fbpx
ಆರೋಗ್ಯ

ಆಣಿ ಕಾಲು ಸಮಸ್ಯೆ ಜಾಸ್ತಿ ಆಗಿ ನಡೆಯೋಕೆ ಕಷ್ಟ ಆಗ್ತಿದೆ ಅನ್ನೋರು ಮನೇಲಿ ಸಿಗೋ ವಸ್ತುಗಳು ಬಳ್ಸಿ ಫಟ್ ಅಂತಾ ಪರಿಹಾರ ಮಾಡ್ಕೋಬಹುದು

ಆಣಿ ಕಾಲು ಸಮಸ್ಯೆ ಜಾಸ್ತಿ ಆಗಿ ನಡೆಯೋಕೆ ಕಷ್ಟ ಆಗ್ತಿದೆ ಅನ್ನೋರು ಮನೇಲಿ ಸಿಗೋ ವಸ್ತುಗಳು ಬಳ್ಸಿ ಫಟ್ ಅಂತಾ ಪರಿಹಾರ ಮಾಡ್ಕೋಬಹುದು

 

 

ಕಲ್ಲಿನಿಂದ ಮೃದುವಾಗಿ ಉಜ್ಜಿ

 

 

10 ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ಆರಾಮವಾಗಿ ಬಿಸಿ ನೀರಿನಲ್ಲಿ ನೆನೆಸಿ ಪಾಮಾಸ್ ಕಲ್ಲಿನಿಂದ ಉಜ್ಜಿ ,ಆ ನಂತರ ಒರೆಸಿ ನಾಲ್ಕೈದು ಹನಿ ಹರಳೆಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಆಣಿ ಕಾಲು ಗಳ ಮೇಲೆ ಹಚ್ಚಿ ಆನಂತರ ಬೆಳಗ್ಗೆ ತಣ್ಣೀರಿನಲ್ಲಿ ಕಾಲು ತೊಳೆದುಕೊಳ್ಳಿ .

ಗೊಂಡೇ ಸೊಪ್ಪು

 

ಚೇಳಿನ ಸೊಪ್ಪು , ಗೊಂಡೇ ಸೊಪ್ಪು ನುಣ್ಣಗೆ ನೀರು ಹಾಕದೆ ರುಬ್ಬಿ ರಾತ್ರಿ ಇಡೀ ಪಟ್ಟು ಹಾಕಿ , ಬಟ್ಟೆಯಿಂದ ಸುತ್ತಿಬಿಡಿ ಹೀಗೆ ಕೆಲದಿನಗಳು ಮುಂದುವರೆದರೆ ಆಣಿ ಕಾಲು ಸಮಸ್ಯೆ ದೂರವಾಗುತ್ತದೆ.

ಈರುಳ್ಳಿ

 

ಈರುಳ್ಳಿಯನ್ನು ನುಣ್ಣಗೆ ರುಬ್ಬಿ ಆಣಿ ಕಾಲಿನ ಮೇಲೆ ಹಚ್ಚಿ ಹಾಗೆ ಬಿಟ್ಟು ಮಲಗಿ ಬೆಳಗ್ಗೆ ತಣ್ಣೀರಿನಲ್ಲಿ ಕಾಲು ತೊಳೆದುಕೊಳ್ಳಿ .

ಅಡುಗೆ ಸೋಡಾ

 

 

ಎರಡರಿಂದ ಮೂರು ಚಮಚ ಅಡುಗೆ ಸೋಡಾವನ್ನು ಒಂದು ಟಬ್ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಕಾಲನ್ನು 5 ರಿಂದ 10 ನಿಮಿಷ ನೆನೆಹಾಕಿ , ಆ ನಂತರ ಒರೆಸಿ ಒಂದು ಚಮಚ
ಅಡುಗೆ ಸೋಡಾಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ಪೇಸ್ಟ್ ಮಾಡಿಕೊಂಡು ಆಣಿ ಕಾಲಿನ ಮೇಲೆ ಹಚ್ಚಿ ಹಾಗೆ ಬಿಟ್ಟು ಮಲಗಿ ಬೆಳಗ್ಗೆ ತಣ್ಣೀರಿನಲ್ಲಿ ಕಾಲು ತೊಳೆದುಕೊಳ್ಳಿ .

ಲವಂಗ ಮತ್ತು ನಿಂಬೆ

 

 

ಎರಡು ಮೂರು ಲವಂಗ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಆನಂತರ ಇದಕ್ಕೆ ನಿಂಬೆ ರಸ ಬೆರೆಸಿ ಈ ಮಿಶ್ರಣವನ್ನು ಹತ್ತಿಯಲ್ಲಿ ಅದ್ದಿ ಆಣಿ ಕಾಲಿನ ಮೇಲೆ ಹಚ್ಚಿ ಹಾಗೆ ಬಿಟ್ಟು ಮಲಗಿ ಬೆಳಗ್ಗೆ ತಣ್ಣೀರಿನಲ್ಲಿ ಕಾಲು ತೊಳೆದುಕೊಳ್ಳಿ .

ಬೆಳ್ಳುಳ್ಳಿ :

 

ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಆಣಿ ಕಾಲಿನ ಮೇಲೆ ಹಚ್ಚಿ ಹೀಗೆ ಕೆಲವು ದಿನ ಮುಂದುವರಿಸಿ .

ಹಸಿ ಪರಂಗಿ

ಹಸಿ ಪರಂಗಿಯನ್ನು ರುಬ್ಬಿ ಆನಂತರ ಈ ಪೇಸ್ಟ್ ಅನ್ನು ಆಣಿ ಕಾಲಿನ ಮೇಲೆ ಹಚ್ಚಿ ಬಟ್ಟೆಯಿಂದ ಸುತ್ತಿ ಕೆಲ ಗಂಟೆಗಳು ಬಿಟ್ಟು ತೊಳೆದುಕೊಳ್ಳಿ .

ಅರಿಶಿನ

 

ಅರಿಶಿನಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ , ಪೇಸ್ಟ್ ಮಾಡಿಕೊಂಡು ಆಣಿ ಕಾಲಿನ ಮೇಲೆ ಹಚ್ಚಿ ಬಟ್ಟೆಯಿಂದ ಸುತ್ತಿ ಕೆಲ ಗಂಟೆಗಳು ಬಿಟ್ಟು ತೊಳೆದುಕೊಳ್ಳಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top