fbpx
ಮನೋರಂಜನೆ

‘ತಾರಕ್’ ಚಿತ್ರದ ಗೆಲುವನ್ನು ಅರ್ಜುನ್ ಜನ್ಯ ಅರ್ಪಿಸಿದ್ದು ಯಾರಿಗೆ ಗೊತ್ತಾ..?

‘ತಾರಕ್’ ಚಿತ್ರದ ಗೆಲುವನ್ನು ಅರ್ಜುನ್ ಜನ್ಯ ಅರ್ಪಿಸಿದ್ದು ಯಾರಿಗೆ ಗೊತ್ತಾ..?

 

 

ಈ ವಾರ ಬಿಡುಗಡೆಗೊಂಡು ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ “ತಾರಕ್” ಚಿತ್ರವು ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸಿದೆ. ರಾಜ್ಯದಂತ ಸುಮಾರು ಮುನ್ನರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿರುವ ಭರ್ಜರಿ ಚಿತ್ರವು ಎಲ್ಲ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ.

 

 

ತಾರಕ್ ಚಿತ್ರವನ್ನು ಗೆಲ್ಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಾರಕ್ ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ತಿಳಿಸಿದ್ದಾರೆ. ನಾನು ಏನೇ ಮಾಡಿದರು, ಅದರ ಹಿಂದೆ ಗೀತಾ ರಚನಾಕಾರರು, ಹಿನ್ನೆಲೆ ಗಾಯಕರು, ತಂತ್ರಜ್ಞರ ಪರಿಶ್ರಮ ಇದೆ. ಹಾಗಾಗಿ ‘ತಾರಕ್’ ಚಿತ್ರದ ಯಶಸ್ಸನ್ನು ಅವರಿಗೆ ಅರ್ಪಿಸುತ್ತೇನೆ” ಅರ್ಜುನ್ಯ ಜನ್ಯ ಸಂತಸ ವ್ಯಕ್ತಪಡಿಸಿದ್ದಾರೆ.

 

 

ಅಂದಹಾಗೆ ತಾರಕ್ ಚಿತ್ರದಲ್ಲಿ ನಟ ದೇವರಾಜ್ ಡಿಫರೆಂಟ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಮಿಲನ ಪ್ರಕಾಶ್ ತಾರಕ್ ಚಿತ್ರವನ್ನು ನಿರ್ದೇಶಿಸಿದ್ದು ದರ್ಶನ್ ಗೆ ನಾಯಕಿಯಾಗಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವತ್ಸವ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಲಕ್ಷ್ಮಣ ದುಷ್ಯಂತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top