fbpx
ಉಪಯುಕ್ತ ಮಾಹಿತಿ

ಏನೇ ಸಾಮಾನು ಮಾರ್ಕೆಟಲ್ಲಿ ತಗೊಂಡ್ರು ಅದಕ್ಕೆ ಗ್ಯಾರಂಟಿ ಅಥವಾ ವಾರಂಟಿ ಕೊಡ್ತೀವಿ ಅಂತಾರೆ , ಆದ್ರೆ ಇದ್ರ ಬಗ್ಗೆ ಎಷ್ಟೋ ಜನಕ್ಕೆ ಸರಿಯಾಗಿ ಗೊತ್ತಿಲ್ದೆ ಮೋಸ ಹೋಗ್ತಾರೆ , ಇದ್ರ ಬಗ್ಗೆ ತಿಳ್ಕೊಳ್ಳಿ

ನೀವು ಮಾರುಕಟ್ಟೆಗಳಲ್ಲಿ ಉತ್ಪನ್ನಗಳನ್ನ ಖರೀದಿಸುವ ಸಮಯದಲ್ಲಿ ಈ ವಾರಂಟಿ ಮತ್ತು ಗ್ಯಾರಂಟಿ ಗಳ ಬಗ್ಗೆ ಕೇಳಿರುತ್ತಿರ ,ಅದರ ಬಗ್ಗೆ ನಿಮ್ಗೆ ಎಷ್ಟ್ ಗೊತ್ತು?

 

 

ನಿಮ್ಗೆ ಗೊತ್ತಿರೋ ಹಾಗೂ ಗೊತ್ತ್ಡಿರೋ ವಿಷ್ಯದ ಬಗ್ಗೆ ನಾವ್ ನಿಮ್ಗೆ ಮಾಹಿತಿ ಕೊಡ್ತೀರಿ ಬನ್ನಿ.

 


ಈ ವಾರಂಟಿ ಮತ್ತು ಗ್ಯಾರಂಟಿಯನ್ನು ಮಾರಾಟಗಾರರು ವಸ್ತುಗಳನ್ನು ಮಾರುವ ಸಮಯದಲ್ಲಿ ಗ್ರಾಹಕರಿಗೆ ಬರಹ ರೂಪದಲ್ಲಿ ನೀಡುವ ಒಂದು ಪ್ರಮಾಣ.
ಈ ಪ್ರಮಾಣದ ಪ್ರಕಾರ ಮಾರಾಟಗಾರರು ಉತ್ಪನ್ಗಳನ್ನು ಮಾರಿದ ಒಂದು ನಿರ್ದಿಷ್ಟ ಅವಧಿಯದವರಿಗೂ ಈ ವಾರಂಟಿ ಮತ್ತು ಗ್ಯಾರಂಟಿಯನ್ನು ನೀಡುತ್ತಾರೆ ಈ ನಿರ್ದಿಷ್ಟ ಸಮಯದಲ್ಲಿ ಗ್ರಾಹಕರು ಖರೀದಿಸಿದ (ಕೊಂಡ) ವಸ್ತುಗಳು ಸರಿಯಾಗಿ ಕಾರ್ಯ ನಿರ್ವಯಿಸದೆ ಇದ್ದರೆ ಅಥವಾ ಖರೀದಿಸಿದ ಉತ್ಪನ್ನದಲ್ಲಿ ದೋಷಗಳು(ಕುಂದು ಕೊರತೆ ) ಕಂಡು ಬಂದರೆ ಗ್ರಾಹಕರು ಈ ವಾರಂಟಿ ಮತ್ತು ಗ್ಯಾರಂಟಿಯ ಮೊರೆ ಹೋಗಬಹುದು ಮಾರಾಟಗಾರರು ಆ ವಸ್ತುಗಳ ಬದಲಿಗೆ ಹೊಸ ವಸ್ತುವನ್ನು ನೀಡುತ್ತಾರೆ ಇಲ್ಲವಾದರೆ ಆ ವಸ್ತುಗಳ ಕುಂದು ಕೊರತೆಗಳನ್ನು ಸರಿಮಾಡಿಕೊಡುತ್ತಾರೆ.

ವಾರಂಟಿ ಮತ್ತು ಗ್ಯಾರಂಟಿಗಳ ನಡುವಿನ ವ್ಯತ್ಯಾಸದ ಬಗ್ಗೆ ತಿಳ್ದ್ಕೊಳಿ.

1.ಗ್ಯಾರಂಟಿ :

ಗ್ರಾಹಕರು ಖರೀದಿಸಿದ (ಕೊಂಡ) ವಸ್ತುಗಳು ಸರಿಯಾಗಿ ಕಾರ್ಯ ನಿರ್ವಯಿಸದೆ ಇದ್ದರೆ ಅಥವಾ ಖರೀದಿಸಿದ ಉತ್ಪನ್ನದಲ್ಲಿ ದೋಷಗಳು(ಕುಂದು ಕೊರತೆ ) ಕಂಡು ಬಂದರೆ ಅಥವಾ ಹೇಳಿದ ಗುಣಮಟ್ಟಕ್ಕಿಂತ ಕಡಿಮೆ ಇದ್ದರೆ ಮಾರಾಟಗಾರರು ಉತ್ಪನ್ಗಳನ್ನು ರಿಪೇರ್ ಮಾಡಿಕೊಡುತ್ತಾರೆ,ಉತ್ಪನ್ಗಳನ್ನು ಬದಲಿಸಲಾಯಿಸಿಕೊಡುತ್ತಾರೆ ಅಥವಾ ಹಣವನ್ನು ಮರುಪಾವತಿಸಲಾಗುತ್ತದೆ.

ವಾರಂಟಿ :

ಬರವಣಿಗೆ ಮೂಲಕ ನೀಡುವ ಭರವಸೆಯಾಗಿದ್ದು, ಉತ್ಪನ್ನಗಳ ಬಗ್ಗೆ ನಿರ್ದಿಷ್ಟವಾದ ಮಾಹಿತಿ ನೀಡಲಾಗುತ್ತದೆ
, ಉತ್ಪನ್ನದಲ್ಲಿ ದೋಷಗಳು ಕಂಡು ಬಂದರೆ ಅದನ್ನು ಸರಿಪಡಿಸಲಾಗುವುದು ಅಥವಾ ಬದಲಿಸಲಾಗುತ್ತದೆ.

2.ಗ್ಯಾರಂಟಿ:

ಮಾರಾಟಗಾರರು ಗ್ರಾಹಕರಿಗೆ ನೀಡುವ ಬದ್ಧತೆ(ಕಮಿಟ್ಮೆಂಟ್)

 

 

ವಾರಂಟಿ :

ಮಾರಾಟಗಾರರು ಗ್ರಾಹಕರಿಗೆ ನೀಡುವ ಭರವಸೆ(ಅಶ್ಯೂರೆನ್ಸ್)

3.ಗ್ಯಾರಂಟಿ:

ವ್ಯಾಲಿಡಿಟಿ ಅವಧಿ ಬರವಣಿಗೆ ಅಥವಾ ಮೌಖಿಕ ರೂಪದಲ್ಲಿ ಇರುತ್ತದೆ.

ವಾರಂಟಿ :

ವ್ಯಾಲಿಡಿಟಿ ಅವಧಿ ಬರವಣಿಗೆ ರೂಪದಲ್ಲಿ ಇರುತ್ತದೆ.

4.ಗ್ಯಾರಂಟಿ:

ಗ್ರಾಹಕರು ಖರೀದಿಸಿದ (ಕೊಂಡ) ವಸ್ತುಗಳು ಸರಿಯಾಗಿ ಕಾರ್ಯ ನಿರ್ವಯಿಸದೆ ಇದ್ದರೆ ಅಥವಾ ಖರೀದಿಸಿದ ಉತ್ಪನ್ನದಲ್ಲಿ ದೋಷಗಳು(ಕುಂದು ಕೊರತೆ ) ಕಂಡು ಬಂದರೆ ಅಥವಾ ಹೇಳಿದ ಗುಣಮಟ್ಟಕ್ಕಿಂತ ಕಡಿಮೆ ಇದ್ದರೆ ಮಾರಾಟಗಾರರು ಉತ್ಪನ್ಗಳನ್ನು ರಿಪೇರ್ ಮಾಡಿಕೊಡುತ್ತಾರೆ,ಉತ್ಪನ್ಗಳನ್ನು ಬದಲಿಸಲಾಯಿಸಿಕೊಡುತ್ತಾರೆ ಇದಕ್ಕಾಗಿ ಗ್ರಾಹಕರು ಯಾವುದೇ ಹಣ ನೀಡುವ ಅವಶ್ಯಕತೆ ಇಲ್ಲ.

 

 

ವಾರಂಟಿ:

ಗ್ರಾಹಕರು ಖರೀದಿಸಿದ (ಕೊಂಡ) ವಸ್ತುಗಳು ಸರಿಯಾಗಿ ಕಾರ್ಯ ನಿರ್ವಯಿಸದೆ ಇದ್ದರೆ ಅಥವಾ ಖರೀದಿಸಿದ ಉತ್ಪನ್ನದಲ್ಲಿ ದೋಷಗಳು(ಕುಂದು ಕೊರತೆ ) ಕಂಡು ಬಂದರೆ ಅಥವಾ ಹೇಳಿದ ಗುಣಮಟ್ಟಕ್ಕಿಂತ ಕಡಿಮೆ ಇದ್ದರೆ ಮಾರಾಟಗಾರರು ಉತ್ಪನ್ಗಳನ್ನು ರಿಪೇರ್ ಮಾಡಿಕೊಡುತ್ತಾರೆ, ಈ ರಿಪೇರ್ ಗೆ ಸಂಬಂಧಿಸಿದ ಖರ್ಚನ್ನು ಗ್ರಾಹಕರೇ ನೀಡಬೇಕು.

5.ಗ್ಯಾರಂಟಿ:

ಗ್ಯಾರಂಟಿ ಅವಧಿ ಕಡಿಮೆ ನೀಡಲಾಗುತ್ತದೆ.

 

ವಾರಂಟಿ:

ಗ್ಯಾರಂಟಿಗೆ ಹೋಲಿಸಿದರೆ ವಾರಂಟಿ ಅವಧಿ ಜಾಸ್ತಿ ಇರುತ್ತದೆ .

6. ಗ್ಯಾರಂಟಿ:

ಗ್ರಾಹಕರು ಕೊಂಡ ವಸ್ತುವಿನಲ್ಲಿ ಏನಾದರೂ ದೋಷಗಳು ಕಂಡು ಬಂದರೆ ಹಣವನ್ನು ಮರುಪಾವತಿಸಲಾಗುತ್ತದೆ.

ವಾರಂಟಿ:

ಯಾವುದೇ ಕಾರಣಕ್ಕೂ ಹಣ ಮರುಪಾವತಿ ಮಾಡುವುದಿಲ್ಲ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top