fbpx
ದೇವರು

ದಾನ ಶೂರ ಕರ್ಣನ ಜನ್ಮ ರಹಸ್ಯ.

ದಾನ ಶೂರ ಕರ್ಣನ ಜನ್ಮ ರಹಸ್ಯ.

ಯಾದವರಲ್ಲಿ ಶೂರಸೇನ ರಾಜನ ಮಗನು ವಸುದೇವ ಹಾಗೂ ಪೃಥಾ  ಎಂಬ ಮಗಳೂ ಇದ್ದರು,ವಸುದೇವನ ಮಗನು ಶ್ರೀ ಕೃಷ್ಣ, ಕುಂತಿಭೋಜನು  ಶೂರಸೇನನ ಗೆಳೆಯನಾಗಿದ್ದನು.ಕುಂತಿಭೋಜನು ಸಾಕಿದ್ದರಿಂದ ಪೃಥಾಳನ್ನು ಕುಂತಿ ಎಂದೂ ಸಹ ಕರೆದರು.ಅವಳು ಸುಂದರಿ ಹಾಗೂ ಗುಣವತಿಯೂ ಸಹ ಆಗಿದ್ದಳು.

ಪಾಂಡು ರಾಜನೊಂದಿಗೆ ಕುಂತಿಯ ಮದುವೆಯಾಗುವುದಕ್ಕಿಂತ ಮೊದಲು ಒಮ್ಮೆ ದುರ್ವಾಸ ಮಹರ್ಷಿಗಳು ಕುಂತಿಭೋಜನನ  ಅರಮನೆಗೆ ಬಂದರು.ಅವರ ಅತಿಥ್ಯಕ್ಕೆ ರಾಜನು ಕುಂತಿಯನ್ನು ನಿಯಮಿಸಿದನು.

ಅವರೂ ಹೋಗುವಾಗ ಐದು ಮಂತ್ರಗಳನ್ನು ಉಪದೇಶ ಮಾಡಿದರು.ಯಾರನ್ನೇ ಆಗಲಿ ನೆನಪಿಸಿಕೊಂಡರೆ ಆ ದೇವತೆಯಿಂದ ನಿನಗೆ ಮಕ್ಕಳು ಸಿಗುತ್ತಾರೆ ಎಂದು ದುರ್ವಾಸರು ಹೇಳಿ ಹೋದರು.

ಒಮ್ಮೆ ಕುಂತಿಯು ಸುಪ್ರಭಾತ ಕಾಲದಲ್ಲಿ ಸೂರ್ಯನನ್ನು ಕಂಡು ಬಾಲ್ಯ ಸಹಜದಿಂದ ಸೂರ್ಯನನ್ನು ನೆನಪಿಸಿದಳು.ಆಗ ಪ್ರತ್ಯಕ್ಷನಾದ ಸೂರ್ಯನು ಕವಚ ಕುಂಡಲಗಳಿಂದ ಅಲಂಕೃತ ಸುಂದರ ಶಿಶುವನ್ನು ನೀಡಿದನು.

ಕುಂತಿ ಅವನನ್ನು ಸ್ವೀಕರಿಸಿದ ನಂತರ ತಾನಿನ್ನು  ಕುಮಾರಿಯಾಗಿದ್ದು ಈ ಮಗುವನ್ನು ಏನು ಮಾಡಬೇಕೆಂದು ತಿಳಿಯದೇ ಅಲ್ಲಿ ಹರಿಯುತ್ತಿದ್ದ ಗಂಗೆಯಲ್ಲಿ ಪೆಟ್ಟಿಗೆಯಲ್ಲಿ  ಹಾಕಿ ನೀರಿನಲ್ಲಿ ತೇಲಿ ಬಿಟ್ಟಳು.

ಸೂರ್ಯನನ್ನು ಕುರಿತು ಭಗವಂತ ನೀನೇ ಈ ಮಗುವನ್ನು ಕಾಪಾಡು ಎಂದು ಬೇಡಿಕೊಂಡಳು.ಅವಳಿಗೆ ಸುಂದರವಾದ ಮಗುವನ್ನು ಬಿಟ್ಟು ಬಂದಿದ್ದರಿಂದ ಅತ್ಯಂತ ದುಃಖವಾಯಿತು. ಆದರೆ ಮದುವೆಗೆ ಮೊದಲೇ ಮಗುವನ್ನು ಹೊಂದುವುದು ಭೀತಿ ತಂದಿತ್ತು.

ಹೀಗೆ ಗಂಗೆಯಲ್ಲಿ ತೇಲುತ್ತ ಬಂದ ಮಗು ಅಧಿರಥನೆಂಬ ಸುತನ ಕೈಗೆ ಸಿಕ್ಕಿತು.ಅವನಿಗೆ ಮಕ್ಕಳೇ ಇರಲಿಲ್ಲ. ಅವನು ಪ್ರೀತಿಯಿಂದ ಸಾಕಿದನು.ಹೀಗೆ ಕರ್ಣನು ಸೂತಪುತ್ರನೆಂದು ಬೆಳೆಯತೊಡಗಿದನು.ಅವನ ವೈಭವವನ್ನು ಕಂಡು ವಸುಷೇಣ ಎಂದು ಹೆಸರಿಟ್ಟನು.

ಕರ್ಣ ಕುಂಡಲಾಗಳಿಂದಾಗಿ ಎಲ್ಲರೂ ಅವನನ್ನು ಕರ್ಣ ಎಂದು ಕರೆದರು.ಇವನನ್ನು ರಾಧೆಯು ಸಾಕಿದ್ದಳು ಅದರಿಂದಾಗಿ ರಾಧೇಯನೆನಿಸಿದನು.ರಾಧಾ ಆದಿರಥನ  ಪತ್ನಿ.

ಕರ್ಣನು ಪ್ರತಿದಿನವೂ ಸೂರ್ಯನ ಆರಾಧನೆ ಮಾಡುತ್ತಿದ್ದನು.ಧನುರ್ವಿದ್ಯೆಯನ್ನು ಕಲಿತನು. ಬಿಲ್ವ ವಿದ್ಯೆಯಲ್ಲಿ ಹೆಚ್ಚಿನ ಪರಿಣಿತಿ ಪಡೆಯಲು ಪರಶುರಾಮರಲ್ಲಿಗೆ ಹೋದನು .ಅವರು  ಅನೇಕ ರೀತಿಯಲ್ಲಿ  ವಿವಿಧ ವಿದ್ಯೆಗಳನ್ನು ಕಲಿಸಿದರು.ಈ ರೀತಿಯಲ್ಲಿ ಕರ್ಣನು ಸಹ ಧೀರ ವೀರನಾಗಿ ಬುದ್ಧಿವಂತನಾಗಿ ಬೆಳೆಯತೊಡಗಿದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top