇ ಈ ಸ್ಥಳಕ್ಕೆ “ನರಸಿಂಹ ಝೀರ” ಎಂಬ ಹೆಸರು ಬಂತು .

 


ಗುಹೆಯ ದೇವಸ್ಥಾನವಾದ ಕಾರಣ ಎ.ಸಿ ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ , ಲೈಟಿಂಗ್ ವ್ಯವಸ್ಥೆ ಸಹ ಮಾಡಲಾಗಿದೆ ಈ ದೇವಾಲಯವು ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.

ಧಾರ್ಮಿಕ ನಂಬಿಕೆ :

 


ಜನರು ಈ ದೇವಾಲಯಕ್ಕೆ ಹೆಚ್ಚು ಭೇಟಿ ನೀಡುತ್ತಾರೆ ಏಕೆಂದರೆ ನರಸಿಂಹ ಝರನಿ ಗುಹೆಯ ದೇವಾಲಯದ ವಿಗ್ರಹವು ಸ್ವಯಂಭು ರೂಪ ಎಂಬ ನಂಬಿಕೆ ಇದ್ದು
ಮಕ್ಕಳಿಲ್ಲದವರಿಗೆ , ಮದುವೆಯಾಗದವರಿಗೆ , ಚರ್ಮ ರೋಗದಿಂದ ಬಳಲುತ್ತಿರುವವರಿಗೆ ಇಲ್ಲಿ ಪರಿಹಾರ ಸಿಗುತ್ತದೆ ಎಂದು ನಂಬಿದ ಭಕ್ತ ಸಮೂಹ ಹೇಳುತ್ತಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Raghuprasad says:

I realy believed this temple.

To Top