fbpx
ಮನೋರಂಜನೆ

ದರ್ಶನ್ ಮತ್ತು ಕಿಚ್ಚನಿಗೆ ಬಿಗ್ ಬ್ರೇಕ್ ಕೊಟ್ಟ ಚಿತ್ರಗಳ ಹೆಸರಿನಲ್ಲಿ ಬೇರೆ ನಟರ ನಟನೆ..! ಒಪ್ಪಿಕೊಳ್ತಾರಾ ಪ್ರೇಕ್ಷಕರು.

ದರ್ಶನ್ ಮತ್ತು ಕಿಚ್ಚನಿಗೆ ಬಿಗ್ ಬ್ರೇಕ್ ಕೊಟ್ಟ ಚಿತ್ರಗಳ ಹೆಸರಿನಲ್ಲಿ ಬೇರೆ ನಟರ ನಟನೆ..! ಒಪ್ಪಿಕೊಳ್ತಾರಾ ಪ್ರೇಕ್ಷಕರು.

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಿಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಕೊಟ್ಟಿದ್ದ ಕರಿಯ ಮತ್ತು ಹುಚ್ಚ ಚಿತ್ರಗಳ ಹೆಸರಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ಚಿತ್ರಗಳು ಬರುತ್ತಿವೆ. ಆದರೆ ಈ ಚಿತ್ರಗಳಲ್ಲಿ ಸುದೀಪ್ ಮತ್ತು ದರ್ಶನ್ ರವರು ನಟಿಸುತ್ತಿಲ್ಲ ಅವರ ಬದಲಾಗಿ ಬೇರೆ ಕಲಾವಿದರು ನಟಿಸುತ್ತಿದ್ದಾರೆ. ಮುಂದೆ ಓದಿ.

 

 

ಹೌದು.. ನಟ ಕಿಚ್ಚ ಸುದೀಪ್ ಗೆ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿದ್ದ 2001 ರಲ್ಲಿ ತೆರೆಕಂಡಿದ್ದ ಹುಚ್ಚ ಚಿತ್ರದ ಹೆಸರಿನಲ್ಲಿ ಹುಚ್ಚ-2 ತಯಾರಾಗುತ್ತಿದ್ದು ಆದರೆ ಆ ಚಿತ್ರದಲ್ಲಿ ಸುದೀಪ್ ನಟಿಸುತ್ತಿಲ್ಲ ಬದಲಾಗಿ ಮದರಂಗಿ ಕೃಷ್ಣ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕೃಷ್ಣ ಅವರಿಗೆ ನಾಯಕಿಯಾಗಿ ಓಂ ಪ್ರಕಾಶ್ ಅವರ ಪುತ್ರಿ ಶ್ರಾವ್ಯ ನಟಿಸಲಿದ್ದಾರೆ. ಅಂದಹಾಗೆ ಮೂಲ ಹುಚ್ಚ ಚಿತ್ರವನ್ನು ನಿರ್ದೇಶನ ಮಾಡಿದ್ದ ಓಂ ಪ್ರಕಾಶ್ ರಾವ್ ಅವ್ರೆ ಈ ಚಿತ್ರವನ್ನು ನಿರ್ದೇಶಿಸಿದ್ದು ಈ ತಿಂಗಳ ಕೊನೆ ವಾರದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ.

 

 

ದರ್ಶನ್ ಗೆ ದೊಡ್ಡ ಬ್ರೇಕ್ ನೀಡಿದ್ದ 2003 ರಲ್ಲಿ ತೆರೆಕಂಡು ಭರ್ಜರಿ ಯಶಸ್ಸನ್ನು ಕಂಡಿದ್ದ ಕರಿಯ ಚಿತ್ರದ ಹೆಸರಿನಲ್ಲಿ ಕರಿಯ-2 ಚಿತ್ರ ಬರುತ್ತಿದ್ದು ಈ ಚಿತ್ರಕ್ಕೆ ಗಣಪ ಚಿತ್ರದ ಖ್ಯಾತಿಯ ಸಂತೋಷ್ ನಾಯಕನಾಗಿ ಅಭಿನಯಿಸಿದ್ದಾರೆ. ‘ಕರಿಯ-2’ ಸಿನಿಮಾವನ್ನು ಪ್ರಭು ಶ್ರೀನಿವಾಸ್ ನಿರ್ದೇಶನ ಮಾಡಿದ್ದು, ಸಂತೋಷ್ ಗೆ ನಾಯಕಿಯಾಗಿ ನಟಿ ಮಯೂರಿ ಅಭಿನಯಿಸಿದ್ದಾರೆ. ಈಗಾಗಲೇ ಕರಿಯ-2 ಚಿತ್ರದ ಆಡಿಯೋ ಸಹ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮುಂದಿನ ವಾರ ಚಿತ್ರ ಬಿಡುಗಡೆಗೊಳ್ಳಲಿದೆ.

 

 

ಏನೇ ಇರಲಿ ಕನ್ನಡ ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್ ನಟರುಗಳಿಗೆ ಸ್ಟಾರ್ ಪಟ್ಟವನ್ನು ತಂದುಕೊಟ್ಟಿದ್ದ ಹುಚ್ಚ ಮತ್ತು ಕರಿಯ ಚಿತ್ರದ ಹೆಸರಿನಲ್ಲಿ ಬರುತ್ತಿರುವ ಈ ಚಿತ್ರಗಳನ್ನು ಪ್ರೇಕ್ಷಕ ಮಹಾಶಯ ಒಪ್ಪುವನೇ ಎಂಬುದೇ ನಮ್ಮ ಮುಂದೆ ಇರುವ ಪ್ರಶ್ನೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top