fbpx
ಮನೋರಂಜನೆ

‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮಕ್ಕೆ ಹಂಸಲೇಖ ಯಾಕೆ ಹೋಗಲ್ಲ..ರಹಸ್ಯ ಬಹಿರಂಗ.

‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮಕ್ಕೆ ಹಂಸಲೇಖ ಯಾಕೆ ಹೋಗಲ್ಲ..ರಹಸ್ಯ ಬಹಿರಂಗ.

 

 

ಮನಮುಟ್ಟುವ ಸಂಗೀತ, ರಸವತ್ತಾದ ಸಾಹಿತ್ಯದ ಮೂಲಕ ಪ್ರೇಮಿಗಳ ಪಾಲಿಗೆ ಲವ್ ಗುರು ಆಗಿರುವ ನಾದ ಬ್ರಹ್ಮ ಹಂಸಲೇಖ ಅವರ ಸಂಗೀತಕ್ಕೆ ಪರವಶರಾಗದವರಿಲ್ಲ. ಸುಮಾರು 35 ವರ್ಷಗಳಿಂದ ಸತತವಾಗಿ ತಮ್ಮನ್ನು ತಾವು ಸಾಹಿತ್ಯ-ಸಂಗೀತದಲ್ಲಿ ತೊಡಗಿಸಿಕೊಂಡಿರೋ ನಮ್ಮ ಹಂಸಲೇಖ ಅವರು ಕನ್ನಡ ಜನಪ್ರಿಯ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮಕ್ಕೆ ಬರಬೇಕೆಂಬುದು ವೀಕ್ಷಕರ ಬಯಕೆಯಾಗಿತ್ತು ಆದರೆ ಹಂಸಲೇಖರವರು ಯಾಕೆ ‘ವೀಕೆಂಡ್ ವಿಥ್ ರಮೇಶ್’ ಗೆ ಹೋಗಲ್ಲ?

 

 

ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸಾಧಕರನ್ನ ಅಥಿತಿಗಳಾಗಿ ಕರೆಸಿ ಅವರ ಬದಿಕಿನ ನೋವು ನಲಿವುಗಳ ಚಿತ್ರಣವನ್ನು ತೋರಿಸುವ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮಕ್ಕೆ ಹಂಸಲೇಖರವರು ಇನ್ನು ಬಂದಿಲ್ಲ, ಕಾರ್ಯಕ್ರಮ ಮೂರು ಸೀಸನ್ ಗಳು ಕಳೆದಿದ್ದರು ಹಂಸಲೇಖ ಅವರು ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮಕ್ಕೆ ಯಾಕೆ ಹೋಗಿಲ್ಲ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲಿ ಮೂಡುತ್ತದೆ. ಮುಂದೆ ಓದಿ

 

 

‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮಕ್ಕೆ ಹೋಗದಿರುವವರ ಬಗ್ಗೆ ಹಂಸಲೇಖರವರು ಯಾವಾಗಲೂ ಎಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗೋಕೆ ಇಷ್ಟ ಪಡ್ತಾರಂತೆ, ಅವರು ಕುಶಿಯಾಗಿರೋದನ್ನ ಮಾತ್ರ ಜನರು ನೋಡಬೇಕು ಅಂತ ಅವರು ಇಷ್ಟ ಪಡ್ತಾರಂತೆ,, ಅವರ ದುಃಖಗಳನ್ನ ಜನಗಳ ಮುಂದೆ ತೋರಿಸಿಕೊಳ್ಳೋಕೆ ಅವರಿಗೆ ಇಷ್ಟವಿಲ್ಲವಂತೆ,, “ನಾನು ನೋವಿನಲ್ಲಿರುವವರಿಗೆ ಧೈರ್ಯ ಹೇಳೋಕೆ ಇಷ್ಟ ಪಡ್ತೀನಿ ಅದನ್ನ ಬಿಟ್ಟು ನನ್ನ ನೋವುಗಳನ್ನು ಹೇಳಿಕೊಂಡು ಜನರನ್ನು ಬೇಸರಗೊಳಿಸುವುದು ನನಗೆ ಇಷ್ಟವಿಲ್ಲಾ ಹಾಗಾಗಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಅನೇಕ ಬಾರಿ ನನ್ನನ್ನು ಕರೆದಿದ್ದರೂ ನಾನು ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮಕ್ಕೆ ಹೋಗಿಲ್ಲ” ಎಂದು ಹಂಸಲೇಖರವರು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top