fbpx
ದೇವರು

ಮಾಟ ಮಂತ್ರ, ದುಷ್ಟ ಗ್ರಹ, ಪೀಡೆ ಇತರೆ ನಕಾರಾತ್ಮಕ ಶಕ್ತಿಯಿಂದ ಬಳಲುತ್ತಿರೋರು ಈ ಭೂತ ಕಟ್ಟಿಸಿರೋ ದೇವಸ್ಥಾನಕ್ಕೆ ಹೋದ್ರೆ ಸರಿ ಹೋಗುತ್ತೆ

ಮಾಟ ಮಂತ್ರ, ದುಷ್ಟ ಗ್ರಹ, ಪೀಡೆ ಇತರೆ ನಕಾರಾತ್ಮಕ ಶಕ್ತಿಯಿಂದ ಬಳಲುತ್ತಿರೋರು ಈ ಭೂತ ಕಟ್ಟಿಸಿರೋ ದೇವಸ್ಥಾನಕ್ಕೆ ಹೋದ್ರೆ ಸರಿ ಹೋಗುತ್ತೆ

 

ಗುಜರಾತ್ ನ ಕಾಥೇವಾರ ಗ್ರಾಮದಲ್ಲಿರುವ ಈ ದೇವಾಲಯ ದೆವ್ವ ಭೂತಗಳು ಕಟ್ಟಿವೆಯಂತೆ ಹಾಗಂತ ಇಲ್ಲಿರುವ ಸ್ಥಳೀಯರು ನಂಬುತ್ತಾರೆ

ಮಾಟ ಮಂತ್ರ, ದುಷ್ಟ ಗ್ರಹ, ಪೀಡೆಗಳು ಅಥವಾ ಇನ್ನಾವುದೇ ನಕಾರಾತ್ಮಕ ಶಕ್ತಿಯ ತೊಂದರೆಯಿಂದಿರುವವರು ಈ ದೇವಾಲಯಕ್ಕೆ ಭೇಟಿಕೊಟ್ಟರೆ ಅವರ ಸಮಸ್ಯೆಗಳು ದೂರವಾಗಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಎಂಬುದು ಇಲ್ಲಿನ ಭಕ್ತಗಣಗಳ ನಂಬಿಕೆಯಾಗಿದೆ .

 

ದೆವ್ವ ಭೂತಗಳು ಅಥವಾ ಇನ್ನಿತರ ದುಷ್ಟ ಗ್ರಹ, ಪೀಡೆಗಳು ಯಾವಾಗಲೂ ನಕಾರಾತ್ಮಕ ಶಕ್ತಿಯಿಂದ ತೊಂದರೆ ಕೊಡುತ್ತಿರುತ್ತವೆ ಆದರೆ ಇಲ್ಲೇನಿದು ಅವೇ ತೊಂದರೆಗಳನ್ನು ಪರಿಹರಿಸುವುದಾ ಎಂದು ಆಶ್ಚರ್ಯವಾಗಬಹುದು ಆದರೂ ಇದು ನಿಜ.

ಇಲ್ಲಿನ ಭೂತಗಳು ಶಿವನ ಆರಾಧಕರು , ಹಾಗಾಗಿಯೇ ಒಂದೇ ರಾತ್ರಿಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ನಿರ್ಮಿಸಿದವು ಎಂದು ಹೇಳುತ್ತಾರೆ ಆದ್ದರಿಂದಲೇ ಇದಕ್ಕೆ ‘ಭೂತೋವಾಲ ಮಂದಿರ್’ ಎಂದು ಕರೆಯುತ್ತಾರೆ .

ಮಾನವ ನಿರ್ಮಿತ ರೀತಿಯಲ್ಲಿ ಕಟ್ಟಡ ನಿರ್ಮಾಣವಾಗಿದ್ದು , ಕೆಂಪು ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ ಆದರೆ ದೇವಾಲಯದ ಮೇಲ್ಭಾಗ ಅಂದರೆ ಶಿಖರದ ಭಾಗ ಮಾತ್ರ ಸಂಪೂರ್ಣವಾಗಿಲ್ಲವಂತೆ ಕೆಲವು ಪೂರಾಣಗಳ ಪ್ರಕಾರ ಭೂತಗಳು ಕಟ್ಟಡ ಕಟ್ಟುವ ಹೊತ್ತಿಗೆ ಬಹಳ ಸುಸ್ತಾಗಿದ್ದವಂತೆ , ಶಿಖರದ ಭಾಗ ಕಟ್ಟುವಷ್ಟರಲ್ಲಿ ಬೆಳಗ್ಗೆಯಾದ ಕಾರಣ ನಿರ್ಮಾಣ ಪೂರ್ಣವಾಗಿಲ್ಲವಂತೆ .

 

 

ಈ ದೇವಸ್ಥಾನಕ್ಕೆ ಸುಮಾರು 1100 ವರ್ಷಗಳ ಇತಿಹಾಸವಿದ್ದು , ದೇವಸ್ಥಾನದ ಉಳಿದ ಶಿಖರದ ಭಾಗವನ್ನು ಸ್ಥಳೀಯರೇ ಕಟ್ಟಿಸಿರುತ್ತಾರೆ , ಹಾಗೆಯೇ ಈ ದೇವಾಲಯವನ್ನು ಗ್ರಾಮ ದೇವತೆಯಾಗಿ ಪೂಜೆ ಮಾಡುತ್ತಾರೆ .

ಗ್ರಾಮದಲ್ಲಿ ಮಳೆ ಬೆಳೆ ಹಾನಿ , ನಷ್ಟ ,ಇತರೆ ಯಾವುದೇ ಸಮಸ್ಯೆ ಬರದಂತೆ ಕಾಪಾಡುತ್ತದೆ ಎಂಬ ನಂಬಿಕೆಯು ಇದೆ , ಮಾಟ ಮಂತ್ರ, ದುಷ್ಟ ಗ್ರಹ, ಪೀಡೆಗಳು ಅಥವಾ ಇನ್ನಾವುದೇ ನಕಾರಾತ್ಮಕ ಶಕ್ತಿಯ ತೊಂದರೆಯಿಂದಿರುವವರು ಈ ದೇವಾಲಯಕ್ಕೆ ಭೇಟಿ ಕೊಟ್ಟು ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top